ಸ್ವಾಮೀಜಿಗಳು ಫೆ.1ರಂದು ಹುಬ್ಬಳ್ಳಿ ಇಲ್ಲವೆ ಬೆಂಗಳೂರಲ್ಲಿ ಸಭೆ ಆಯೋಜಿಸಿದ್ದಲ್ಲಿ ಚರ್ಚೆಗೆ ಬರಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ.
Advertisement
ದಾವಣಗೆರೆಯ ಅಭಿನವ ರೇಣುಕ ಮಂದಿರದಲ್ಲಿ ಬುಧವಾರ ಸಭೆ ನಡೆಸಿದ ಗುರು-ವಿರಕ್ತರು ಚರ್ಚಾಸಭೆ ಆಹ್ವಾನ ಸ್ವೀಕರಿಸಿದ್ದಲ್ಲದೆ, ಚರ್ಚಾಸಭೆಯಲ್ಲಿ ಭಾಗವಹಿಸಲು 11 ನಿರ್ಣಯ ಕೈಗೊಂಡರು.
Related Articles
Advertisement
ಲಿಂಗಾಯತ ಪದಕ್ಕೆ ಸಂವಿಧಾನ ಬದ್ಧ ಪ್ರತ್ಯೇಕ ಮಾನ್ಯತೆಗೆ ಯಾವುದಾದರೂ ಅಧಿಕೃತ ಒಪ್ಪಿಗೆ ದೊರೆತಿದ್ದರೆ ಅದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಸಭೆ ಕೈಗೊಂಡಿದೆ ಎಂದು ತಿಳಿಸಿದರು.
ಸರ್ಕಾರ ಇಲ್ಲವೇ ಯಾವುದೇ ಪಕ್ಷವಾಗಲಿ ವೀರಶೈವ ಲಿಂಗಾಯತ ಸಮುದಾಯದ ವಿಘಟನೆಗೆ ಕಾರಣವಾದವರ ವಿರುದ್ಧ ಮುಂದಿನ ಚುನಾವಣೆಯಲ್ಲಿ ಧರ್ಮಯುದ್ಧ ಸಾರುವ, ಶ್ರೀ ಮಧ್ವಿàರಶೈವ ಶಿವಯೋಗ ಮಂದಿರ ಧರ್ಮದರ್ಶಿ ಮಂಡಳಿಯಲ್ಲಿ ಇದ್ದುಕೊಂಡು ಕೇವಲ ಲಿಂಗಾಯತ ಪದ ಪ್ರಯೋಗ ಪ್ರತಿಪಾದಿಸುವವರ ತ್ಯಾಗಪತ್ರಕ್ಕೆ ಒತ್ತಾಯಿಸುವ ನಿರ್ಣಯಕ್ಕೆ ಬರಲಾಗಿದೆ ಎಂದರು.
ಚರ್ಚೆಯಿಂದ ಯಾವುದೇ ಫಲ ಇಲ್ಲ ಎಂದು ಬಸವರಾಜ ಹೊರಟ್ಟಿಯವರೇ ಹೇಳಿದ್ದಾರೆ. ಹಾಗಾಗಿ ಫೆ.1ರಂದು ಚರ್ಚಾ ಸಭೆ ನಡೆಯುವ ಮುನ್ನವೇ ಹೊರಟ್ಟಿಯವರು ರಾಜ್ಯ ಅಲ್ಪ ಸಂಖ್ಯಾತ ಆಯೋಗ ನೇಮಿಸಿರುವ ತಜ್ಞರ ಸಮಿತಿಯ ಕಾರ್ಯ ಕಲಾಪ ತಡೆ ಹಿಡಿದರೆ ಮಾತ್ರವೇ ಚರ್ಚಾಸಭೆಯಲ್ಲಿ ಭಾಗವಹಿಸುವ ನಿರ್ಣಯವನ್ನು ಸಭೆ ಕೈಗೊಂಡಿದೆ ಎಂದು ತಿಳಿಸಿದರು.
ಕಾಶಿ ಜಗದ್ಗುರು ಡಾ|ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಜಗದ್ಗುರು ಡಾ|ಚನ್ನಸಿದಟಛಿರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಂಭಾಪುರಿ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಜಗದ್ಗುರು ಶ್ರೀ ಸಿದಟಛಿಲಿಂಗ ರಾಜ ದೇಶಿಕೇಂದ್ರ ಸ್ವಾಮೀಜಿ, ಹೊಸಪೇಟೆಯ ಜಗದ್ಗುರು ಡಾ| ಸಂಗನಬಸವ ಸ್ವಾಮೀಜಿ, ಬಬಲೇಶ್ವರ, ಮನಗೂಳಿ, ಕೊಟ್ಟೂರು, ಹರಪನಹಳ್ಳಿ, ಹೊಟ್ಯಾಪುರ, ರಾಂಪುರ, ರಟ್ಟಿಹಳ್ಳಿ, ಬೆಂಗಳೂರು ಸರ್ಪಭೂಷಣ ಮಠ, ಮಧ್ಯ ಪ್ರದೇಶದ ಪಾಂಡೂರು, ಶಿವಗಂಗಾ, ಅಕ್ಕಲಕೋಟೆ, ಬಳಕಿ, ಅಮೀನಗಡ, ಬೀರೂರು, ಹಣ್ಣೆ,ದಿಂಡದೂರು ಶ್ರೀಗಳು, ನ್ಯಾಯವಾದಿಗಳು, ದೇವರಮನೆ ಶಿವಕುಮಾರ್, ಅಜ್ಜಂಪುರಶೆಟ್ರಾ ಮೃತ್ಯುಂಜಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಶಿಫಾರಸು ಮಾಡಿದರೆ ಹೋರಾಟ’ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದಲ್ಲಿ ಅದನ್ನು ವಿರೋಧಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಎಚ್ಚರಿಕೆ ನೀಡಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ಉದ್ಭವಿಸಿರುವ ವೀರಶೈವ- ಲಿಂಗಾಯತ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನು ಸಿದ್ದರಾಮಯ್ಯ ಅವರು ಕೂಡಲೇ ಉಪಶಮನ ಮಾಡಬೇಕು. ಒಂದೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದಲ್ಲಿ ಗುರು-ವಿರಕ್ತರಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಮುಂಬರುವ ಚುನಾವಣಾ ದೃಷ್ಟಿಯಿಂದ ಅಖಂಡ ವೀರಶೈವ ಸಮಾಜವನ್ನು ಒಡೆದು ಅದರ ಪ್ರಯೋಜನ ಪಡೆಯಲು ಇಲ್ಲಸಲ್ಲದ ನಿರ್ಧಾರಕ್ಕೆ ಸರ್ಕಾರ ಬಂದಲ್ಲಿ ಗುರು-ವಿರಕ್ತರು ತೀವ್ರ ವಿರೋಧಿಸಲಿದ್ದಾರೆ ಎಂದರು.