Advertisement

ನಗರದ ಶಾಲೆಗಳಲ್ಲಿ ಹಾರಾಡಲಿವೆ ಬೀಜ ಧ್ವಜ !

08:14 PM Oct 30, 2019 | Team Udayavani |

ಮಹಾನಗರ: ಪ್ಲಾಸ್ಟಿಕ್‌ ಬಾವುಟಗಳನ್ನು ತ್ಯಜಿಸಿ ಬಟ್ಟೆಯ ಬಾವುಟಗಳನ್ನು ಹಿಡಿದಿದ್ದಾಯಿತು. ಇದೀಗ ಈ ರಾಜ್ಯೋತ್ಸವ ಸಂದರ್ಭ ಮಂಗಳೂರಿನ ಶಾಲೆಗಳಲ್ಲಿ ಬೀಜ ಬಾವುಟ ಗಳು ಹಾರಾ ಡಲಿವೆ. ವಿಶೇಷವೆಂದರೆ, ಬಾವುಟಗಳೇ ಸುಂದರ ಸಸ್ಯಗಳಾಗಿ ರೂಪು ತಳೆದು ಕಡಲನಾಡಿನ ಜನತೆಗೆ ಉಸಿರಾಟಕ್ಕೆ ಶುದ್ಧ ವಾಯು, ಸೇವನೆಗೆ ಆಹಾರ ಒದಗಿಸಲಿವೆ!

Advertisement

ಪರಿಸರಸ್ನೇಹಿ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ನಗರದ ಇಕೋ ಫ್ರೆಂಡ್ಸ್‌ ತಂಡವು ಈ ಕರ್ನಾಟಕ ರಾಜ್ಯೋತ್ಸವಕ್ಕೆ ಬೀಜ ಬಾವುಟಗಳನ್ನು ತಯಾರಿಸಿದ್ದು, ಇದೇ ಮೊದಲ ಬಾರಿಗೆ ನಗರದ ಶಾಲೆಗಳಲ್ಲಿ ಬೀಜ ಬಾವುಟವನ್ನು ಅರಳಿಸಲು ಪ್ರೇರಣೆ ನೀಡಿದೆ.

ಬಾವುಟ ತಯಾರಿ
ಕನ್ನಡ ಬಾವುಟದ ಬಣ್ಣವಾದ ಕೆಂಪು, ಹಳದಿ ಬಣ್ಣದ ಪೇಪರ್‌ಗಳಲ್ಲಿ ಈ ಬಾವುಟಗಳನ್ನು ತಯಾರಿಸಲಾಗಿದೆ. ಬಾವುಟವು 3 ಇಂಚು ಉದ್ದ ಮತ್ತು 2 ಇಂಚು ಅಗಲ ಇರುತ್ತದೆ. ಮುಂದಿನ ಭಾಗದಲ್ಲಿ ಎರಡು ಬಣ್ಣದ ಪೇಪರ್‌ಗಳು, ನಡುವೆ ತರಕಾರಿ ಬೀಜಗಳು, ಹಿಂದಿನ ಭಾಗದಲ್ಲಿ ಬಿಳಿ ಬಣ್ಣದ ಬಣ್ಣದ ಪೇಪರ್‌ಗಳನ್ನು ಅಂಟಿಸಿ ಅದಕ್ಕೆ ಪಿನ್‌ ಮಾಡಲಾಗಿದೆ. ಪೇಪರ್‌ಗಳು ಮಣ್ಣಿನಲ್ಲಿ ಸುಲಭವಾಗಿ ಕರಗುವ ಗುಣ ಹೊಂದಿರುವುದರಿಂದ ಮಕ್ಕಳು ಬಾವುಟ ಬಳಕೆ ಮಾಡಿದ ನಂತರ ಈ ಪೇಪರ್‌ಗಳನ್ನು ಪಾಟ್‌ ಅಥವಾ ಮಣ್ಣಿನಲ್ಲಿ ನೇರವಾಗಿ ಹಾಕಬಹುದು. ಕೆಲವು ದಿನಗಳ ಅನಂತರ ಈ ಪೇಪರ್‌ ಮಣ್ಣಿನಲ್ಲಿ ಕರಗಿ ಬೀಜ ಮೊಳಕೆ ಯೊಡೆಯಲು ಆರಂಭಿಸುತ್ತದೆ. ಪ್ರತಿ ದಿನ ನೀರು ಹಾಕುತ್ತಿರಬೇಕು. ಕ್ರಮೇಣ ಮೊಳಕೆಯೊಡೆದ ಬೀಜ ಗಿಡವಾಗಿ ರೂಪು ತಳೆದು ಫಲಭರಿತವಾಗುತ್ತದೆ ಎಂಬುದು ತಂಡದ ಯೋಜನೆ.

ತರಕಾರಿ ಬೀಜಗಳು
ಈ ಬಾರಿ ತರಕಾರಿ ಬೀಜಗಳನ್ನೇ ಬಾವುಟದಲ್ಲಿ ಇಡಲಾಗಿದೆ. ಟೊಮೇ ಟೊ, ಬೆಂಡೆ, ಸೌತೆ ಮತ್ತು ಹರಿವೆ ಬೀಜ ಗಳನ್ನು ಬಾವುಟದೊಳಗಿಟ್ಟು ಬಾವುಟ ತಯಾರಿಸಲಾಗಿದೆ. ಈ ಬೀಜಗಳು ಬಹುಬೇಗನೆ ಮೊಳಕೆ ಯೊಡೆಯು ವುದರಿಂದ ಮಕ್ಕಳಿಗೂ ಇಷ್ಟವಾಗಬಹುದು ಎನ್ನುವ ಉದ್ದೇಶ ತಂಡದ್ದು.

ಪ್ಲಾಸ್ಟಿಕ್‌ ತ್ಯಜಿಸಿ ಪರಿಸರ ಉಳಿಸಿ
ರಸ್ತೆ ಬದಿಗಳಲ್ಲಿ, ಕೆಲ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಾವುಟಗಳನ್ನು ಮಾರಾಟ ಮಾಡುವುದರಿಂದ ಅದು ರಸ್ತೆಯಲ್ಲಿ ಬಿದ್ದು ಅಥವಾ ಕಸದ ತೊಟ್ಟಿಗಳ ಮೂಲಕ ಭೂಮಿ ಒಡಲನ್ನು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ. ಇದರಿಂದ ಜೀವಸಂಕುಲದ ಮೇಲೆಯೂ ಪರಿಣಾಮ ಉಂಟಾಗುತ್ತದೆ. ಜೈವಿಕ ಕಾಗದ ಬೀಜ ಬಾವುಟಗಳು ಪರಿಸರಕ್ಕೆ ಉತ್ತಮ ಎಂಬ ಉದ್ದೇಶದಿಂದ ಈ ಬೀಜ ಬಾವುಟ ತಯಾರಿಸಲಾಗಿದೆ.

Advertisement

5 ಶಾಲೆ; 500 ಬೀಜ ಬಾವುಟ ಹಾರಾಟ
ಪ್ರಾಯೋಗಿಕವಾಗಿ ಈ ವರ್ಷ ಬೀಜದ ಬಾವುಟಗಳನ್ನು ತಯಾರಿಸಲಾಗಿದ್ದು, ನಗರದ 5 ಶಾಲೆಗಳ ಮಕ್ಕಳಿಗೆ ಗುರುವಾರ ಬಾವುಟಗಳನ್ನು ಉಚಿತವಾಗಿ ನೀಡಲಾಗುತ್ತದೆ. ಉರ್ವ ಕೆನರಾ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಉರ್ವ ಸರಕಾರಿ ಶಾಲೆ, ಡೊಂಗರಕೇರಿ ಕೆನರಾ ಶಾಲೆ, ಕದ್ರಿ ಸರಕಾರಿ ಶಾಲೆಗಳಲ್ಲಿ ನ. 1ರ ಕರ್ನಾಟಕ ರಾಜ್ಯೋತ್ಸವದಂದು ಈ ಬಾವುಟಗಳು ಹಾರಾಡಲಿವೆ. ಈಗಾಗಲೇ 600 ಬಾವುಟಗಳನ್ನು ತಯಾರಿಸಲಾಗಿದ್ದು, ಈ ಪೈಕಿ 500 ಬಾವುಟಗಳನ್ನು ತಲಾ 100ರಂತೆ 5 ಶಾಲೆಗಳಿಗೆ ನೀಡಲಾಗುತ್ತದೆ. ಉಳಿದ 100 ಬಾವುಟಗಳನ್ನು ಮಣ್ಣಗುಡ್ಡೆ ಸಾವಯವ ಸಂತೆಯಲ್ಲಿ ಇಟ್ಟು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುವುದು ಎನ್ನುತ್ತಾರೆ ತಂಡದ ಸದಸ್ಯರು.

ಪರಿಸರ ಸ್ನೇಹಿ ಆಚರಣೆ
ಪರಿಸರಸ್ನೇಹಿ ರಾಜ್ಯೋತ್ಸವ ಆಚರಿಸುವ ಉದ್ದೇಶದಿಂದ ಬೀಜ ಬಾವುಟಗಳನ್ನು ತಯಾರಿ ಸಲಾಗಿದೆ. 500 ಬಾವುಟಗಳನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುವುದು. ಮುಂದೆ ಆ. 15ರಂದು ಶಾಲೆ ಗಳಲ್ಲೇ ಬೀಜ ಬಾವುಟ ತಯಾರಿ ಸುವಂತೆ ಪ್ರೇರೇಪಿಸುವ ಉದ್ದೇಶವಿದೆ.
– ರಾಜೇಶ್‌, ಇಕೋ ಫ್ರೆಂಡ್ಸ್‌ ಗ್ರೂಪ್‌

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next