Advertisement

ಮುಂಗಾರು ಹಂಗಾಮಿಗೆ ಅನ್ನದಾತ ಸಜ್ಜು  

07:42 PM May 26, 2021 | Team Udayavani |

ಬಾಗಲಕೋಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಳ್ಳೆಯ ಮಳೆಯನ್ನು ಆಗುವ ಸಾಧ್ಯತೆ ಇದ್ದು, ಜಿಲ್ಲೆಯಲ್ಲಿ ಒಟ್ಟು 2,65,000 ಹೆಕ್ಟೇರ್‌ ಕ್ಷೇತ್ರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ.

Advertisement

ಬಾದಾಮಿ ತಾಲೂಕಿನಲ್ಲಿ 57000 ಹೆಕ್ಟೇರ್‌, ಬಾಗಲಕೋಟೆ 29000 ಹೆಕ್ಟೇರ್‌, ಬೀಳಗಿ 24425 ಹೆಕ್ಟೇರ್‌, ಹುನಗುಂದ 42925 ಹೆಕ್ಟೇರ್‌, ಜಮಖಂಡಿ 66650 ಹೆಕ್ಟೇರ್‌ ಹಾಗೂ ಮುಧೋಳ 45000 ಹೆಕ್ಟೇರ್‌ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಏಕದಳ ಧಾನ್ಯಗಳಲ್ಲಿ ಗೋವಿನ ಜೋಳ 41700 ಹೆಕ್ಟೇರ್‌ ಕ್ಷೇತ್ರದಲ್ಲಿ ಹಾಗೂ ಸಜ್ಜೆ 23000 ಹೆಕ್ಟೇರ್‌ ಕ್ಷೇತ್ರದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇದ್ದು, ದ್ವಿದಳ ಧಾನ್ಯಗಳಲ್ಲಿ ತೊಗರಿ 30000 ಹೆಕ್ಟೇರ್‌ ಹಾಗೂ ಹೆಸರು 32000 ಹೆಕ್ಟೇರ್‌ ಕ್ಷೇತ್ರದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಹೊಂದಲಾಗಿದೆ.

ಎಣ್ಣೆ ಕಾಳುಗಳಲ್ಲಿ ಸೂರ್ಯಕಾಂತಿ ಬೆಳೆಯು ಸುಮಾರು 24000 ಹೆಕ್ಟೇರ್‌ ಕ್ಷೇತ್ರದಲ್ಲಿ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಪೂರ್ವ ಮುಂಗಾರು ಹಾಗೂ ಮುಂಗಾರು ಬೆಳೆಗಳ ಬಿತ್ತನೆ ಬೀಜ ದಾಸ್ತಾನು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಲಾಗುತ್ತಿದೆ. ಹೆಸರು 240 ಕ್ವಿಂಟಲ್‌, ಉದ್ದು 135 ಕ್ವಿಂಟಲ್‌ ತೊಗರಿ 300 ಕ್ವಿಂಟಲ್‌ ಸೋಯಾ ಅವರೆ 1050 ಕ್ವಿಂಟಲ್‌ ದಾಸ್ತಾನು ಇದ್ದು, ಗೋವಿನಜೋಳ, ಸಜ್ಜೆ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಸದ್ಯದಲ್ಲಿಯೇ ದಾಸ್ತಾನು ಮಾಡಿಕೊಂಡು ಸರಬರಾಜು ಮಾಡಲಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕಿ ಡಾ| ಚೇತನಾ ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 18 ರೈತ ಸಂಪರ್ಕ ಕೇಂದ್ರಗಳಲ್ಲದೆ ಹೆಚ್ಚುವರಿಯಾಗಿ 16 ಬಿತ್ತನೆ ಬೀಜ ಕೇಂದ್ರಗಳ ಮುಖಾಂತರ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತೊಗರಿ, ಉದ್ದು, ಹೆಸರು, ಸೋಯಾಅವರೆ ಬೆಳೆಗಳ ಪ್ರಮಾಣಿತ ಬಿತ್ತನೆ ಬೀಜಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆಜಿಗೆ 25 ರೂ. ಹಾಗೂ ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ 37.50 ರೂ.ಗಳ ರಿಯಾಯತಿಯನ್ನು ನಿಗ ಪಡಿಸಲಾಗಿದೆ. ಸೂರ್ಯಕಾಂತಿ ಬೆಳೆ ಸಂಕರಣ ತಳಿಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆಜಿಗೆ 80 ರೂ. ಹಾಗೂ ಪ.ಜಾತಿ ಮತ್ತು ಪ. ಪಂಗಡದ ರೈತರಿಗೆ 120 ರೂ.ಗಳ ರಿಯಾಯತಿಯನ್ನು ನಿಗದಿಪಡಿಸಲಾಗಿದೆ.

ಮೆಕ್ಕೆಜೋಳದ ಸಂಕರಣ ಬೆಳೆಗಳಲ್ಲಿ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆಜಿಗೆ 20 ರೂ. ಹಾಗೂ ಪ.ಜಾತಿ ಮತ್ತು ಪ. ಪಂಗಡದ ರೈತರಿಗೆ 30 ರೂ.ಗಳ ರಿಯಾಯತಿಯನ್ನು ನೀಡಲಾಗುತ್ತಿದೆ. ಜಿಲ್ಲೆಗೆ ಅವಶ್ಯಕತೆ ಇರುವ ಹೆಚ್ಚುವರಿ ಬಿತ್ತನೆ ಬೀಜದ ಬೇಡಿಕೆಯನ್ನು ಈಗಾಗಲೇ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ದಾಸ್ತಾನು ಮಾಡಲಾದ ಬಿತ್ತನೆ ಬೀಜಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದ್ದು, ವರದಿ ಬಂದ ನಂತರವೇ ಗುಣಮಟ್ಟ ಖಾತ್ರಿ ಪಡಿಸಿಕೊಂಡು ವಿತರಣೆ ಮಾಡುವುದಾಗಿ ಪಾಟೀಲ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 75.3 ಮಿ.ಮೀ ಮಳೆ ಆಗಬೇಕಾಗಿದ್ದು, ವಾಸ್ತವಿಕವಾಗಿ 76.00 ಮಿ.ಮೀ ಮಳೆ ಆಗಿರುತ್ತದೆ. ತಾಲೂಕುವಾರು ಬಾದಾಮಿ 85.4 ಮಿ.ಮೀ, ಬಾಗಲಕೋಟೆ 53.1 ಮಿ.ಮೀ, ಬೀಳಗಿ 42.7 ಮಿ.ಮೀ, ಹುನಗುಂದ 97.8 ಮಿ.ಮೀ, ಜಮಖಂಡಿ 61.9 ಮಿ.ಮೀ, ಮುಧೋಳ 108 ಮಿ.ಮೀ, ಗುಳೇದಗುಡ್ಡ 85.7 ಮಿ.ಮೀ, ರಬಕವಿ-ಬನಹಟ್ಟಿ 57.5ಮಿ.ಮೀ, ಇಳಕಲ್ಲ 90.7 ಮಿ.ಮೀ ನಷ್ಟು ಮಳೆ ಆಗಿದೆ. ಹಂಗಾಮಿನ ಬಿತ್ತನೆ ಬೆಡಿಕೆ ಅನುಸಾರ ಬೀಜಗಳನ್ನು ಸರಬರಾಜು ಮಾಡಿಸಿಕೊಂಡು ವಿತರಣೆ ಮಾಡಿಕೊಡಲಾಗುತ್ತಿದೆ.

ಬಿತ್ತನೆಗೆ ಅವಶ್ಯವಿರುವ ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದ್ದು, ರೈತ ಬಾಂಧವರು ಕೋವಿಡ್‌-19 ಮುಂಜಾಗ್ರತಾ ಕ್ರಮಗಳನ್ನು ಕಟ್ಟಾಯವಾಗಿ ಪಾಲಿಸುತ್ತಾ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಖರೀದಿ ಮಾಡಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತ ನಿಗ ಪಡಿಸಿದ ಸಮಯದಲ್ಲಿಯೆ ಬಿತ್ತನೆ ಬೀಜ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next