Advertisement

ನೋಡಿ, ಸ್ವಾಮಿ ಕ್ಯಾರಿಕೇಚರ್‌

08:23 PM Nov 01, 2019 | Lakshmi GovindaRaju |

ಬೆಂಗಳೂರು, ಪ್ರತಿಭಾನ್ವಿತ ವ್ಯಂಗ್ಯಚಿತ್ರಕಾರರ ತವರೂ ಹೌದು. ಕ್ಯಾರಿಕೇಚರ್‌ ಮೂಲಕವೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಮಾಡಿದ ಕಲಾವಿದ ವೈ.ಎಸ್‌. ನಂಜುಂಡಸ್ವಾಮಿ ಕೂಡ ಅಂಥ ಪ್ರತಿಭೆಗಳ ಸಾಲಿನಲ್ಲಿ ನಿಲ್ಲುವಂಥವರು. ಶಿವಮೊಗ್ಗ ಮೂಲವಾದರೂ, ಈಗ ಇವರ ನೆಲೆವೀಡು ರಾಜಧಾನಿ. ತಂದೆಯ ಮೂಲಕ ಕಲಾಭ್ಯಾಸ ಶುರುಮಾಡಿ, ನಂತರ ಶಿಲ್ಪಿ ಕೆ. ಜ್ಞಾನೇಶ್ವರ ಅವರ ಬಳಿ ರೇಖಾಶಾಸ್ತ್ರವನ್ನು ಕಲಿತು, ರಾಮಧ್ಯಾನಿ, ಸುಬ್ರಹ್ಮಣ್ಯ, ಜೇಮ್ಸ್‌ವಾಜ್‌ ಅವರ ಪ್ರೋತ್ಸಾಹದಿಂದ, ವ್ಯಂಗ್ಯಚಿತ್ರಕಲೆಯಲ್ಲೂ ಮಿಂಚತೊಡಗಿದರು.

Advertisement

ಸ್ವಾಮಿ ಅವರ ಆಯ್ದ 90 ಕ್ಯಾರಿಕೇಚರ್‌ಗಳ ಪ್ರದರ್ಶನವನ್ನು, ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಹಮ್ಮಿಕೊಂಡಿದೆ. ಕದ್ರಿ ಗೋಪಾಲನಾಥ್‌, ಪಿ.ವಿ. ಸಿಂಧು, ರೋಜರ್‌ ಫೆಡರರ್‌, ಭೀಮಸೇನ ಜೋಶಿ, ಡೊನಾಲ್ಡ್‌ ಟ್ರಂಪ್‌ ಮುಂತಾದ ಗಣ್ಯರ ಸಹಜ ಭಾವಗಳನ್ನು ಕ್ಯಾರಿಕೇಚರ್‌ನಲ್ಲಿ ಹಿಡಿದಿಟ್ಟ ವಿಸ್ಮಯ ವನ್ನು ಇಲ್ಲಿ ಕಣ್ತುಂಬಿ­ಕೊಳ್ಳ ಬಹುದು. ಖ್ಯಾತ ಕಲಾವಿದ ಬಿ.ಜಿ. ಗುಜ್ಜಾರಪ್ಪ ಅವರು ಕಾರ್ಯ ಕ್ರಮಕ್ಕೆ ಚಾಲನೆ ನೀಡುವರು.

ಯಾವಾಗ?: ನ.9- 23, ಬೆಳಗ್ಗೆ 10- ಸಂಜೆ 6
ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಟ್ರಿನಿಟಿ ವೃತ್ತ
ಪ್ರವೇಶ: ಉಚಿತ
ಸಂಪರ್ಕ: 99800917428

Advertisement

Udayavani is now on Telegram. Click here to join our channel and stay updated with the latest news.

Next