Advertisement

ದಸರಾ ಜತೆಗೆ ಪ್ರಕೃತಿ ಸೊಬಗನ್ನೂ ನೋಡಬನ್ನಿ

10:27 AM Sep 23, 2017 | Team Udayavani |

ಮೈಸೂರು: ದಸರಾ ಮಹೋತ್ಸವದ ಸಂಭ್ರಮ ಸವಿಯಲು ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ “ದಸರಾ ದರ್ಶನ 
ವ್ಯವಸ್ಥೆ’ ಆಯೋಜಿಸಲಾಗಿದ್ದು, ಶುಕ್ರವಾರ ಚಾಲನೆ ನೀಡಲಾಯಿತು.

Advertisement

ದಸರಾ ಉಪ ಸಮಿತಿಯಿಂದ ಸೆ.26ರಿಂದ 30ರವರೆಗೆ ಆಯೋಜಿಸಿರುವ ದಸರಾ ದರ್ಶನ ಕಾರ್ಯಕ್ರಮಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾರಿಗೆ ಎಚ್‌.ಎಂ.ರೇವಣ್ಣ ಚಾಲನೆ ನೀಡಿದರು. ಶಾಸಕ ಎಂ.ಕೆ. ಸೋಮಶೇಖರ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಾಸು ಮತ್ತಿತರರು ಈ ವೇಳೆ ಹಾಜರಿದ್ದರು. 

ಆರ್ಥಿಕವಾಗಿ ಹಿಂದುಳಿದ ಅಥವಾ ಈವರೆಗೂ ದಸರಾ ಸಂಭ್ರಮವನ್ನು ನೋಡದವರಿಗೆ ದಸರಾ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಕಲ್ಪಿಸುವುದು ದಸರಾ ದರ್ಶನದ ಮುಖ್ಯ ಉದ್ದೇಶ. ಇದಕ್ಕಾಗಿ ಮೈಸೂರು ಕೊಡಗು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ 174 ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ದಸರಾ ದರ್ಶಿನಿ ಪ್ಯಾಕೇಜ್‌ನಲ್ಲಿ ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ, ರೈತ ದಸರಾ ಕಾರ್ಯಕ್ರಮಗಳಿಗೆ ಭೇಟಿ, ಜಲದರ್ಶಿನಿ ಪ್ಯಾಕೇಜ್‌ ಅಡಿಯಲ್ಲಿ ಗೋಲ್ಡನ್‌ ಟೆಂಪಲ್‌, ದುಬಾರೆ, ನಿಸರ್ಗಧಾಮ, ಅಬ್ಬಿಫಾಲ್ಸ್‌ ರಾಜಾಸ್ಟ್ರೀಟ್‌, ಹಾರಂಗಿ ಮತ್ತು ಕೆಆರ್‌ಎಸ್‌ ಜಲಾಶಯಗಳ ದರ್ಶನ ಮಾಡಿಸಲಾಗುವುದು. ಗಿರಿದರ್ಶಿನಿ ಪ್ಯಾಕೇಜ್‌ನಲ್ಲಿ ಬಂಡಿಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟವನ್ನು ವೀಕ್ಷಿಸಬಹುದು. ಇದಕ್ಕಾಗಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಮಕ್ಕಳು ಹಾಗೂ ವಯಸ್ಕರಿಗೆ ಪ್ರತ್ಯೇಕ ಟಿಕೆಟ್‌ ದರ ನಿಗದಿಪಡಿಸಲಾಗಿದೆ. 

ರೈತ ದಸರಾಕ್ಕೆ ಕೃಷಿ ಸಚಿವರೇ ಗೈರು
ಮೈಸೂರು: ನಗರದ ಜೆ.ಕೆ. ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ ರೈತ ದಸರೆಗೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ನಯೀಮಾ ಸುಲ್ತಾನ್‌ ಶುಕ್ರವಾರ ಚಾಲನೆ ನೀಡಿದರು. ಆದರೆ, ರೈತರಿಗಾಗಿ ನಡೆಸುವ ರೈತ ದಸರೆಯ ಉದ್ಘಾಟನೆಗೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಗೈರು ಹಾಜರಾಗಿದ್ದು, ನೆರೆದಿದ್ದ ರೈತರಲ್ಲಿ ಅಸಮಾಧಾನ ಮೂಡಿಸಿತು. ಪ್ರತಿ ಬಾರಿಯೂ ನೆಪಮಾತ್ರಕ್ಕೆ ರೈತ
ದಸರೆಯನ್ನು ನಡೆಸಲಾಗುತ್ತದೆ. ಇದರಲ್ಲಿ ರೈತರ ಅನುಕೂಲಕ್ಕಾಗಿ ಯಾವುದೇ ಮಾಹಿತಿ ಇರುವುದಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ರೈತ ದಸರೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರುವುದಿಲ್ಲ ಎಂದು ರೈತರು ತಮ್ಮ ಅಸಮಾಧಾನ ಹೊರ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next