Advertisement

ಕಡ್ಡಾಯವಾಗಿ ಮಾಸ್ಕ್ ಧರಿಸಿ: ರಾಜಶೇಖರ

01:01 PM Jun 20, 2020 | Naveen |

ಸೇಡಂ: ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಗುರುವಾರ ಜನರಿಗೆ ಉಚಿತ ಮಾಸ್ಕ್ ವಿತರಿಸಿ ಮಾಸ್ಕ್ ದಿನ ಆಚರಿಸಿ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜತೆಗೆ ಮಾಸ್ಕ್ ಧರಿಸದೆ ಸಂಚರಿಸುವ ಬೈಕ್‌ಗಳನ್ನು ಸೀಜ್‌ ಮಾಡಲಾಯಿತು.

Advertisement

ಸಿಪಿಐ ರಾಜಶೇಖರ ಹಳಗೋದಿ ನೇತೃತ್ವದಲ್ಲಿ ವಯಸ್ಕರು ಮತ್ತು ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು. ಪಿಎಸ್‌ಐ ಸುಶೀಲಕುಮಾರ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದರು. ಕೊರೊನಾದಿಂದ ಬಚಾವಾಗಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್‌ ಬಳಸಬೇಕು. ಸಾಮಾಜಿಕ ಅಂತರ ಕಾಪಾಡಿ ಸಂಚರಿಸಬೇಕು ಎಂದರು. ರೈಲ್ವೆ ನಿಲ್ದಾಣದ ಬಳಿಯ ನಿರ್ಗತಿಕರು, ಭಿಕ್ಷುಕರಿಗೂ ಸಹ ಮಾಸ್ಕ್ ವಿತರಿಸಲಾಯಿತು.

ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪಾದಯಾತ್ರೆ ನಡೆಸಿ ಮಾಸ್ಕ್ ದಿನ ಆಚರಿಸಿದರು. ವಿಠ್ಠಲರೆಡ್ಡಿ, ಸುನೀಲ, ಬಾಬುರಾವ್‌, ಮಲ್ಲಿಕಾರ್ಜುನ ಸಮತಾ ಜೀವನ, ಮಾಣಿಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next