Advertisement

ಸಂಸ್ಕೃತಿ ಇಲ್ಲದ ವ್ಯಕ್ತಿ ಸತ್ತ ಹೆಣಕ್ಕಿಂತ ಕೀಳು

02:52 PM Jul 28, 2019 | Naveen |

ಸೇಡಂ: ಸಂಸ್ಕಾರ, ಸಂಸ್ಕೃತಿ, ಸಭ್ಯತೆ ಅರಿವಿಲ್ಲದೆ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಆತ ಸತ್ತ ಹೆಣಕ್ಕಿಂತ ಕೀಳು ಎಂದು ಬೀದರ ಚಿದಂಬರ ಮಠದ ಡಾ| ಶಿವಕುಮಾರ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ನೃಪತುಂಗ ಪದವಿ ಮಹಾ ವಿದ್ಯಾಲಯ ಆವರಣದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಮತ್ತು ವಿಕಾಸ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಸಮಗ್ರ ಶೈಕ್ಷಣಿಕ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಎಡವುತ್ತಿವೆ. ಇದರ ದುಷ್ಪರಿಣಾಮ ದೇಶದ ಸಂಸ್ಕೃತಿ ಮೇಲೆ ಬೀಳುತ್ತಿದೆ. ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಚರ್ಚಿಸುವ ಅವಶ್ಯಕತೆ ಇದೆ ಎಂದರು.

ರಾಜಕೋಟನ ಅತ್ಮಿಯಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಆನಂದ ಜೋಷಿ ಮಾತನಾಡಿ, ಭಾರತ ಅತಿ ಹೆಚ್ಚು ಎಂಜಿನಿಯರ್‌ ಮತ್ತು ಡಾಕ್ಟರ್‌ಗಳನ್ನು ಲೋಕಕ್ಕೆ ನೀಡುತ್ತಿದೆ ಎಂದು ಹೇಳಿದರು.

ಶಿವಲಿಂಗೇಶ್ವರ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ವಿಜಯಪುರ ಚಾಣಕ್ಯ ಕರಿಯರ್‌ ಅಕಾಡೆಮಿ ಮುಖ್ಯಸ್ಥ ಎನ್‌.ಎಂ. ಬಿರಾದಾರ, ವಿಕಾಸ ಅಕಾಡೆಮಿ ಮುಖ್ಯಸ್ಥ ಡಾ| ಬಸವರಾಜ ಪಾಟೀಲ ಸೇಡಂ, ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕಿ ಲೀಲಾ ಕಾರಟಗಿ, ಸಿ.ಆರ್‌. ಆನಂದ, ಮುಕುಂದ ಮೈಗೂರು, ಸುರೇಶ ಕುಲಕರ್ಣಿ, ಯು. ಭೀಮರಾವ್‌, ನರೇಂದ್ರ ಬಡಶೇಷಿ, ವಿವೇಕಾನಂದ, ಸಯಿದಾ, ಕನಕವಲ್ಲಿ, ಡಾ| ಹೇಮಲತಾ ಹಾಜರಿದ್ದರು.

Advertisement

ಉಪನ್ಯಾಸಕ ಜಗದೀಶ ಕಡಬಗಾಂವ ನಿರೂಪಿಸಿದರು, ಬಸವರಾಜ ಮಾಲಿಪಾಟೀಲ ವಂದಿಸಿದರು. ನಂತರ ವಿವಿಧ ಶಾಲಾ ಕೋಣೆಗಳಲ್ಲಿ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ ಜಿಲ್ಲೆಗಳಿಂದ ಆಗಮಿಸಿದ ನೂರಾರು ಶಿಕ್ಷಕರು ಮತ್ತು ಪಾಲಕರಿಗೆ ತರಬೇತಿ ನೀಡಲಾಯಿತು.

ಸಮಾರೋಪ ಸಮಾರಂಭ: ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಿತು. ವಿಜಯಪುರ ಚಾಣಕ್ಯ ಕರಿಯರ್‌ ಅಕಾಡೆಮಿ ಮುಖ್ಯಸ್ಥ ಎನ್‌.ಎಂ. ಬಿರಾದಾರ ಮಾತನಾಡಿದರು.

ವಿಕಾಸ ಅಕಾಡೆಮಿ ಮುಖ್ಯಸ್ಥ ಡಾ| ಬಸವರಾಜ ಪಾಟೀಲ ಸೇಡಂ ಮಾತನಾಡಿ, 2025ಕ್ಕೆ ಜರುಗುವ ಸ್ವರ್ಣ ಜಯಂತಿ ಕಾರ್ಯಕ್ರಮಕ್ಕೂ ಮುನ್ನ ಒಂದು ಕೋಟಿ ಸಸಿ ನೆಡುವ ಉದ್ದೇಶ ಹೊಂದಲಾಗಿದೆ ಎಂದರು.

ರೇಣುಕಾ ತಾಡೇಪಲ್ಲಿ ವೈಯಕ್ತಿಕ ಗೀತೆ ಹಾಡಿದರು, ಶಶಿಕಾಂತ ಕುಲಕರ್ಣಿ ಸ್ವಾಗತಿಸಿದರು, ಡಾ| ಬಿದರಿ ಚಂದ್ರಕಲಾ ನಿರೂಪಿಸಿದರು, ಭೀಮರೆಡ್ಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next