Advertisement

ಅಮ್ಮ ಪ್ರಶಸ್ತಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಮ

11:44 AM Nov 27, 2019 | Naveen |

ಸೇಡಂ: ಸಚಿವರ ಕಾರು ಚಾಲಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವ ಇಂತಹ ಕಾಲದಲ್ಲಿ ‘ಅಮ್ಮ’ನ ಹೆಸರಲ್ಲಿ ಕೊಡಮಾಡುತ್ತಿರುವ ಅಮ್ಮ ಪ್ರಶಸ್ತಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಮ ಎಂದು ಹಿರಿಯ ಸಂಗೀತ ನಿರ್ದೇಶಕ, ನಟ ವಿ. ಮನೋಹರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನ ಹಮ್ಮಿಕೊಂಡ ರಾಜ್ಯ ಮಟ್ಟದ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಲಬುರಗಿ ಜಿಲ್ಲೆ ಹಲವಾರು ಐತಿಹಾಸಿಕ ಕೋಟೆ ಕೊತ್ತಲಗಳನ್ನು ಹೊಂದಿದೆ. ರಾಜ ಮಹಾರಾಜರ ಆಳ್ವಿಕೆಯ ಕೇಂದ್ರಗಳಾಗಿ ಕಂಗೊಳಿಸಿದೆ. ಈ ಭಾಗವನ್ನು ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುತುವರ್ಜಿವಹಿಸಬೇಕು ಎಂದರು.

ಜನರು ಸರ್ಕಾರದ ಮೇಲೆ ಅವಲಂಬಿತರಾಗದೆ ಖುದ್ದಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗುವ ಪ್ರಯತ್ನ ಮಾಡಬೇಕು. ಸ್ವಚ್ಛ ಭಾರತ ಅಭಿಯಾನ ಎಷ್ಟರ ಮಟ್ಟಿಗೆ ಸಾಕಾರವಾಗಿದೆ ಎನ್ನುವುದನ್ನು ಮನಗಾಣಬೇಕು. ತಾಯಿ ನಾಡಿನ ಹಿರಿಮೆ ಬೆಳೆಸುವುದರೊಂದಿಗೆ ಐತಿಹಾಸಿಕ ಸ್ವತ್ತನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ, ಸಾಹಿತಿ ಜಿ.ಎನ್‌. ಮೋಹನ್‌ ಮಾತನಾಡಿ, ಭಾರತಕ್ಕೆ ಡಾ| ಬಿ.ಆರ್‌. ಅಂಬೇಡ್ಕರ್‌ ನೀಡಿದ ಸಂವಿಧಾನದಂತೆ ಪ್ರತಿ ಮನೆಗೆ ಅಮ್ಮನೇ ಸಂವಿಧಾನವಿದ್ದಂತೆ. ಕಲಬುರಗಿ ಪತ್ರಿಕೋದ್ಯಮಕ್ಕೆ ಶಕ್ತಿ ಕೊಟ್ಟ ನೆಲವಾಗಿದೆ. ಬರುವ ದಿನಗಳಲ್ಲಿ 20ನೇ ವರ್ಷದ ಅಮ್ಮ ಪ್ರಶಸ್ತಿ ಕಾರ್ಯಕ್ರಮ ಬೆಂಗಳೂರು ಮತ್ತು ಸೇಡಂನಲ್ಲಿ ಏಕಕಾಲಕ್ಕೆ ಆಯೋಜನೆ ಮಾಡುವ ಕುರಿತು ನಿರ್ಧರಿಸಲಾಗಿದೆ ಎಂದರು.

ಗುಲಬರ್ಗಾ ವಿವಿ ಕುಲಪತಿ ಡಾ| ಪರಿಮಳ ಅಂಬೇಕರ್‌, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸಾಹಿತಿ ಜೋಗಿ ಮಾತನಾಡಿದರು. ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಸಂತೋಷಿರಾಣಿ ಪಾಟೀಲ ತೇಲ್ಕೂರ, ಪ್ರತಿಷ್ಠಾನದ ಅಧ್ಯಕ್ಷೆ ರತ್ನಕಲಾ ಮುನ್ನೂರು ವೇದಿಕೆಯಲ್ಲಿದ್ದರು.

Advertisement

ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ, ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಮಹೇಂದ್ರ ಭಜಂತ್ರಿ ಪ್ರಾರ್ಥಿಸಿದರು. ಬಿ.ಹೆಚ್‌. ನಿರಗುಡಿ ಸ್ವಾಗತಿಸಿ, ವಂದಿಸಿದರು. ಸಾಹಿತಿ ಜಮೀಲ್‌ ಸಾವಣ್ಣ, ಸುಜಿತಕುಮಾರ, ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ಮದನಾ, ಗುಲಬರ್ಗಾ ವಿವಿಯ ಹೆಚ್‌.ಟಿ. ಪೋತೆ, ಸುಜಾತಾ ಜಂಗಮಶೆಟ್ಟಿ, ಸುರೇಶ ಬಡಿಗೇರ, ಅನಂತರೆಡ್ಡಿ ಬಟಗೇರಾ, ಪಿ.ಎಂ. ಮಣ್ಣೂರ, ಜಯಶ್ರೀ ಐನಾಪುರ, ಶಿವಶರಣರೆಡ್ಡಿ, ಸಂಗಯ್ಯ ಕೊಂತನಪಲ್ಲಿ, ವಿಜಯಲಕ್ಷ್ಮೀ, ಅಶೋಕ ತೊಟ್ನಳ್ಳಿ, ಭೀಮಣ್ಣ ಆಡಕಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next