Advertisement

ಶಾಲೆ ಆರಂಭ ಮುಂದೂಡಲು ಮನವಿ

05:21 PM Jun 12, 2020 | Naveen |

ಸೇಡಂ: ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳ ಆರಂಭ ದಿನಾಂಕ ಮುಂದೂಡಬೇಕು ಎಂದು ಕರವೇ (ಶೆಟ್ಟಿ) ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರದಲ್ಲಿ ಕೋರಿದ್ದಾರೆ.

Advertisement

ಮನವಿ ಪತ್ರವನ್ನು ತಹಶೀಲ್ದಾರ್‌ ಮುಖಾಂತರ ಸಲ್ಲಿಸಿರುವ ಅವರು, ಕೋವಿಡ್ ಸೋಂಕಿನ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ನೂರಾರು ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬರುತ್ತಿವೆ. ಆದ್ದರಿಂದ ಶಾಲೆ ತೆರೆಯುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಪದಾಧಿಕಾರಿಗಳಾದ ಶ್ರೀನಿವಾಸರೆಡ್ಡಿ ಮದನಾ, ನರಸಿಂಹಸ್ವಾಮಿ, ದೇವು ಕುಮಾರ ಕಾಚೂರ, ಪ್ರವೀಣಕುಮಾರ ಕೋಡ್ಲಾ, ರಾಘವೇಂದ್ರ ಕಡಗಂಚಿ, ಸುಭಾಶ ಚಪ್ಪೆಟ್ಲಾ, ರವಿಸಿಂಗ್‌ ಇಮಡಾಪುರ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next