ಜನಜೀವನ ಹಿಂದಿನಂತಿಲ್ಲ. ಅದಕ್ಕೆ ತಕ್ಕಂತೆ ಕೆಲವೊಂದು ಅಗತ್ಯತೆಗಳೂ ಹೆಚ್ಚಾಗಿವೆ.ಮಳೆಗಾಲ ಬೇರೆ ಆರಂಭಗೊಂಡಿರುವುದರಿಂದ ನಮ್ಮ ಮನೆ, ಸಂಸ್ಥೆ, ಕೈಗಾರಿಕೆಗಳಲ್ಲಿರುವ ಅಲರಾಂನಿಂದ ಸಿಸಿ ಕೆಮರಾ ವರೆಗಿನ ವಿವಿಧ ರೀತಿಯ ಭದ್ರತಾ ಉಪಕರಣಗಳ ಪರಿಶೀಲನೆ, ಹೊಸತಾಗಿ ಅಳವಡಿಕೆಯತ್ತ ಗಮನ ಹರಿಸುವುದು ಅಗತ್ಯವಾಗಿದೆ. ಕೋವಿಡ್-19 ಕಾಣಿಸಿದ ಬಳಿಕ ಹೆಚ್ಚಿನ ಅಂಗಡಿ, ಸಾರ್ವಜನಿಕ ಪ್ರದೇಶಗಳಲ್ಲಿ, ಸಂಸ್ಥೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಎಂಬುದು ಕಡ್ಡಾಯವಾಗಿದೆ. ಅದರಲ್ಲಿಯೂ ಈಗ ಸಾಕಷ್ಟು ಸುಧಾರಣೆಗಳಾಗಿವೆ.ಸ್ವಯಂಚಾಲಿತ ಥರ್ಮಲ್ ಸ್ಕ್ರೀನಿಂಗ್ ಸಹಿತ ವೀಡಿಯೋ ದಾಖಲೀಕರಣ ವ್ಯವಸ್ಥೆಯೂ ಬಂದಿದೆ. ಇಂತಹ ಉಪಕರಣಗಳ ಖರೀದಿಗಾಗಿ ಭದ್ರತಾ ಸಾಮಗ್ರಿಗಳ ಮಳಿಗೆಗಳಿಗೆ ಹೋಗುವಾಗ ನಾವು ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಲಾಕ್‌ಡೌನ್ ತೆರವು ಆಗುತ್ತಿದ್ದಂತೆ ಮಳೆಗಾಲವೂ ಆರಂಭಗೊಂಡಿದೆ. ಈ ಸಮಯದಲ್ಲಿ ಸಂಸ್ಥೆ, ಮನೆಗಳಲ್ಲಿರುವ ಭದ್ರತಾ ಸಲಕರಣೆಗಳ ದುರಸ್ತಿ ಅಥವಾ ಹೊಸತಾಗಿ ಜೋಡಿಸುವ ಕಾರ್ಯವೂ ನಡೆಯುತ್ತಿದೆ. ಇಂತಹ ವಸ್ತುಗಳ ಖರೀದಿ ಸಂದರ್ಭ ಏನೇನು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲಿದೆ ಮಾಹಿತಿ.
ಅಂಗಡಿಗಳಿಗೆ ಬರುವ ಗ್ರಾಹಕರು ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಬೇಕು. ಅದಕ್ಕೆಂದು ಅಂಗಡಿಗಳ ಒಳಗೆ ಆಸನಗಳನ್ನು ನಿರ್ದಿಷ್ಟ ಅಂತರದಲ್ಲಿ ಇರಿಸಲಾಗಿದೆ. ಸ್ಯಾನಿಟೈಸರ್ ಬಳಸುವುದು ಎಲ್ಲರಿಗೂ ಕಡ್ಡಾಯ ಮಾಡಲಾಗಿದೆ.
ಇಂಥ ಹೆಚ್ಚಿನ ಮಳಿಗೆಗಳಲ್ಲಿ ಸ್ವಯಂ ಚಾಲಿತ ಥರ್ಮಲ್ ಸ್ಕ್ರೀನಿಂಗ್ ಸಾಧನ ಇದ್ದು, ಇದು ವ್ಯಕ್ತಿಯ ದೇಹದ ಉಷ್ಣಾಂಶವನ್ನು ನಿಖರವಾಗಿ ಗ್ರಹಿಸುವುದಲ್ಲದೆ ಚಿತ್ರವನ್ನೂ ಸಂಗ್ರಹಿಸುತ್ತದೆ. ಇದರಿಂದ ತಾಪಮಾನದ ಜತೆ ಅಗತ್ಯವಾದಲ್ಲಿ ಮುಂದಕ್ಕೆ ವ್ಯಕ್ತಿಯ ಗುರುತನ್ನೂ ಪತ್ತೆ ಹಚ್ಚಲು ಸಾಧ್ಯ.
ಗ್ರಾಹಕರು ತಮಗೆ ಬೇಕಾದ ವಸ್ತುಗಳ ಕುರಿತು ಫೋನ್‌ನಲ್ಲಿಯೇ ಮಾಹಿತಿ ಪಡೆಯಬಹುದಾಗಿದೆ. ಕೆಲವೆಡೆ ಮನೆ ಮತ್ತು ಸಂಸ್ಥೆಗಳಿಗೆ ಹೋಗಿ ಡೆಮೊ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮತ್ತು ಅದನ್ನು ಅಳವಡಿಸುವ ವೇಳೆ ಅವರೂ ಸರಕಾರದ ಮಾರ್ಗಸೂಚಿ ಪಾಲಿಸುವರು.
ಭದ್ರತಾ ಉಪಕರಣಗಳ ಅಂಗಡಿಗೆ ಕೂಡ ಹಿರಿಯರು ಮತ್ತು ಮಕ್ಕಳು ಹೋಗದಿರುವುದು ಉತ್ತಮ. ಹಿರಿಯರು ಅಗತ್ಯವೆನಿಸಿದರೆ ಫೋನ್ ಮೂಲಕ ವ್ಯವಹರಿಸಬಹುದು. ಜ್ವರ, ಕೆಮ್ಮು, ಶೀತ ಇತ್ಯಾದಿ ಲಕ್ಷಣಗಳಿರುವ ವ್ಯಕ್ತಿಗಳು ಬಂದಲ್ಲಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಂಡು ವ್ಯವಹರಿಸಲಾಗುತ್ತಿದೆ.
ಭದ್ರತಾ ಉಪಕರಣಗಳ ಮಳಿಗೆಗಳಲ್ಲಿ ಕೂಡ ಡಿಜಿಟಲ್ ಹಣ ವರ್ಗಾವಣೆ ವ್ಯವಸ್ಥೆ ಬಳಕೆಯಲ್ಲಿದೆ. ಗ್ರಾಹಕರು ಕೂಡ ಕ್ರೆಡಿಟ್ ಕಾರ್ಡ್, ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸುವಂತೆ ಸೂಚಿಸಲಾಗುತ್ತದೆ. ಇದರಿಂದ ಪರಸ್ಪರ ಸ್ಪರ್ಶ ಬಹುತೇಕ ಕಡಿಮೆಯಾಗುತ್ತದೆ.
ಸಿಸಿ ಕೆಮರಾ ಸಹಿತ ವಿವಿಧ ಉಪಕರಣ ಗುಣಮಟ್ಟ ಪರೀಕ್ಷಿಸುವ ವೇಳೆ ಬರಿ ಕೈಯಿಂದ ಮುಟ್ಟದೆ, ಗ್ಲೌಸ್ ಧರಿಸಿ ಪರಿಶೀಲಿಸಿ. ಚಯರ್, ಮೇಜು, ಗೋಡೆ, ಇತ್ಯಾದಿಗಳನ್ನು ಮುಟ್ಟದೆ ಇರುವುದು ಒಳ್ಳೆಯದು. ಒಂದು ವೇಳೆ ಸ್ಪರ್ಶಿಸಿದರೂ ಕೂಡಲೇ ಸ್ಯಾನಿಟೈಸರ್ ಬಳಸಿ.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್ ಮಾಡಿ.
9148594259