Advertisement

ಭದ್ರತೆ, ಸುರಕ್ಷೆ ತಂತ್ರಜ್ಞಾನ ಎಕ್ಸ್‌ಪೋಗೆ ಚಾಲನೆ

12:32 PM Oct 24, 2018 | Team Udayavani |

ಬೆಂಗಳೂರು: ಇನ್ಫೋನಿಟಿ ಎಕ್ಸ್‌ಪೊಸಿಷನ್ಸ್‌ ವತಿಯಿಂದ ನಗರದ ನಿಮ್ಹಾನ್ಸ್‌ ಕನ್ವೆಂಕ್ಷನ್‌ ಸೆಂಟರ್‌ನಲ್ಲಿ “ಅಗ್ನಿ ಅನಾಹುತ ಸುರಕ್ಷತಾ ತಂತ್ರಜ್ಞಾನ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಉಪಕರಣಗಳ’ ಪ್ರದರ್ಶನ ಮೇಳ ನಡೆಯುತ್ತಿದೆ.

Advertisement

ಮೇಳದಲ್ಲಿ 15ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ತಮ್ಮ ಭದ್ರತಾ ಉಪಕರಣಗಳೊಂದಿಗೆ ಭಾಗವಹಿಸಿವೆ. ಜತೆಗೆ ಜನಸಾಮಾನ್ಯರಲ್ಲಿ ಅಗ್ನಿ ಅವಘಡ ಮತ್ತು ರಕ್ಷಣೆ, ಖಾಸಗಿ ಭದ್ರತೆ, ಸೈಬರ್‌ ಅಪರಾಧಗಳು, ಸಂಚಾರ ನಿಯಮ ಮತ್ತು ನಿಯಂತ್ರಣದಂತ ಅನೇಕ ವಿಷಯಗಳ ಬಗೆಗೆ ಅರಿವು ಮೂಡಿಸಲಾಗುತ್ತಿದೆ.

ಮೂರು ದಿನಗಳ ಕಾಲ ನಡೆಯುತ್ತಿರುವ ಈ ಪ್ರದರ್ಶನ ಮೇಳಕ್ಕೆ ಅಗ್ನಿ ಹಾಗೂ ತುರ್ತು ಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸುನಿಲ್‌ ಅಗರ್‌ವಾಲ್‌ ಸೋಮವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಅಗ್ನಿ ಅವಘಡ ಹಾಗೂ ತುರ್ತು ಸೇವೆಗಳನ್ನು ಇನ್ನಷ್ಟು ಉತ್ತಮಗೊಳಿಸುವ ನೂತನ ತಂತ್ರಜ್ಞಾನ ಅತ್ಯವಶ್ಯಕ.

ಹೊಸ ಆವಿಷ್ಕಾರಗಳನ್ನು ಪರಿಶೀಲಿಸಿ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಭದ್ರತೆಯನ್ನು ಇನ್ನಷ್ಟು ಬಲ ಪಡಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಾಕಷ್ಟು ಉಪಯುಕ್ತ ತಂತ್ರಜ್ಞಾನ ಮಾದರಿ ಉಪಕರಣಗಳು ಈ ಮೇಳದಲ್ಲಿವೆ. ಇವುಗಳ ಅಳವಡಿಕೆ ಹಾಗೂ ಬಳಕೆಗೆ ಬಿಲ್ಡರ್ ಅಸೋಸಿಯೇಷನ್‌ಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next