Advertisement

Security lapse?; ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿದ್ದರಾಮಯ್ಯರಿಗೆ ಹಾರ!

09:00 PM Apr 08, 2024 | Team Udayavani |

ಬೆಂಗಳೂರು: ಭದ್ರತಾ ಲೋಪಕ್ಕೆ ಸಾಕ್ಷಿ ಎಂಬಂತೆ ಚುನಾವಣ ಪ್ರಚಾರ ರ್‍ಯಾಲಿ ವೇಳೆ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸೊಂಟದಲ್ಲಿ ಗನ್ ಇಟ್ಟುಕೊಂಡು ಪ್ರಚಾರ ವಾಹನದ ಮೇಲೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ ಘಟನೆ ನಡೆದಿದೆ.

Advertisement

ಬೆಂಗಳೂರು ದಕ್ಷಿಣ ಕ್ಷೇತ್ರದ ಭೈರಸಂದ್ರದಲ್ಲಿ ಸೌಮ್ಯ ರೆಡ್ಡಿ ಅವರ ಪರ ಪ್ರಚಾರ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ದೃಶ್ಯ ಕೆಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು,ಗನ್ ಸೊಂಟದಲ್ಲಿದ್ದುದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಹಾರ ಹಾಕಿದ ವ್ಯಕ್ತಿ ರಿಯಾಜ್ ಎನ್ನುವವರಾಗಿದ್ದು, ಬೆಂಗಳೂರಿನ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತ. 25 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

ಘಟನೆ ಭದ್ರತಾ ಲೋಪ ಎಂದು ಬಿಂಬಿತವಾದ ಬಳಿಕ ಪೊಲೀಸ್ ಅಧಿಕಾರಿಗಳು ರಿಯಾಜ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ತನ್ನ ಮೇಲೆ ದಾಳಿಯಾದ ಕಾರಣಕ್ಕಾಗಿ ಪರವಾನಗಿ ಪಡೆದು ಗನ್ ಇಟ್ಟುಕೊಂಡಿದ್ದೇನೆ, ನಾನು ಸಿದ್ದರಾಮಯ್ಯ ಅವರ ಅಭಿಮಾನಿ ಎಂದು ರಿಯಾಜ್ ಹೇಳಿರುವುದಾಗಿ ತಿಳಿದು ಬಂದಿದೆ.

ಜೆಡಿಎಸ್ ನಾಯಕ, ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿ ಬಿಜೆಪಿ ಪ್ರಮುಖರು ಇದು ಭದ್ರತಾ ಲೋಪ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next