Advertisement

ಭದ್ರತೆ ಕೊಡಿ: ಸುಪ್ರೀಂಗೆ ಜಡ್ಜ್ ಮನವಿ

12:49 AM Aug 24, 2019 | mahesh |

ನವದೆಹಲಿ: ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್‌ ನ್ಯಾಯಾಧೀಶ ಸುರೇಂದ್ರ ಕುಮಾರ್‌ ಯಾದವ್‌ ತಮಗೆ ಪೊಲೀಸ್‌ ಭದ್ರತೆ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರಿಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜು.27ರಂದು ಸುಪ್ರೀಂಕೋರ್ಟ್‌ಗೆ ಬರೆದಿರುವ ಪತ್ರದಲ್ಲಿ ಈ ಅಂಶ ಪ್ರಸ್ತಾಪಿಸಿದ್ದಾರೆ. ಅವರು ಕೈಗೊಂಡಿರುವ ಕೆಲಸ ಗಮನಿಸಿ ರಕ್ಷಣೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ ಎಂದು ನ್ಯಾ.ಆರ್‌.ಎಫ್.ನಾರೀಮನ್‌ ಮತ್ತು ನ್ಯಾ.ಸೂರ್ಯಕಾಂತ್‌ ನೇತೃತ್ವದ ಪೀಠ ಹೇಳಿದೆ. ಇದರ ಜತೆಗೆ ಅವರ ಅವಧಿ ವಿಸ್ತರಿಸುವ ಬಗ್ಗೆ ಸೇರಿದಂತೆ ಐದು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ 2 ವಾರಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಶುಕ್ರವಾರ ನ್ಯಾಯಪೀಠ ಆದೇಶ ನೀಡಿದೆ.

Advertisement

ದೊಡ್ಡವನಾಗಬಾರದು: ಇದೇ ವೇಳೆ ಭೂಮಾಲೀಕತ್ವದ ಬಗೆಗಿನ ವಿಚಾರಣೆ 11ನೇ ದಿನವಾಗಿರುವ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಸಂವಿಧಾನ ಪೀಠದಲ್ಲಿ ಮುಂದುವರಿದಿದೆ. ಮಾಲೀಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ರಾಮಲಲ್ಲ ವಿರಾಜಮಾನ್‌ ಸಲ್ಲಿಸಿರುವ ಅರ್ಜಿ ತಿರಸ್ಕರಿಸಿ, ತಾನು ಸಲ್ಲಿಸಿರುವ ಅರಿಕೆಯನ್ನೇ ಮಾನ್ಯ ಮಾಡಬೇಕು ಎಂದು ನಿರ್ಮೋಹಿ ಅಖಾಡದ ವಾದವನ್ನು ಪೀಠ ಒಪ್ಪಲಿಲ್ಲ. ‘ಭಕ್ತನು ದೇವರಿಗಿಂತ ದೊಡ್ಡವನಾಗಬಾರದು’ ಎಂದು ಹೇಳಿತು. ರಾಮಲಲ್ಲ ವಿರಾಜಮಾನ್‌ ದೇಗುಲಕ್ಕೆ ವಿರೋಧವಾಗಿ ಹೋಗುತ್ತಿದೆ ಎಂದು ಅಖಾಡ ಪರ ವಕೀಲ ಸುಶೀಲ್ ಜೈನ್‌ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next