Advertisement

ಎಲ್ಲಾ ದೇವಸ್ಥಾನಗಳಗೆ ಭದ್ರತಾ ಸಿಬ್ಬಂದಿ, ಸಿಸಿ ಕ್ಯಾಮೆರಾ, ಗನ್‌ಮ್ಯಾನ್‌: ಸಚಿವ ಕೋಟ

02:13 PM Sep 12, 2020 | keerthan |

ಮಂಡ್ಯ: ಅರ್ಕೇಶ್ವರ ದೇವಸ್ಥಾನದ ಅರ್ಚಕರ ಹತ್ಯೆಯ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ನಗರದ ಅರ್ಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಮೃತ ಅರ್ಚಕರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಘಟನೆಯ ಬಗ್ಗೆ ನೋವು ತಂದಿದೆ. ಇದರ ಯಾರೇ ಇದ್ದರೂ ಕೂಡಲೇ ಪತ್ತೆ ಕಾನೂನು ಕ್ರಮ ಜರುಗಿಸಲಾಗುವುದು. ಮೃತರ ಕುಟುಂಬದವರ ಜೊತೆ ಸರ್ಕಾರ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಿಹಾರ ಘೋಷಿಸಿದ್ದು, ಅದರಂತೆ ತಲಾ ಐದು ಲಕ್ಷ ರೂ., ಅಂತ್ಯ ಸಂಸ್ಕಾರಕ್ಕೆ 10 ಸಾವಿರ ರೂ. ಹಾಗೂ ಕೇಂದ್ರದ 20 ಸಾವಿರ ರೂ. ಪರಿಹಾರವನ್ನು ನೀಡಲಾಗಿದೆ. ಅಲ್ಲದೆ, ಪ್ರತೀ ತಿಂಗಳು ಮೃತ ಕುಟುಂಬಗಳಿಗೆ ವಿಧವಾ ವೇತನದ ಪಿಂಚಣಿ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.

ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
ಘಟನೆ ನಡೆಯಲು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮುಜರಾಯಿ ಆಯುಕ್ತರಿಂದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಅರ್ಕೇಶ್ವರ ದೇವಾಲಯ ವಾರ್ಷಿಕ 25 ಲಕ್ಷ ರೂ. ವರಮಾನವಿದ್ದು, ಬಿ ಗ್ರೇಡ್‌ನಲ್ಲಿದೆ. ಅದನ್ನು ಎ ಗ್ರೇಡ್‌ಗೆ ಸೇರಿಸಲು ಪ್ರಸ್ತಾವನೆ ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಹಣಕ್ಕೋಸ್ಕರ ಹತ್ಯೆ ಅನುಮಾನ, ಅರ್ಚಕರ ಹತ್ಯೆ ಹಿಂದೆ ಇಸ್ಲಾಮಿಕ್ ಜಿಹಾದ್: ಮುತಾಲಿಕ್

Advertisement

ಕಳೆದ ಎಂಟು ತಿಂಗಳಿನಿಂದ ಹುಂಡಿಯ ಹಣ ಎಣಿಕೆ ಮಾಡಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿಯೇ ಕಳ್ಳತನ ನಡೆದಿರಬಹುದು. ಅಲ್ಲದೆ, ಘಟನೆ ನಡೆಯುವ ರಾತ್ರಿ ಪೊಲೀಸರು ಬೀಟ್ ಬಂದಿದ್ದಾರೆ. ಆ ನಂತರ ಕಳ್ಳತನ ನಡೆದಿರಬಹುದು ಎನ್ನಲಾಗುತ್ತಿದೆ. ಎಲ್ಲ ರೀತಿಯಿಂದಲೂ ಸೂಕ್ತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ದೇವಾಲಯಗಳ ಸುರಕ್ಷತೆಗೆ ಕ್ರಮ
ರಾಜ್ಯದ ಎಲ್ಲ 34 ಸಾವಿರ ಮುಜರಾಯಿ ಇಲಾಖೆಗಳ ದೇವಾಲಯಗಳ ಸುರಕ್ಷತೆ ಕ್ರಮ ವಹಿಸಲಾಗುವುದು. ಎಲ್ಲ ದೇವಸ್ಥಾನಗಳಲ್ಲಿ ಭದ್ರತಾ ಸಿಬ್ಬಂದಿ, ಸಿಸಿ ಕ್ಯಾಮೆರಾ, ಗನ್‌ಮ್ಯಾನ್‌ಗಳನ್ನು ನಿಯೋಜಿಸುವ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next