Advertisement

6 ರ ಬಾಲಕಿಯ ಕೊಂದು ಶವದ ಮೇಲೆ ಅತ್ಯಾಚಾರ; ಸೆಕ್ಯುರಿಟಿ ಗಾರ್ಡ್‌ ಅರೆಸ್ಟ್‌

08:43 AM May 01, 2019 | Team Udayavani |

ಹರಿದ್ವಾರ : ಉತ್ತಾರಖಂಡದಲ್ಲಿ ನಡೆದ ಅಂತ್ಯಂತ ಕ್ರೂರ, ಅಮಾನವೀಯ ಘಟನೆಯೊಂದರಲ್ಲಿ 6 ವರ್ಷ ಪ್ರಾಯದ ಬಾಲಕಿಯನ್ನು ಹತ್ಯೆಗೈದು ಶವದ ಮೇಲೆ ಅತ್ಯಾಚಾರ ನಡೆಸಿರುವ ಸೆಕ್ಯುರಿಟಿ ಗಾರ್ಡ್‌ವೊಬ್ಬನನ್ನು ಬಂಧಿಸಲಾಗಿದೆ.

Advertisement

ಶ್ಯಾಮ್‌ಪುರ್‌ ಎಂಬಲ್ಲಿ ಶುಕ್ರವಾರ ಸಂಜೆಯಿಂದಆಟವಾಡುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಆಕೆಯೊಂದಿಎಗ ಆಟವಾಡುತ್ತಿದ್ದ ಇತರ ಮಕ್ಕಳ ಹೇಳಿಕೆ ನೀಡಿದ್ದು, ಬಾಲಕಿ ಕೊನೆಯದಾಗಿ ಬಂಧಿತ ಆರೋಪಿಯೊಂದಿಗೆ ಕಂಡು ಬಂದಿದ್ದಳು ಎಂದು ತಿಳಿಸಿರುವುದಾಗಿ ಹರಿದ್ವಾರ ಎಸ್‌ಎಸ್‌ಪಿ ಜನಮೇಜಯ ಖಂಡೂರಿ ಹೇಳಿದ್ದಾರೆ.

ಬಾಲಕಿಯನ್ನ ಬಂಧಿತ ಆರೋಪಿ ಚುಡಿಯಾರ್‌ಪುರ್‌ ಅರಣ್ಯಕ್ಕೆ ಎಳೆದೊಯ್ದು, ಕತ್ತು ಹಿಸುಕಿ ಕೊಲೆಗೈದಿದ್ದಾನೆ ಬಳಿಕ ಶವದ ಮೇಲೆ ಅತ್ಯಾಚಾರ ಎಸಗಿ ಅಟ್ಟಹಾಸ ಮೆರೆದಿದ್ದಾನೆ.

ಶನಿವಾರ ಬೆಳಗ್ಗೆ ಬಾಲಕಿಯ ಮೃತ ದೇಹ ಪತ್ತೆಯಾಗಿದ್ದು, ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆವೇಳೆ ಕೃತ್ಯ ಎಸಗಿರುವುದಾಗಿ ಆರೋಪಿ ಬಾಯ್‌ ಬಿಟ್ಟಿದ್ದಾನೆ. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next