ಕಲಬುರಗಿ: ಮನೆಯ ಕಿಟಕಿ ಮುಖಾಂತರ ಕೈ ಹಾಕಿ ಬಾಗಿಲ ಒಳಕೊಂಡಿ ತೆಗೆದು ಲ್ಯಾಪ್‌ಟಾಪ್, ಮೊಬೈಲ್, ಕ್ಯಾಮೆರಾ ಕಳ್ಳತನ ಮಾಡಿದ್ದ ಸೆಕ್ಯೂರಿಟಿ ಗಾರ್ಡ್‌ನನ್ನು ನಗರದ ಸ್ಟೇಷನ್ ಬಜಾರ್ ಪೊಲೀಸರು ಶನಿವಾರ ಬಂಧಿಸಿ, 1.17 ಲಕ್ಷ ರೂ. ಮೌಲ್ಯದ ವಸ್ತಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ವೆಂಕಟೇಶನಗರದ ಶ್ರೀಹರಿ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ ಹಂಗರಗಿ ಬಂಧಿತ ಆರೋಪಿ. ಜ.12ರಂದು ವೆಂಕಟೇಶ ನಗರದ ಮನೆಯೊಂದರಲ್ಲಿ ಲ್ಯಾಪ್‌ಟಾಪ್, ಮೊಬೈಲ್, ಕ್ಯಾಮೆರಾ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕಾಗದ ಪತ್ರಗಳ ಕಳ್ಳತನವಾಗಿದ್ದವು.
ಈ ಬಗ್ಗೆ ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು, ಶನಿವಾರ ಬೆಳಗ್ಗೆ 7:30ರ ಸುಮಾರಿಗೆ ಜಿಡಿಎ ಲೇಔಟ್‌ನಲ್ಲಿ ಬೀಗ ಹಾಕಿದ ಮನೆಯ ಹತ್ತಿರ ಅನುಮಾನಾಸ್ಪದವಾಗಿ ನಿಂತಿದ್ದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಆಗ ಆರೋಪಿ ವಿಶ್ವನಾಥ ಹಂಗರಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿ ತನಿಂದ 17,499 ರೂ. ಮೌಲ್ಯದ ಒಂದು ಮೊಟೋ ಪಿಯುಜನ್ ಪ್ಲಸ್ ಮೊಬೈಲ್ ಫೋನ್, 80 ಸಾವಿರ ರೂ. ಮೌಲ್ಯದ ಎಚ್‌ಪಿ ಕಂಪನಿಯ ಲ್ಯಾಪ್‌ಟಾಪ್ ಹಾಗೂ 22 ಸಾವಿರ ರೂ. ಮೌಲ್ಯದ ಸೋನಿ ಕಂಪನಿಯ ಕ್ಯಾಮೆರಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರುತಿಳಿಸಿದ್ದಾರೆ.
ಇದನ್ನೂ ಓದಿ:ಕೃಷಿ ಕಾಯ್ದೆ ರದ್ದತಿಗೆ ರೈತರ ಆಗ್ರಹ
ನಗರ ಪೋಲಿಸ್ ಆಯುಕ್ತ ಎನ್.ಸತೀಶಕುಮಾರ ಮತ್ತು ನಗರ ಕಟ್ಟಿಮನಿ ಮಾರ್ಗದರ್ಶನದಲ್ಲಿ “ಎ’ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಅಂಶುಕುಮಾರ ನೇತೃತ್ವದಲ್ಲಿ ಪೋಲಿಸ್ ಇನ್ ಸ್ಪೆಕ್ಟರ್ ಸಿದ್ಧರಾಮೇಶ್ವರ ಗಡೇದ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.