Advertisement

ಆತ್ಮಾಹುತಿ ದಾಳಿ ವಿಫಲ; ನಾಲ್ವರು ಜೆಇಎಂ ಉಗ್ರರು ಫಿನಿಶ್

10:28 AM Jan 15, 2018 | Team Udayavani |

ಜಮ್ಮು-ಕಾಶ್ಮೀರ:ಗಡಿ ನುಸುಳಿ ಆತ್ಮಾಹುತಿ ದಾಳಿಗೆ ಯತ್ನಿಸಿದ್ದ ನಾಲ್ವರು ಉಗ್ರರನ್ನು ಭದ್ರತಾ ಪಡೆ ಸೋಮವಾರ ಬೆಳಗ್ಗೆ ಹೊಡೆದುರುಳಿಸಿರುವ ಘಟನೆ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನ ದೌಲಾಂಜಾ ಪ್ರದೇಶದ ಗಡಿ ಭಾಗದಲ್ಲಿ ನಡೆದಿದೆ.

Advertisement

ಭಾರತೀಯ ಯೋಧರು ಪಾಕಿಸ್ತಾನ ಮೂಲದ ಜೈಷ್ ಇ ಮುಹಮ್ಮದ್ ಉಗ್ರಗಾಮಿ ಸಂಘಟನೆಯ ನಾಲ್ವರು ಉಗ್ರರ ಆತ್ಮಾಹುತಿ ದಾಳಿಯನ್ನು ವಿಫಲಗೊಳಿಸಿರುವುದಾಗಿ ಜಮ್ಮು ಕಾಶ್ಮೀರದ ಡಿಜಿಪಿ ಪೌಲ್ ವಾಯ್ಡ್ ತಿಳಿಸಿದ್ದಾರೆ.

ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆ(ಸಿಎಪಿಎಫ್), ಸೇನೆ ಹಾಗೂ ರಾಜ್ಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next