ರಾಂಚಿ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳು ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ ಮಾವೋವಾದಿಗಳು ಹುದುಗಿಸಿಟ್ಟಿದ್ದ 120 ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಮಾವೋವಾದಿಗಳ ತಾಣವಾಗಿದ್ದ ಲತೇಹರ್ ಜಿಲ್ಲೆಯ ಬುಡಾಪಹಾಡ್ ಪ್ರದೇಶದಲ್ಲಿ ಐಇಡಿಗಳನ್ನು ಭದ್ರತಾ ಪಡೆಗಳು ಶುಕ್ರವಾರ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿದ್ದಾರೆ ಎಂದು ಅವರು ಹೇಳಿದರು.
ಬುಡಪಹಾಡ್ ಪ್ರದೇಶವು ಈ ಹಿಂದೆ ಮಾವೋವಾದಿಗಳ ಭದ್ರಕೋಟೆಯಾಗಿತ್ತು ಆದರೆ ಈಗ ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಕ್ಯಾಂಪ್ ಸ್ಥಾಪಿಸಿವೆ.
ಗುರುವಾರ ಭದ್ರತಾ ಪಡೆಗಳು ಲತೇಹಾರ್ ಮತ್ತು ಗರ್ವಾ ಜಿಲ್ಲೆಗಳಲ್ಲಿ 15 ಕೆಜಿ ಕುಕ್ಕರ್ ಬಾಂಬ್, ಕ್ಲೇಮೋರ್ ಮೈನ್, ಮೂರು ಡಿಟೋನೇಟರ್‌ಗಳು, ಒಂದು ಮೊಟೊರೊಲಾ ವೈರ್‌ಲೆಸ್ ಸೆಟ್, ಎರಡು ಮದ್ದುಗುಂಡು ಪೌಚ್‌ಗಳು ಮತ್ತು ನಕ್ಸಲ್ ಸಾಹಿತ್ಯವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿವೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.