Advertisement

ಕಾಶ್ಮೀರದೊಳಕ್ಕೆ ನುಸುಳಲು ಹಿಂದೇಟು ಹಾಕುತ್ತಿರುವ ಉಗ್ರರು! ; ಕಾರಣ ಇಲ್ಲಿದೆ

09:44 AM Nov 13, 2019 | Hari Prasad |

ಹೊಸದಿಲ್ಲಿ: 370 ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆಗಳನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಅಕ್ಷರಶಃ ಅವುಗಳ ಬೆನ್ನೆಲುಬು ಮುರಿಯುತ್ತಿವೆ. ಇದು ಪಾಕಿಸ್ಥಾನ ಪ್ರಯೋಜಿತ ಉಗ್ರ ಗುಂಪುಗಳ ಜಂಘಾಬಲವನ್ನೇ ಉಡುಗಿಸಿದೆ. ಹಲವು ಉಗ್ರ ದಾಳಿಗಳನ್ನು ಭದ್ರತಾ ಪಡೆಗಳು ಆರಂಭದಲ್ಲೇ ವಿಫ‌ಲಗೊಳಿಸುವುದರೊಂದಿಗೆ ಒಳನುಸುಳಲು ಯತ್ನಿಸುತ್ತಿರುವ ಉಗ್ರರು ಕೆಲವೇ ಗಂಟೆಗಳಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗುತ್ತಿರುವುದು ಉಗ್ರ ಸಂಘಟನೆಗಳಿಗೆ ತಲೆನೋವಾಗಿದೆ.

Advertisement

ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗೆ ಸ್ಥಳೀಯ ಬೆಂಬಲ ಇನ್ನಷ್ಟು ಕಡಿಮೆಯಾಗುತ್ತಿದ್ದು, ಅವುಗಳ ಸದಸ್ಯರಿಗೆ ಸ್ಥಳೀಯರಿಂದ ಹಿಂದಿನಷ್ಟು ಒಲವು ವ್ಯಕ್ತವಾಗುತ್ತಿಲ್ಲ ಎನ್ನಲಾಗಿದೆ. ಇದೇ ವೇಳೆ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಕೈಮೇಲಾಗುತ್ತಿದ್ದು ಇದರಿಂದ ಪಾಕ್‌ನಿಂದ ಒಳನುಸುಳಿದ ಉಗ್ರರು ಮತ್ತೆ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಪರಿಸ್ಥಿತಿ ಪ್ರತಿಕೂಲವಾಗಿರುವ ಹಿನ್ನೆಲೆಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ನ ಜಿಲ್ಲಾ ಕಮಾಂಡರ್‌ ತಾರಿಖ್‌ ಖಾನ್‌ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ನಯಕರಾದ ಹೈದರ್‌ ಜಿಹಾದಿ ಮತ್ತು ಸುಮಾರು 16-17 ಮಂದಿ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ತಮ್ಮ ನಡುವೆ ಪ್ರದೇಶಗಳನ್ನು ಹಂಚಿಕೊಳ್ಳುವ ಯತ್ನವನ್ನೂ ಮಾಡಿಲ್ಲ ಎಂದು ಗುಪ್ತಚರ ಮೂಲಗಳು ಹೇಳಿವೆ.

ಭಾರೀ ಪ್ರಮಾಣದ ಭದ್ರತಾ ಪಡೆಗಳಿರುವುದರಿಂದ ಹಲವು ಪ್ರದೇಶಗಳಲ್ಲಿ ಈಗ ಉಗ್ರರು ತಮ್ಮ ಕೃತ್ಯಗಳನ್ನೇ ನಡೆಸಲು ಹೆದರುತ್ತಿದ್ದಾರೆ. ಸ್ಥಳೀಯ ವ್ಯಕ್ತಿಗಳಿಂದ ಸರಂಜಾಮು ಸಾಗಾಟ, ಮಾಹಿತಿ ನೀಡಿಕೆ ಇತ್ಯಾದಿ ಬೆಂಬಲ ಸಿಗದಿರುವುದರಿಂದ ಯತ್ನಗಳು ನಿಷ್ಪ್ರಯೋಜಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next