Advertisement

ಕೋಲಾರ ಎಪಿಎಂಸಿಗೆ ಭದ್ರತೆ ಕಲ್ಪಿಸಿ

11:27 AM May 12, 2019 | Team Udayavani |

ಕೋಲಾರ: ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪೊಲೀಸ್‌ ಸಿಬ್ಬಂದಿ ನೇಮಿಸಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ರೈತ ಸಂಘವು ಎಸ್ಪಿ ಡಾ.ರೋಹಿಣಿ ಕಟೋಚ್ಗೆ ಮನವಿ ನೀಡಿದರು.

Advertisement

ಈ ವೇಳೆ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಏಷ್ಯಾದಲ್ಲೇ ಕೋಲಾರ ಎಪಿಎಂಸಿ ದೊಡ್ಡದು. ಈಗ ಟೊಮೆಟೋ ಅವಕ ಪ್ರಾರಂಭವಾಗಿದೆ. ಕಾರ್ಮಿಕರು, ದಲ್ಲಾಳಿಗಳು ಟೊಮೆಟೋ ಖರೀದಿಗೆ ಬರುತ್ತಾರೆ. ಪ್ರತಿ ದಿನ ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ಜೊತೆಗೆ ಮಾರುಕಟ್ಟೆ ಕಿರಿದಾಗಿರುವುದರಿಂದ ಲಾರಿ ಮಾಲಿಕರಿಗೆ ಮತ್ತು ತರಕಾರಿ ಮಂಡಿ ಮಾಲಿಕರಿಗೆ ಜಗಳ ಆಗುತ್ತದೆ ಎಂದು ಹೇಳಿದರು.

ಈ ಹಿಂದೆ ಇದ್ದ ಪೊಲೀಸ್‌ಅನ್ನು 4 ತಿಂಗಳಿಂದ ಬೇರೆ ಕಡೆ ನಿಯೋಜಿಸಲಾಗಿದೆ. ಮಾರುಕಟ್ಟೆ ಅವ್ಯವಸ್ಥೆ, ಜಾಗದ ಸಮಸ್ಯೆ ಬಗೆಹರಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಹೊರ ರಾಜ್ಯದ ಕಾರ್ಮಿಕರು ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪೇದೆ ನೇಮಕ ಮಾಡಿ ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಎಸ್ಪಿ ಡಾ.ರೋಹಿಣಿ ಕಟೋಚ್, ಚುನಾವಣೆ ನಿಮಿತ್ತ ಪೇದೆಯನ್ನು ಬೇರೆ ಕಡೆ ನಿಯೋಜನೆ ಮಾಡಿದ್ದೆವು. ಟೊಮೆಟೋ ಅವಕ ಹೆಚ್ಚಾಗಿರುವ ಕಾರಣ ಕೂಡಲೇ ಪೊಲೀಸ್‌ ನೇಮಿಸುವುದಾಗಿ ಭರವಸೆ ನೀಡಿದರು. ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್‌, ಉದಯ್‌ಕುಮಾರ್‌, ಮುಳಬಾಗಿಲು ತಾಲೂಕು ಅಧ್ಯಕ್ಷ ಪಾರುಕ್‌ಪಾಷ, ವಿಜಯಪಾಲ್, ಶಂಕರ್‌, ಪುತ್ತೇರಿ ರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next