9 ಮಂದಿ ಹೈ ರಿಸ್ಕ್ ವಿಐಪಿಗಳಿಗೆ ಎನ್‌ಎಸ್‌ಜಿ ಕಮಾಂಡೋಗಳ ಮುಖಾಂತರ ಒದಗಿಸಲಾಗುತ್ತಿದ್ದ ಝಡ್ ಪ್ಲಸ್ ಭದ್ರತೆಯನ್ನು ಹಿಂಪಡೆಯಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. 40ನೇ ವರ್ಷದ ಎನ್‌ಎಸ್‌ಜಿ ಸಂಸ್ಥಾಪನ ದಿನದಂದೇ ಈ ಆದೇಶ ಹೊರಬಿದ್ದಿದ್ದು ಮಹತ್ವ ಪಡೆದಿದೆ.
Advertisement
ಇತ್ತೀಚೆಗೆ ಸಂಸತ್ ಭದ್ರತಾ ಕರ್ತವ್ಯದಿಂದ ಹಿಂಪಡೆಯಲಾಗಿದ್ದ ಸಿಆರ್‌ಪಿಎಫ್ನ ವಿಶೇಷ ಬೆಟಾಲಿ ಯನ್ ಯೋಧರನ್ನು ಸಿಆರ್‌ಪಿಎಫ್ ವಿಶೇಷ ಭದ್ರತಾ ಘಟಕ ದೊಂದಿಗೆ ಸೇರಿಸಲಾಗುತ್ತಿದೆ. ಮುಂದಿನ ತಿಂಗಳೊಳಗೆ ವಿಐಪಿಗಳ ಭದ್ರತಾ ಕರ್ತವ್ಯಕ್ಕೆ ಈ ಯೋಧರನ್ನು ನೇಮಕ ಮಾಡಲು ಕೇಂದ್ರ ನಿರ್ಧರಿಸಿದೆ. ಪ್ರಮುಖ 9 ಹೈರಿಸ್ಕ್ ವಿಐಪಿಗಳಿಗೆ ಇನ್ನು ಮುಂದೆ ಸಿಆರ್‌ಪಿಎಫ್ ಭದ್ರತೆ ದೊರೆಯಲಿದೆ.
ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಸಿಎಂ, ರಾಜನಾಥ್ ಸಿಂಗ್ ಕೇಂದ್ರ ರಕ್ಷಣ ಸಚಿವ, ಮಾಯಾವತಿ ಉ.ಪ್ರ. ಮಾಜಿ ಸಿಎಂ, ಎಲ್‌ಕೆ. ಆಡ್ವಾಣಿ ಬಿಜೆಪಿ ಹಿರಿಯ ನಾಯಕ, ಗುಲಾಂ ನಬಿ ಅಜಾದ್ ಜಮ್ಮು ಕಾಶ್ಮೀರ ಮಾಜಿ ಸಿಎಂ, ಸರ್ಬಾನಂದ ಸೋನೋವಾಲ್ ಕೇಂದ್ರ ಬಂದರು ಸಚಿವ, ರಮಣ್ ಸಿಂಗ್ ಛತ್ತೀಸ್‌ಗಢ ಮಾಜಿ ಸಿಎಂ, ಫಾರೂಕ್ ಅಬ್ದುಲ್ಲಾ ಜಮ್ಮು ಕಾಶ್ಮೀರ ಮಾಜಿ ಸಿಎಂ, ಎನ್. ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ಸಿಎಂ ಬದಲಾವಣೆ ಏಕೆ ?
ಭಯೋತ್ಪಾದನೆ ಮತ್ತು ಹೈಜಾಕ್ ನಿಗ್ರಹ ಕಾರ್ಯಾಚರಣೆಗಳಲ್ಲಿ ಎನ್‌ಎಸ್‌ಜಿ ಕಮಾಂಡೋಗಳು ನಿಸ್ಸೀಮರಾಗಿದ್ದು, ದೇಶದಲ್ಲಿ ಏಕ ಕಾಲದಲ್ಲಿ ಎದುರಾಗಬಹುದಾದ ಸಂಭಾವ್ಯ ಅಪಾಯಗಳನ್ನು ತಪ್ಪಿ ಸಲು ಇವರ ಅಗತ್ಯವಿದೆ. ವಿಐಪಿ ಭದ್ರತಾ ಸೇವೆಗಳಿದ್ದರೆ ತುರ್ತು ಸಂದರ್ಭ ಈ ತಂಡ ಬಳಸಲು ತೊಡಕಾಗಬಹುದು. ಈ ಕಾರಣಕ್ಕಾಗಿಯೇ ಅವರನ್ನು ಮೂಲ ಕಾರ್ಯಕ್ಕೆ ಸೀಮಿತಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ 450 ಮಂದಿ ಎನ್‌ಎಸ್‌ಜಿ ಕಮಾಂಡೋಗಳು ವಿಐಪಿ ಭದ್ರತಾ ಕರ್ತವ್ಯದಿಂದ ಬಿಡುಗಡೆಯಾಗಲಿದ್ದಾರೆ.