Advertisement
ಈ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಡ್ರೋನ್ ನಿಯಮಗಳ ಸರಳೀಕರಣದ ಮೂಲಕ ಈ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಹೊಸ ಸ್ಟಾರ್ಟ್‌ಅಪ್‌ಗ್ಳಿಗೆ ಹಾಗೂ ಹೊಸ ಆವಿಷ್ಕಾರಗಳಿಗೆ ಸಹಾಯವಾಗುತ್ತದೆ. ನಂಬಿಕೆಯ ಆಧಾರದಲ್ಲಿ ಈ ಕ್ಷೇತ್ರವನ್ನು ಬೆಳೆಸುವ ಸದುದ್ದೇಶವೂ ಇದೆ ಎಂದಿದ್ದಾರೆ.
1. ಡ್ರೋನ್ ಹಾರಾಟಕ್ಕಾಗಿ ಪಡೆಯಬೇಕಾದ ರಿಮೋಟ್ ಪೈಲಟ್ ಲೈಸನ್ಸ್‌ಗಾಗಿ ವಿಧಿಸಲಾಗಿದ್ದ ಶುಲ್ಕವನ್ನು 3,000 ರೂ.ಗಳಿಂದ 100 ರೂ.ಗೆ ಇಳಿಸಲಾಗಿದೆ.
2. ನಾನಾ ಕಡೆಗಳಿಂದ ಒಪ್ಪಿಗೆ ಪಡೆಯುವ ಪ್ರಕ್ರಿಯೆಗೆ ಬ್ರೇಕ್ ಹಾಕಿ, ಸರಳವಾಗಿ, ಸುಲಭವಾಗಿ ಒಪ್ಪಿಗೆ ಅಥವಾ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
3. ಹಸಿರು ವಲಯಗಳಲ್ಲಿ, ನೆಲದಿಂದ 400 ಅಡಿಗಳವರೆಗೆ ಹಾರಾಟ ನಡೆಸಬಹುದಾದ ಡ್ರೋನ್‌ಗಳಿಗೆ ಫ್ಲೈಟ್ ಅನುಮತಿ ಕಡ್ಡಾಯವಾಗಿರುವುದಿಲ್ಲ ಎಂದು ಹೊಸ ನಿಯಮಗಳು ಹೇಳುತ್ತವೆ.
4. ವಿಮಾನ ನಿಲ್ದಾಣಗಳಿಂದ ಸುತ್ತ 8ರಿಂದ 12 ಕಿ.ಮೀ. ವಲಯದಲ್ಲಿ ನೆಲದಿಂದ 200 ಅಡಿ ಎತ್ತರದವರೆಗಿನ ಡ್ರೋನ್ ಹಾರಾಟಕ್ಕೂ ಫ್ಲೈಟ್ ಅನುಮತಿ ಬೇಡ ಎಂದು ಹೇಳಲಾಗಿದೆ.
5. ಡ್ರೋನ್ ಸೇವೆ ನೀಡುವ ಕಂಪನಿಗಳ ನೋಂದಣಿಗಾಗಿ ಈವರೆಗೆ 25 ವಿವಿಧ ಅರ್ಜಿಗಳನ್ನು ತುಂಬಬೇಕಿದ್ದು, ಅವನ್ನು 5ಕ್ಕೆ ಇಳಿಸಲಾಗಿದೆ. ಹಾಗೆಯೇ, ನೋಂದಣಿ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಕಟ್ಟಬೇಕಿದ್ದ 74 ರೀತಿಯ ಶುಲ್ಕಗಳನ್ನು 4ಕ್ಕೆ ಇಳಿಸಲಾಗಿದೆ.
Related Articles
“ಹೊಸ ಡ್ರೋನ್ ನಿಯಮಗಳಿಂದಾಗಿ, ಮುಂದಿನ ದಿನಗಳಲ್ಲಿ ಏರ್ ಟ್ಯಾಕ್ಸಿ ಸೇವೆಗಳು ಲಭ್ಯವಾಗಲಿವೆ” ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ತಿಳಿಸಿದ್ದಾರೆ. “ಸದ್ಯಕ್ಕೆ ಏರ್ ಟ್ಯಾಕ್ಸಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಜಗತ್ತಿನ ಹಲವು ರಾಷ್ಟ್ರಗಳು ನಿರ್ಧರಿಸಿವೆ. ಹೊಸ ಡ್ರೋನ್ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಅಂಥ ಸೌಕರ್ಯಕ್ಕೆ ರತ್ನಗಂಬಳಿ ಹಾಸಿವೆ” ಎಂದಿದ್ದಾರೆ.
Advertisement