ಹೊಸದಿಲ್ಲಿ: ಪುತ್ರನ ವಿವಾಹಕ್ಕೆ ಕೇರಳಕ್ಕೆ ತೆರಳಲಿರುವ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ, ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಗೆ ಇದೀಗ ಸುಪ್ರೀಂಕೋರ್ಟ್ ತಡೆ ನಿವಾರಿಸಿದೆ. ಅಲ್ಲದೇ ಭದ್ರತೆಗೆ 1.18 ಲಕ್ಷ ರೂ. ಆಗಲಿದೆ ಎಂದು ಕರ್ನಾಟಕ ಸುಪ್ರೀಂಕೋರ್ಟ್‌ಗೆ ಹೇಳಿದೆ. ಇದನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ಇದಕ್ಕೂ ಮೊದಲೇ ಮದನಿ ಭದ್ರತೆಗೆ 14.8 ಲಕ್ಷ ರೂ. ಆಗಲಿದೆ ಎಂದು ಕರ್ನಾಟಕ ಹೇಳಿದ್ದು, ಇದಕ್ಕೆ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ಇದರೊಂದಿಗೆ ಮದನಿ ಭೇಟಿಯ ದಿನವನ್ನೂ ಕೋರ್ಟ್ ಪರಿಷ್ಕರಿಸಿದೆ. ಈ ಮೊದಲು ಆ.7ರಿಂದ ಆ.14ರವರೆಗೆ ಕೋರ್ಟ್ ಭೇಟಿ ಕೊಟ್ಟಿದ್ದು, ಇದೀಗ ಆ.6ರಿಂದ ಆ.19ರವರೆಗೆ ಅವಕಾಶ ನೀಡಿದೆ. ಸ್ಥಳೀಯ ನ್ಯಾಯಾಲಯ ಮದನಿ ತಾಯಿಯ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಪುತ್ರನ ವಿವಾಹಕ್ಕೆ ತೆರಳಲು ಅನುಮತಿಸಿರಲಿಲ್ಲ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೇ ಭದ್ರತೆಗೆ ಕರ್ನಾಟಕ ವಿಧಿಸಿದ ಬಿಲ್ ದುಬಾರಿಯಾಗಿದೆ ಎನ್ನಲಾಗಿತ್ತು.