Advertisement
ಪಟ್ಟಣದ ಸಾಯಿಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಬೂತ್ ಸಮಿತಿ ಅಧ್ಯಕ್ಷರ, ಬೂತ್ ಏಜೆಂಟ್‌ರು ಹಾಗೂಕಾಂಗ್ರೆಸ್ ಗ್ರಾಪಂ ಮಟ್ಟದ ಅಧ್ಯಕ್ಷರ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಹುಟ್ಟಿದ ಪಕ್ಷವಲ್ಲ. ದೇಶದಲ್ಲಿ ಜನರ ಭಾವನೆಗಳನ್ನು ಅರಿತು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತ ನೀಡಿದೆ. ಒಂದೆಡೆ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ರಾಜ್ಯವನ್ನು ಹಸಿವು ಮುಕ್ತ ಕರ್ನಾಟಕ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ.
ಹಿಡಿಯುವುದಕ್ಕಾಗಿ ಏನು ಬೇಕಾದರೂ ಮಾಡಲು ಬಿಜೆಪಿ ಸಿದ್ಧವಿದೆ. ಕೋಮುಗಲಭೆಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವುದು ಬಿಜೆಪಿ ಕಾಯಕವಾಗಿದೆ. ಇದನೆಲ್ಲಾ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನಸಾಮಾನ್ಯರು ಹಾಗೂ ವಿರೋಧಿಗಳು
ಕೇಳುವ ಪ್ರಶ್ನೆಗೆ ಸಮರ್ಥವಾಗಿ ಉತ್ತರಿಸುವ ರೀತಿ ಬೂತ ಸಮಿತಿ ಅಧ್ಯಕ್ಷರನ್ನು ಸಿದ್ಧಪಡಿಸಬೇಕಾಗಿದೆ. ಕಳೆದ ಯುಪಿಎ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಮತದಾರರ ಮನೆ ಮನೆಗೆ ಮುಟ್ಟಿಸಿ ಅವರಿಗೆ ಅರಿವು ಮೂಡಿಸಬೇಕು ಎಂದರು. ಇದೇ ವೇಳೆ ಎನ್‌ಡಿಎ ಸರಕಾರದ ವೈಫಲ್ಯಗಳನ್ನು ಸಹ ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
Related Articles
ಬೂತ್‌ಗಳಲ್ಲಿ 18 ವರ್ಷ ಮೇಲ್ಪಟ್ಟ ಯುವಕರನ್ನು ಹೊಸ ಮತದಾರರನ್ನಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಲ್ಲಿ ಶ್ರಮ ವಹಿಸಬೇಕು. 25 ವರ್ಷಗಳಿಂದ ಕಾಂಗ್ರೆಸ್ ನಿರಂತರ ಸೋಲುತ್ತಿದ್ದು ಈ ಬಾರಿ ಕಾಂಗ್ರೆಸ್ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಮಾಡಬೇಕು ಎಂದರು.
Advertisement
ಮುಖಂಡ ಡಿ.ಎಸ್. ಹುಲಿಗೇರಿ, ಕೆಪಿಸಿಸಿ ಕಾರ್ಯದರ್ಶಿ ಎಚ್.ಬಿ. ಮುರಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡಕರಡಕಲ್, ಮುದಗಲ್ ಬ್ಲಾಕ್ ಅಧ್ಯಕ್ಷ ದಾವೂದ್, ಮುಖಂಡರಾದ ಬಸಣ್ಣ ಮೇಟಿ ಇತರರು ಇದ್ದರು.