Advertisement

ಕಾರ್ಯದರ್ಶಿ ಹುದ್ದೆ ಬಡ್ತಿಗೆ ಆಗ್ರಹ

08:49 AM Feb 15, 2019 | Team Udayavani |

ಹಗರಿಬೊಮ್ಮನಹಳ್ಳಿ: ಗ್ರಾಪಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಣಕಯಂತ್ರ ನಿರ್ವಾಹಕರನ್ನು ಕೂಡಲೇ ಗ್ರೇಡ್‌-2 ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ಕಾಯಂಗೊಳಿಸಬೇಕು ಎಂದು ಗ್ರಾಮ ಪಂಚಾಯತ್‌ ಕ್ಲರ್ಕ್‌ ಮತ್ತು ಗಣಕಯಂತ್ರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಪದಾಧಿಕಾರಿಗಳು ತಾಪಂ ಇಒಗೆ ಗುರುವಾರ ಮನವಿ ಸಲ್ಲಿಸಿದರು.

Advertisement

ಗಣಕಯಂತ್ರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಮಾತನಾಡಿ, ರಾಜ್ಯ ಗ್ರಾಮ ಪಂಚಾಯತ್‌ ಕ್ಲರ್ಕ್‌ ಮತ್ತು ಗಣಕಯಂತ್ರ ನಿರ್ವಾಹಕರು ಕಳೆದ ಹಲವು ವರ್ಷಗಳಿಂದಲೂ ಡಾಟಾ ಎಂಟ್ರಿ ಅಪರೇಟರ್‌ಗಳು ಕನಿಷ್ಠ ವೇತನಕ್ಕೆ ದುಡಿಯುವಂತಾಗಿದೆ. ಗ್ರಾಪಂಗಳ ಕ್ಲರ್ಕ್‌ ಮತ್ತು ಗಣಕಯಂತ್ರ ನಿರ್ವಾಹಕರಿಗೆ ಗ್ರೇಡ್‌-2 ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಬೇಕು. ನೌಕರರಿಗೆ ಕಾಯಂ ಉದ್ಯೋಗ ಭದ್ರತೆ ಕಲ್ಪಿಸದ ಹಿನ್ನೆಲೆಯಲ್ಲಿ ಆತಂಕದಲ್ಲಿದ್ದಾರೆ. ಈಗಾಗಲೇ ಗಣಕ ನಿರ್ವಾಹಕರಿಗೆ ವೇತನ ನೀಡಲು ಸರಕಾರದ ಆರ್ಥಿಕ ಇಲಾಖೆ ಸಹಮತ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

ಸಂಘದ ಸದಸ್ಯ ಕೊಟ್ರೇಶ್‌ ಕಾಶಿನಾಯ್ಕರ್‌ ಮಾತನಾಡಿ, ಗ್ರಾಪಂ ಕ್ಲರ್ಕ್‌ಗಳು, ಗಣಕಯಂತ್ರ ಆಪರೇಟರ್‌ಗಳು ಬಹುದಿನಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ಕೂಡಲೇ ಕಾಯಂಗೊಳಿಸಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಕಾಯಂಗೊಳಿಸಿ, ಉದ್ಯೋಗ ಭದ್ರತೆ ನೀಡಬೇಕು. 

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಫೆ.18ರಿಂದ ಅರ್ನಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ಗ್ರಾಪಂ ಸಿಬ್ಬಂದಿಗೆ ನ್ಯಾಯ ಕೊಡುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು. ತಾಪಂ ಇಒ ಮಲ್ಲನಾಯ್ಕಗೆ ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಸಂಗಪ್ಪ, ಕೊಟ್ರಪ್ಪ, ಕೊಟ್ರಮ್ಮ, ಕವಿತಾ, ದುರುಗಮ್ಮ, ಪ್ರಕಾಶ, ಅಶೋಕ್‌, ಉಮೇಶ, ಬಸವರಾಜ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next