Advertisement

ಕಾಶಿ ವಿಶ್ವನಾಥ ದೇಗುಲ ಬಳಿ ಭೂಗತ ನಗರಿ!

06:00 AM Jan 18, 2018 | Harsha Rao |

ವಾರಾಣಸಿ: ಭಯೋತ್ಪಾದಕರ ದಾಳಿಯ ಭೀತಿ ಎದುರಿಸುತ್ತಿರುವ ಕಾಶಿ ವಿಶ್ವನಾಥ ದೇಗುಲದ ಸಮೀಪದಲ್ಲೇ ರಹಸ್ಯವಾಗಿ ಭೂಮಿಯಡಿ ತಲೆ ಎತ್ತುತ್ತಿದ್ದ ಪುಟ್ಟ ಪಟ್ಟಣವೊಂದು ಪತ್ತೆಯಾಗಿದೆ. 

Advertisement

ಇದು ಈಗ ವಾರಾಣಸಿ ಪೊಲೀಸರ ಹಾಗೂ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರದಲ್ಲೇ ಇಂಥದ್ದೊಂದು ಬೆಳವಣಿಗೆ ದಾಖಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಪತ್ತೆಯಾಗಿದ್ದು ಹೇಗೆ?: ವಾರಾಣಸಿಯ ದಾಲ್‌ವುಂಡಿ ಪ್ರದೇಶದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಲಾಗಿದ್ದ ಕಟ್ಟಡವನ್ನು ತೆರವುಗೊಳಿಸುವ ಆದೇಶ ಪಾಲನೆಯ ಪ್ರಗತಿಯನ್ನು ಮಂಗಳವಾರ ರಾತ್ರಿ ಎಸ್‌ಎಸ್‌ಪಿ ಅಧಿಕಾರಿ ಆರ್‌.ಕೆ. ಭಾರದ್ವಾಜ್‌ ಪರಿಶೀಲಿಸುತ್ತಿದ್ದರು. ಆಗ ಈ ಪ್ರಾಂತ್ಯದ ಹಫೀಜ್‌ ಮಸೀದಿಯ ಬಳಿ ಬಂದಾಗ ಮಸೀದಿಯ ಕೆಳಗೆ ಯಾವುದೋ ಬೆಳಕು ಗೋಚರಿಸಿದೆ. ತತ್‌ಕ್ಷಣ ಅತ್ತ ದೃಷ್ಟಿ ಹಾಯಿಸಿ ಪೊಲೀಸ್‌ ಸಿಬಂದಿಯೊಡನೆ ಪರಿಶೀಲಿಸಿದಾಗ ಮಸೀದಿಯ ಕೆಳಗೆ ಒಂದು ಅಂತಸ್ತು ನಿರ್ಮಾಣವಾಗಿರುವುದು ಪತ್ತೆಯಾಯಿತು. ಇದರೊಳಗೆ ಪ್ರವೇಶಿಸಿ ನೋಡಿ ದಾಗ ಪುರಸಭೆ, ಜಿಲ್ಲಾಡಳಿತ, ಪೊಲೀಸರ ಗಮನಕ್ಕೆ ಬಾರದೆ ಅನಧಿಕೃತವಾಗಿ ನಿರ್ಮಾಣದ ಹಂತದಲ್ಲಿರುವ ಪುಟ್ಟ ನಗರವೇ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next