Advertisement
ಫ್ಯಾಷನ್ ಲೋಕದಲ್ಲಿ ಮತ್ತೆ ಲಗ್ಗೆ ಇಟ್ಟಿರುವ ವಸ್ತುಗಳಲ್ಲಿ, ಸದ್ಯಕ್ಕೆ ಟ್ರೆಂಡ್ ಆಗುತ್ತಿರುವ ಕ್ಲಚ್ ಕೂಡಾ ಒಂದು. ಇದು, ಪರ್ಸ್‌ಗಿಂತ ದೊಡ್ಡದಾದ ಮತ್ತು ಬ್ಯಾಗ್‌ಗಿಂತ ಚಿಕ್ಕದಾದ, ಚೊಕ್ಕದಾದ ಹಾಗೂ ಟ್ರೆಂಡಿ ಆಗಿರುವ ವ್ಯಾಲೆಟ್.
ದೊಡ್ಡ ಹ್ಯಾಂಡ್ ಬ್ಯಾಗಿನೊಳಗೆ ಈ ಪುಟ್ಟ ಕ್ಲಚ್ ಅನ್ನು ಆರಾಮವಾಗಿ ಕೊಂಡೊಯ್ಯಬಹುದು. ಮದುವೆ, ಹಬ್ಬ, ಸಮಾರಂಭ, ಪಾರ್ಟಿಗಳಿಗೆ ಹೋದಾಗ ಬ್ಯಾಗನ್ನು ಕಾರಿನಲ್ಲೋ, ಬೈಕಿನಲ್ಲೋ ಬಿಟ್ಟು, ಬರೀ ಕ್ಲಚ್ ಅನ್ನು ತೆಗೆದುಕೊಂಡು ಹೋಗಬಹುದು. ಅಗತ್ಯ ವಸ್ತುಗಳಾದ ಹಣ, ಡೆಬಿಟ್-ಕ್ರೆಡಿಟ್ ಕಾರ್ಡ್, ಮನೆ ಮತ್ತು ಗಾಡಿಯ ಕೀ, ಮೊಬೈಲ್, ಪೆನ್ ಅಷ್ಟೇ ಅಲ್ಲದೆ, ಲಿಪ್‌ಸ್ಟಿಕ್, ಪುಟ್ಟ ಕನ್ನಡಿ, ಟಿಶ್ಯೂ, ಐ ಲೈನರ್ ಮುಂತಾದ ಮೇಕಪ್ ಸಾಮಗ್ರಿಗಳನ್ನೂ ಇದರೊಳಗೆ ಇಡಬಹುದು. ಎರಡು ವಿಧಗಳಿವೆ
ಧರಿಸುವ ಬಟ್ಟೆಯಷ್ಟೇ, ಕೈಯಲ್ಲಿ ಹಿಡಿವ ಆ್ಯಕ್ಸೆಸರೀಸ್‌ಗಳೂ ಪ್ರಾಮುಖ್ಯತೆ ಪಡೆಯುವ ಈ ದಿನಗಳಲ್ಲಿ, ಕ್ಲಚ್‌ಗಳಲ್ಲಿ ಎರಡು ವಿಧಗಳನ್ನು ಕಾಣಬಹುದು. ಒಂದು-ದಿನನಿತ್ಯ ಉಪಯೋಗಿಸುವ ವಾಟರ್‌ಪ್ರೂಫ್ ಮೆಟೀರಿಯಲ್‌ನ ಕ್ಲಚ್‌ಗಳು. ಆಫೀಸ್, ಕಾಲೇಜಿಗೆ ಹೋಗುವಾಗ ಅಗತ್ಯ ವಸ್ತುಗಳನ್ನು ಇಡುವ ಈ ಕ್ಲಚ್‌ಗಳಲ್ಲಿ ಹೆಚ್ಚು ಆಡಂಬರ ಕಾಣಿಸದು.
Related Articles
Advertisement
ಆಫೀಸಿಗೂ ಸೈ, ಪಾರ್ಟಿಗೂ ಜೈಲೆದರ್ (ಚರ್ಮ), ಆರ್ಟಿಫೀಷಿಯಲ್ ಲೆದರ್, ಪ್ಲಾಸ್ಟಿಕ್, ರಬ್ಬರ್‌ನಂಥ ವಸ್ತುಗಳಿಂದ ತಯಾರಿಸಿದ ಕ್ಲಚ್‌ಗಳನ್ನು ಆಫೀಸ್‌ವೇರ್ ಜತೆ ಬಳಸಬಹುದು. ಪಾರ್ಟಿವೇರ್ ಜತೆಗೆ ಕಾಟೂನ್, ಕಾಮಿಕ್ ಕ್ಯಾರೆಕ್ಟರ್, ಡೂಡಲ್, ವಾರ್ಲಿ ಕಲೆ, ಇನ್ನಿತರ ಬಗೆಯ ಚಿತ್ರಕಲೆ, ಅನಿಮಲ್ ಪ್ರಿಂಟ್, ಪ್ಲೋರಲ್ ಪ್ರಿಂಟ್, ಪೋಲ್ಕಾ ಡಾಟ್ಸ್, ನಿಮ್ಮದೇ ಭಾವಚಿತ್ರ ಹೀಗೆ ಅನೇಕ ಬಗೆಯ ವಿನ್ಯಾಸಗಳನ್ನು, ಬಣ್ಣಗಳನ್ನು, ಪ್ರಿಂಟ್‌ಗಳನ್ನೂ ಆಯ್ಕೆ ಮಾಡಬಹುದು. ಮೊಬೈಲ್ ಕವರ್‌ಗಳನ್ನು ಆಗಾಗ ಬದಲಿಸಿದಂತೆ, ಕ್ಲಚ್‌ಗಳ ಮೇಲೂ ಪ್ರಯೋಗ ಮಾಡಬಹುದು. ಆದರೆ, ಸಾಂಪ್ರದಾಯಿಕ ಉಡುಗೆಗಳ ಜತೆ ಫಳ ಫಳ ಹೊಳೆಯುವ ಕ್ಲಚ್‌ಗಳ ಚಂದ! ನೇತಾಡುವ ಕ್ಲಚ್‌ಗಳು
ಕ್ಲಚ್‌ಗಳನ್ನು ಕೈಯಲ್ಲಿ ಹಿಡಿದು ಓಡಾಡುವುದು ಕಷ್ಟ ಆಗಬಾರದೆಂದು ಇದೀಗ ಅವುಗಳಿಗೆ ಸ್ಟ್ರಾಪ್, ಚೈನ್ ಮತ್ತು ಬೆಲ್ಟಗಳನ್ನು ಪೋಣಿಸುವ ಆಯ್ಕೆಯೂ ಲಭ್ಯ ಇವೆ. ಬೇಕಿದ್ದರೆ ಇವುಗಳನ್ನು ಲಗತ್ತಿಸಬಹುದು, ಬೇಡವಾದರೆ ಬಿಚ್ಚಿಟ್ಟು ಕ್ಲಚ್ ಅನ್ನು ಮಾತ್ರ ಕೈಯಲ್ಲಿ ಹಿಡಿದು ಓಡಾಡಬಹುದು. - ಧನ್ಯಶ್ರೀ ಬೋಳಿಯಾರ್