Advertisement

ಸೀಕ್ರೆಟ್‌ ಆಫ್ ಸೀಮೆಂಟ್‌

06:00 AM Apr 09, 2018 | |

ಸಾಮಾನ್ಯವಾಗಿ ಮನೆ ಕಟ್ಟುವವರು, ಸಿಮೆಂಟ್‌ ಹೆಚ್ಚು ಸುರಿದಷ್ಟೂ ಕಟ್ಟಡ ಹೆಚ್ಚು ಗಟ್ಟಿಯಾಗಿರುತ್ತದೆ ಎಂದು ಯೋಚಿಸುವುದುಂಟು. ಆದರೆ, ಸಿಮೆಂಟ್‌ ತನ್ನ ಗಟ್ಟಿತನವನ್ನು ಪಡೆಯುವುದೇ ಸ್ವಲ್ಪ ಕುಗ್ಗುವುದರಿಂದ. ಅಂದರೆ, ಸಿಮೆಂಟ್‌ ಹಾಕಿ ಮಾಡಿದ ಕಾಂಕ್ರಿಟ್‌ “ಕ್ಯೂರ್‌ ಆಗಿ’ ಗಟ್ಟಿಗೊಳ್ಳುತ್ತಾ, ಗಟ್ಟಿಕೊಳ್ಳುತ್ತಾ ಸ್ವಲ್ಪ ಕುಗ್ಗುತ್ತದೆ ಅಂದರೆ ಶ್ರಿಂಕ್‌ ಆಗುತ್ತದೆ. ಹೀಗೆ ಶ್ರಿಂಕ್‌ ಆಗುವುದರಿಂದಲೇ ಕಾಂಕ್ರೀಟ್‌ ಉಕ್ಕಿನ ಸರಳುಗಳೊಂದಿಗೆ ಗಟ್ಟಿಯಾಗಿ ಬೆಸೆದುಕೊಳ್ಳಲು ಸಾಧ್ಯವಾಗುವುದು. 

Advertisement

ಎಲ್ಲರಿಗೂ ಒಳ್ಳೆಯ ಮನೆ ಕಟ್ಟಬೇಕು ಎಂಬ ಆಸೆ ಇರುತ್ತದೆ. ಹಾಗೆಯೇ ಅದು ದುಬಾರಿ ಖರ್ಚಿಗೂ ಕಾರಣ ಆಗಬಾರದು ಎಂಬ ಇನ್ನೊಂದು ಆಸೆಯೂ ಇರುತ್ತದೆ. ಗುಣಮಟ್ಟ ಕಾಯ್ದುಕೊಂಡೂ ಹೆಚ್ಚು ಖರ್ಚು ಮಾಡದೆ ಇರಬೇಕೆಂದರೆ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇವುಗಳಲ್ಲಿ ಒಂದಷ್ಟು ಮ್ಯಾನೇಜ್‌ಮೆಂಟ್‌- ಉಸ್ತುವಾರಿಗೆ ಸಂಬಂಧಿಸಿದ್ದರೆ, ಮಿಕ್ಕವು ತಾಂತ್ರಿಕ ಪರಿಜಾnನದಿಂದಾಗಿ ಮಾಡಬಹುದಾದ ಉಳಿತಾಯಗಳಾಗಿರುತ್ತವೆ. ಕೆಲವೊಮ್ಮೆ ಸಣ್ಣಪುಟ್ಟ ಖರ್ಚುಗಳನ್ನು ಹೆಚ್ಚು ತಲೆ ಕೆಡಿಸಿಕೊಳ್ಳದೆ ಸಮಯ ಉಳಿಸಲು ಗುಣಮಟ್ಟ ನೋಡಿ ತಕ್ಷಣಕ್ಕೆ ಮಾಡಬೇಕಾದರೂ ದೊಡ್ಡ ಮಟ್ಟದವನ್ನು ಮುಂಜಾಗರೂಕತೆ ವಹಿಸಿ ಆ ಕಡೆ ಕಳಪೆಯಾಗಿರದಂತೆ ನೋಡಿಕೊಳ್ಳುವುದರ ಜೊತೆಗೆ ಈ ಕಡೆ ತೀರಾ ದುಬಾರಿ ಆಗಿರದಂತೆಯೂ ಕಾಳಜಿ ವಹಿಸುವುದು ಉತ್ತಮ.

ಸಿಮೆಂಟ್‌ ಗುಣಮಟ್ಟ
ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಮೆಂಟ್‌ಗಳಲ್ಲಿ ಸಾಮಾನ್ಯವಾಗಿ ಹತ್ತಾರು ರೂಪಾಯಿ ವ್ಯತ್ಯಾಸ, ಒಂದು ಕಂಪನಿಯಿಂದ ಮತ್ತೂಂದಕ್ಕೆ ಇರುತ್ತದೆ. ಯಾವುದು ಉತ್ತಮ ಎಂಬುದು ಅನೇಕ ಬಾರಿ ಪ್ರಶ್ನೆಯಾಗಿಯೇ ಉಳಿಯುತ್ತದೆ. ಕೆಲವೊಮ್ಮೆ ಪ್ರತಿಷ್ಠಿತ ಕಂಪನಿಯ ಸಿಮೆಂಟ್‌ ಒಂದೆರಡು ರೂಪಾಯಿ ಕಡಿಮೆ ಬೆಲೆಗೆ ಸಿಕ್ಕರೆ, “ಇದೇನು ಡೂಪ್ಲಿಕೇಟ್‌ ಮಾಲ್‌ ಇರಬಹುದೇ?’ ಎಂಬ ಪ್ರಶ್ನೆಯೂ ಏಳುತ್ತದೆ. ಒಂದೆರಡು ಮೂಟೆಯಾದರೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿರುತ್ತಿರಲಿಲ್ಲ. ಆದರೆ, ಒಂದು ಮನೆಗೆ ನೂರಾರು ಮೂಟೆ ಸಿಮೆಂಟ್‌ ಬೇಕಾಗುವುದರಿಂದ ನಾವು ಸಹಜವಾಗೇ ಸ್ವಲ್ಪ ಯೋಚಿಸಿ ನಿರ್ಧರಿಸಬೇಕಾಗುತ್ತದೆ.

ಸಿಮೆಂಟ್‌ ಬೆಲೆ ನಿರ್ಧರಿಸಬೇಕಾದರೆ, ಕಂಪನಿಯವರು ಅದನ್ನು ಉತ್ಪಾದಿಸಲು ಎಷ್ಟು ಖರ್ಚು ತಗುಲಿತು ಎಂಬುದನ್ನು ಆಧರಿಸಿ ರೇಟು ಕಟ್ಟಿರುತ್ತಾರೆ. ಸಿಮೆಂಟಿಗೆ ಬೇಕಾಗುವ ಮುಖ್ಯ ಕಚ್ಚಾ ಸರಕುಗಳಾದ ಸುಣ್ಣದ ಕಲ್ಲು, ಜೇಡಿಮಣ್ಣು, ಕಲ್ಲಿದ್ದಲು ಇಲ್ಲವೇ ಉರುವಲು ಎಣ್ಣೆ ಹತ್ತಿರದಲ್ಲಿ ಅಥವಾ ಹಡಗಿನ ಮೂಲಕ  ಬರುವಂತಿದ್ದರೆ, ಸಿಮೆಂಟಿನ ತಯಾರಿಕಾ ವೆಚ್ಚ ದುಬಾರಿ ಆಗುವುದಿಲ್ಲ. ಹಾಗೆಯೇ, ಹೊಸ ಸಿಮೆಂಟ್‌ ಫ್ಯಾಕ್ಟರಿ ಆಗಿದ್ದರೆ, ಅದಕ್ಕೆ ತಗಲಿದ ಖರ್ಚು ಹೆಚ್ಚಾಗಿದ್ದು, ಹಾಕಿದ್ದ ಬಂಡವಾಳ ಹಿಂದಕ್ಕೆ ಪಡೆಯಲು ಬೆಲೆ ಸ್ವಲ್ಪ ಹೆಚ್ಚಾಗಿಯೂ ಇರುತ್ತದೆ. ಆದರೆ, ಹಳೆಯ ಸಿಮೆಂಟ್‌ ಫ್ಯಾಕ್ಟರಿಯಲ್ಲಿ ತಯಾರಾದ ಸಿಮೆಂಟ್‌ ಬೆಲೆ ಕಡಿಮೆ ಇರಲು ಮುಖ್ಯ ಕಾರಣ- ಅದಕ್ಕೆ ಹಾಕಿದ ಬಂಡವಾಳ ಈಗಾಗಲೇ ಹಿಂದಕ್ಕೆ ಬಂದಿರುತ್ತಾದ್ದರಿಂದ, ಕಡಿಮೆ ಲಾಭಕ್ಕೆ ಮಾರುವ ಸಾಧ್ಯತೆ ಹೆಚ್ಚಿರುತ್ತೆ.

ಹೊಸ ಸಿಮೆಂಟ್‌ ಫ್ಯಾಕ್ಟರಿಯವರು “ನಾವು ಹೊಸ ತಂತ್ರಜಾnನದೊಂದಿಗೆ ಅತ್ಯಾಧುನಿಕ ಯಂತ್ರಗಳಲ್ಲಿ ತಯಾರಿಸುತ್ತೇವೆ. ಅದಕ್ಕೇ ನಮ್ಮಲ್ಲಿ ದುಬಾರಿ ದರ’ ಎಂದು ಪ್ರಚಾರ ಮಾಡುತ್ತಾರೆ. ಇಂಥ ಸಂದರ್ಭಗಳಲ್ಲಿ ಹಳೆಯ ಕಂಪನಿಗಳು ಪೈಪೋಟಿಗೆ ನಿಲ್ಲುತ್ತವೆ. ಆದುದರಿಂದ ನಾವು ನಮ್ಮ ಅಗತ್ಯಗಳನ್ನು ನೋಡಿಕೊಂಡು ಕಂಪನಿಗಳು ಜಾಹೀರಾತು ಮಾಡುವ ಸಂಗತಿಗಳನ್ನು ಪರಿಶೀಲಿಸಿ ಸಿಮೆಂಟ್‌ ಬ್ರಾಂಡ್ಸ್ ಖರೀದಿಸುವುದು ಉತ್ತಮ.

Advertisement

ನೀರಿನ ಸಂಪರ್ಕದಲ್ಲಿರುವ ಪಾಯ- ಫ‌ುಟಿಂಗ್‌, ಹೆಚ್ಚು ಭಾರ ಹೊರುವ ಕಾಲಂ- ಕಂಬಗಳಿಗೆ ಹೊಸ ತಂತ್ರಜಾnನದಲ್ಲಿ ತಯಾರಿಸಿದ ಹೆಚ್ಚು ಭಾರ ಹೊರುವ ಕಾಂಕ್ರಿಟ್‌ ತಯಾರಿಕೆಗೆ ಅಗತ್ಯವಾದ 53 ಗ್ರೇಡ್‌ ಸಿಮೆಂಟ್‌ ಅನ್ನು ಬಳಸಿದರೆ ಉತ್ತಮ. ಹೆಚ್ಚು ಭಾರ ಹೊರದ, ಗೋಡೆಗಳಿಗೆ, ಪ್ಲಾಸ್ಟರ್‌ ಮಾಡಲು ಹಾಗೂ ಬೆಡ್‌ ಕಾಂಕ್ರೀಟ್‌ನಂಥ ಕೆಲಸಗಳಿಗೆ 43 ಗ್ರೇಡ್‌ ಸಿಮೆಂಟ್‌ ಬಳಸಿದರೆ ಏನೂ ತೊಂದರೆ ಆಗುವುದಿಲ್ಲ. ಸಿಮೆಂಟ್‌ ನುಣುಪಾಗಿದ್ದಷ್ಟೂ ಹಾಗೂ ಅದಕ್ಕೆ ಬಳಸಿದ ಇತರೆ ಸಾಮಾಗ್ರಿಗಳ ಗುಣಮಟ್ಟ ಆಧರಿಸಿ ಅದರ ಗಟ್ಟಿತನ ನಿರ್ಧರಿತವಾಗಿರುತ್ತದೆ. ಸಿಮೆಂಟ್‌ ಗುಂಡುಗಳನ್ನು ನುಣುಪಾಗಿ ಪುಡಿ ಮಾಡಲು ಹೆಚ್ಚು ಸಮಯ ಹಾಗೂ ಯಂತ್ರಗಳ ಸಹಾಯ ಬೇಕಾಗಿರುವುದರಿಂದ, ಇಂಥ ಸಿಮೆಂಟ್‌ ದುಬಾರಿಯಾಗಿರುತ್ತದೆ. 

ಗಟ್ಟಿ ಸಿಮೆಂಟಿನ ಮಿತಿಗಳು
ಸಾಮಾನ್ಯವಾಗಿ ಮನೆ ಕಟ್ಟುವವರು ಸಿಮೆಂಟ್‌ ಹೆಚ್ಚು ಸುರಿದಷ್ಟೂ ಕಟ್ಟಡ ಹೆಚ್ಚು  ಗಟ್ಟಿಯಾಗಿರುತ್ತದೆ ಎಂದು ಯೋಚಿಸುವುದುಂಟು. ಆದರೆ, ಸಿಮೆಂಟ್‌ ತನ್ನ ಗಟ್ಟಿತನವನ್ನು ಪಡೆಯುವುದೇ ಸ್ವಲ್ಪ ಕುಗ್ಗುವುದರಿಂದ. ಅಂದರೆ, ಸಿಮೆಂಟ್‌ ಹಾಕಿ ಮಾಡಿದ ಕಾಂಕ್ರಿಟ್‌ “ಕ್ಯೂರ್‌ ಆಗಿ’ ಗಟ್ಟಿಗೊಳ್ಳುತ್ತ ಗಟ್ಟಿಗೊಳ್ಳುತ್ತ ಸ್ವಲ್ಪ ಕುಗ್ಗುತ್ತದೆ ಅಂದರೆ, ಶ್ರಿಂಕ್‌ ಆಗುತ್ತದೆ. ಹೀಗೆ ಶ್ರಿಂಕ್‌ ಆಗುವುದರಿಂದಲೇ ಕಾಂಕ್ರೀಟ್‌ ಉಕ್ಕಿನ ಸರಳುಗಳೊಂದಿಗೆ ಗಟ್ಟಿಯಾಗಿ ಬೆಸೆದುಕೊಳ್ಳಲು ಸಾಧ್ಯವಾಗುವುದು. ಈ ಬೆಸುಗೆ ಎಷ್ಟು ಗಟ್ಟಿಮುಟ್ಟಾಗಿರುತ್ತದೆ ಎಂದರೆ ಎರಡು ಭಿನ್ನ ವಸ್ತುಗಳು- ಒಂದು ಲೋಹ ಮತ್ತೂಂದು ಲೋಹೇತರ ವಸ್ತು ಆಗಿದ್ದರೂ ಕೆಲ ಮುಖ್ಯ ವಿಷಯಗಳಲ್ಲಿ ಒಂದಕ್ಕೊಂದು ತಾಳೆ ಆಗುವುದರಿಂದ, ಉದಾಹರಣೆಗೆ ಕಬ್ಬಿಣ ಹಾಗೂ ಸಿಮೆಂಟ್‌ ಕಾಂಕ್ರೀಟ್‌ ಬಿಸಿಲಿಗೆ ಹಿಗ್ಗುವ ಹಾಗೂ ಚಳಿಗೆ ಕುಗ್ಗುವ ಪರಿ ಹೆಚ್ಚಾ ಕಡಿಮೆ ಒಂದೇ ಆಗಿರುತ್ತದೆ. ಈ ಕಾರಣದಿಂದಾಗಿಯೇ ಒಂದು ಮಿತಿಯಲ್ಲಿ ಆರ್‌ಸಿಸಿಯ ಒಂದು ಅತಿ ಸಂಕೀರ್ಣ ವಸ್ತುವೇ ಆಗಿದ್ದರೂ, ಅತಿ ಸರಳವಾದದ್ದೇನೋ ಎಂಬಂತೆ ವರ್ತಿಸುವುದರಿಂದ, ನಾವು ಈ ಎಲ್ಲ ಕ್ಲಿಷ್ಟಕರ ಸಂಗತಿಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ದುಬಾರಿ ವಸ್ತುಗಳ ಮೇಲೇಕೆ ಪ್ರೀತಿ?
ಸಿಮೆಂಟ್‌ ಕುಗ್ಗುತ್ತ ಗಟ್ಟಿತನ ಪಡೆದುಕೊಳ್ಳುವ ಪ್ರಕ್ರಿಯೆ ಸಾಮಾನ್ಯವಾಗಿ ಏನೂ ತೊಂದರೆ ಮಾಡದಿದ್ದರೂ, ಎಲ್ಲಿ ಅದರ ಬಳಕೆ ವಿಸ್ತಾರವಾಗಿರುತ್ತದೋ, ಅಲ್ಲೆಲ್ಲ ಮಿತಿ ಮೀರಿದ ಬಳಕೆ, ಬಲಕ್ಕಿಂತ ದುರ್ಬಲತೆಯನ್ನೇ ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಾವು ಸಿಮೆಂಟ್‌ ಪ್ಲಾಸ್ಟರ್‌ಗೆ ಮಾಮೂಲಿ ಆರಕ್ಕೆ ಒಂದರಂತೆ, ಅಂದರೆ ಒಂದು ಪಾಲು ಸಿಮೆಂಟಿಗೆ ಆರು ಪಾಲು ಮರಳು ಮಿಶ್ರಣ ಮಾಡುವ ಬದಲು ಒಂದಕ್ಕೆ ಮೂರರಂತೆ ಬೆರಕೆ ಮಾಡಿ ಹೆಚ್ಚು ಗಟ್ಟಿಯಾಗಿರುತ್ತದೆ ಎಂದು ಎಣಿಸಿದರೆ, ಆ ಗೋಡೆಯ ಪ್ಲಾಸ್ಟರ್‌ ಕ್ಯೂರ್‌ ಆಗುತ್ತಾ ಆಗುತ್ತಾ ಬಿರುಕು ಬಿಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೀಗಾಗಲು ಮುಖ್ಯ ಕಾರಣ ಒಂದಕ್ಕೆ ಆರರಂತೆ ಮಿಶ್ರಣ ಮಾಡಿ ಬಳಿದ ಸಿಮೆಂಟ್‌ ಪ್ಲಾಸ್ಟರ್‌ಗಿಂತ ಒಂದಕ್ಕೆ ಮೂರರಂತೆ ಹಾಕಿ ಬಳಿದ ಪ್ಲಾಸ್ಟರ್‌ ಎರಡು ಮೂರು ಪಾಲು ಹೆಚ್ಚು ಕುಗ್ಗಿ- ಶ್ರಿಂಕ್‌ ಆಗಿ ಹತ್ತಾರು ಬಿರುಕುಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ! ನಾವು ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ದುಬಾರಿ ವಸ್ತುಗಳನ್ನು ಸುಮ್ಮನೆ ಸುರಿಯುವ ಬದಲು, ಅಳೆದು ತೂಗಿ ನೋಡಿ ಮನೆ ಕಟ್ಟಿದರೆ, ನಮ್ಮ  ಕಟ್ಟಡ ಸದೃಢ ಆಗಿರುವುದರ ಜೊತೆಗೆ ಹೆಚ್ಚು ದುಬಾರಿಯೂ ಆಗುವುದಿಲ್ಲ!

ಹೆಚ್ಚಿನ ಮಾಹಿತಿಗೆ: 9844132826
– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next