Advertisement

Leaked!: ಅಮೆರಿಕ ಗುಪ್ತಚರ ಇಲಾಖೆಯ ರಹಸ್ಯ ಮಾಹಿತಿಗಳು ಸೋರಿಕೆ!

11:30 PM Apr 12, 2023 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಟ್ವಿಟರ್‌, ಟೆಲಿಗ್ರಾಮ್‌, ಡಿಸ್ಕಾರ್ಡ್‌ನಂತಹ ಸಾಮಾ­­ಜಿಕ ತಾಣಗಳಲ್ಲಿ ಅಮೆರಿಕದ ಅತ್ಯಂತ ರಹಸ್ಯ ಗುಪ್ತಚರ ದಾಖಲೆಗಳು ಬಹಿರಂಗವಾಗಿವೆ. ಸ್ವತಃ ಅಮೆರಿಕ ಸರಕಾರ ಇದರಿಂದ ವಿಚಲಿತ­ಗೊಂ­ಡಿದ್ದು, ಅವನ್ನೆಲ್ಲ ನಿರ್ಬಂಧಿಸಿದೆ. ಅಮೆರಿಕದ ಗುಪ್ತಚರ ಇಲಾಖೆಯ ಸೂಕ್ಷ್ಮಾತಿಸೂಕ್ಷ್ಮ ಸಂಗತಿ ಗಳು ಬಹಿ­ರಂಗ­ವಾ­ಗಿರುವುದು ಆ ದೇಶದ ಭದ್ರತಾ ವೈಫ‌ಲ್ಯವೆಂದೇ ಬಿಂಬಿತವಾಗಿದೆ.

Advertisement

ಮುಖ್ಯವಾಗಿ ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಹಲವು ಮಾಹಿತಿಗಳು ಬಹಿರಂಗ­ವಾಗಿವೆ. ರಷ್ಯಾ ವಶಪಡಿಸಿಕೊಂಡ ತನ್ನ ನೆಲವನ್ನು ಮರಳಿ ಪಡೆಯಲು ಉಕ್ರೇನ್‌ ಹೊರಟಿದ್ದಾಗ, ನಿಮಗೆ ಅಗತ್ಯ ಶಸ್ತ್ರಾಸ್ತ್ರ-­ಸೈನ್ಯಬಲ ಕೊರತೆಯಾ­ಗುತ್ತದೆ, ಅಂತಿಮ­ವಾಗಿ ಸಾವುನೋವಿನ ಸಂಖ್ಯೆ ಜಾಸ್ತಿಯಾಗ­ಬಹುದು. ನಿಮ್ಮ ಸೇನಾ ತರಬೇತಿ ವ್ಯವಸ್ಥೆ ದುರ್ಬಲವಾಗಿದೆ. ಸೋವಿಯತ್‌ ಕಾಲದ ಯುದ್ಧವಿಮಾನ ನಿಗ್ರಹ ಕ್ಷಿಪಣಿ­ಗಳು ನಿಮ್ಮ ಬಳಿ ಕಡಿಮೆಯಾಗಿವೆ, ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದೂ ಅಮೆರಿಕ ತಿಳಿಸಿತ್ತು. ಹಾಗೆಯೇ ಈಜಿಪ್ಟ್ ಗುಪ್ತವಾಗಿ 40,000 ರಾಕೆಟ್‌ಗಳನ್ನು ಸಿದ್ಧ ಪಡಿಸಿ, ಪಾಶ್ಚಾತ್ಯ ರಾಷ್ಟ್ರಗಳಿಗೆ ಗೊತ್ತಾಗದಂತೆ ರಷ್ಯಾಕ್ಕೆ ಕಳುಹಿಸಲು ತಿಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ

ಪ್ರಧಾನಿ ಮೋದಿಗೆ ಝೆಲೆನ್‌ಸ್ಕಿ ಪತ್ರ: ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next