ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್ ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ವಿಕೇಂದ್ರಿತ ವ್ಯವಸ್ಥೆ ಮೂಲಕ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕೋವಿಡ್ 19 ಹಿನ್ನೆಲೆ ದ್ವಿತೀಯ ಪಿಯುಸಿ ಮೌಲ್ಯಮಾಪನವನ್ನು ಜಿಲ್ಲಾ ಹಂತದಲ್ಲೇ ನಡೆಸಲು ಉಪನ್ಯಾಸಕರು, ಪ್ರಾಚಾರ್ಯರು ಆಗ್ರಹಿಸಿದ್ದರು. ಆದರೆ, ಸರ್ಕಾರ, ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇಂಗ್ಲಿಷ್ ಹೊರತುಪಡಿಸಿ ಬೇರೆಲ್ಲ ಪರೀಕ್ಷೆಮುಗಿದಿದ್ದು, ಮೌಲ್ಯಮಾಪನ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ಜೂ.18ರಂದು ಇಂಗ್ಲಿಷ್ ಪರೀಕ್ಷೆ ನಡೆಯಲಿದ್ದು, ಈ ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ಜಿಲ್ಲಾ ಕೇಂದ್ರ ಗಳಲ್ಲೇ ನಡೆಸಲು ಇಲಾಖೆ ನಿರ್ದೇಶಿಸಿದೆ. ವಿಕೇಂದ್ರಿಕರಣಗೊಳಿಸಿದ್ದರೂ, ಎಲ್ಲಾ ಜಿಲ್ಲೆಗೆ ಹಂಚಿಕೆ ಮಾಡಿಲ್ಲ. ಬೆಂ.ಉತ್ತರ, ಚಿಕ್ಕಬಳ್ಳಾಪುರ, ತುಮಕೂರಿನ ಉತ್ತರ ಪತ್ರಿಕೆ ಗಳ ಮೌಲ್ಯಮಾಪನ ಬೆಂಗಳೂರಿನಲ್ಲಿ ನಡೆ ಯಲಿದೆ. ಬೆಂ. ಗ್ರಾಮಾಂತರ, ಕೋಲಾರ, ಮಂಡ್ಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಬೆಂಗಳೂರಿನ ಇನ್ನೊಂದು ಮೌಲ್ಯಮಾಪನ ಕೇಂದ್ರದಲ್ಲಿ ನಡೆಯಲಿದೆ.
ಹಾವೇರಿ ಮತ್ತು ಚಿಕ್ಕಮಗಳೂರಿನ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದಾವಣಗೆರೆ ಯಲ್ಲಿ ನಡೆಯಲಿದೆ. ಧಾರವಾಡ ಮತ್ತು ರಾಯಚೂರಿನ ಉತ್ತರ ಪತ್ರಿಕೆ ಮೌಲ್ಯಮಾಪನ ಬೆಳಗಾವಿಯಲ್ಲಿ ನಡೆಯಲಿದೆ. ವಿಜಯಪುರದ ಮೌಲ್ಯಮಾಪನ ಕಲಬುರ ಗಿಯಲ್ಲಿ, ಬಾಗಲಕೋಟೆ ಉತ್ತರ ಪತ್ರಿಕೆ ಮೌಲ್ಯಮಾಪನ ವಿಜಯಪುರದಲ್ಲಿ, ಬೆಳ ಗಾವಿ ಉತ್ತರ ಪತ್ರಿಕೆ ಮೌಲ್ಯಮಾಪನ ಧಾರವಾಡದಲ್ಲಿ, ಮೈಸೂರು ಮತ್ತು ಕೊಡಗಿನ ಉತ್ತರ ಪತ್ರಿಕೆ ಮೌಲ್ಯಮಾಪನ ಮಂಗಳೂರಿ ನಲ್ಲಿ, ಹಾಸನ, ಉಡುಪಿ, ರಾಮನಗರದ ಉತ್ತರ ಪತ್ರಿಕೆ ಮೌಲ್ಯಮಾಪನ ಮೈಸೂರಿ ನಲ್ಲಿ, ಚಿತ್ರದುರ್ಗದ ಉತ್ತರ ಪತ್ರಿಕೆ ಮೌಲ್ಯಮಾಪ ನ ಬಳ್ಳಾರಿಯಲ್ಲಿ ನಡೆಯಲಿದೆ.
ಕಲಬುರಗಿ ಮತ್ತು ಬೀದರ್‌ನ ಉತ್ತರ ಪತ್ರಿಕೆ ಮೌಲ್ಯಮಾಪನ ರಾಯಚೂರಿನಲ್ಲಿ, ಶಿವಮೊಗ್ಗದ ಉತ್ತರ ಪತ್ರಿಕೆ ಮೌಲ್ಯಮಾಪನ ಉತ್ತರ ಕನ್ನಡದಲ್ಲಿ, ಮಂಗಳೂರು ಮತ್ತು ಚಾಮರಾಜನಗರ ಉತ್ತರ ಪತ್ರಿಕೆ ಮೌಲ್ಯಮಾಪನ ಹಾಸನದಲ್ಲಿ, ಬೆಂಗಳೂರು ದಕ್ಷಿಣದ ಉತ್ತರ ಪತ್ರಿಕೆ ಮೌಲ್ಯಮಾಪನ ತುಮ ಕೂರಿನಲ್ಲಿ, ಕಾರವಾರದ ಮೌಲ್ಯಮಾಪನ ಹಾವೇರಿಯಲ್ಲಿ, ಚಿಕ್ಕೋಡಿ ಮತ್ತು ಗದಗದ ಉತ್ತರ ಪತ್ರಿಕೆ ಮೌಲ್ಯಮಾಪನ ಬಾಗಲ ಕೋಟೆಯಲ್ಲಿ, ಕೊಪ್ಪಳದ ಉತ್ತರ ಪತ್ರಿಕೆ ಮೌಲ್ಯಮಾಪನ ಗದಗದಲ್ಲಿ, ಯಾದಗಿರಿ ಉತ್ತರ ಪತ್ರಿಕೆ ಮೌಲ್ಯಮಾಪನ ಬೀದರ್ ನಲ್ಲಿ,
ಬಳ್ಳಾರಿಯ ಉತ್ತರ ಪತ್ರಿಕೆ ಮೌಲ್ಯಮಾಪನ ಚಿತ್ರದುರ್ಗದಲ್ಲಿ ಹಾಗೂ ದಾವಣ ಗೆರೆ ಮೌಲ್ಯಮಾಪನ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಪಿಯು ಇಲಾಖೆ ತಿಳಿಸಿದೆ. ಪರೀಕ್ಷೆ ಮುಗಿದ ನಂತರವೇ ಉತ್ತರ ಪತ್ರಿಕೆಗಳ ಬಂಡಲುಗಳು ಸುರಕ್ಷಿತವಾಗಿ ಆಯಾ ಜಿಲ್ಲೆಗಳಿಗೆ ಕಳುಹಿಸುವ ಬಗ್ಗೆ ಮತ್ತು ಅದನ್ನು ಅತ್ಯಂತ ಸುರಕ್ಷಿತ ರೀತಿಯಲ್ಲಿ ಮೌಲ್ಯಮಾಪನ ಕೇಂದ್ರಕ್ಕೆ ಕೊಂಡೊಯ್ಯುವ ಕುರಿತು ಆಯಾ ಜಿಲ್ಲಾ ಉಪನಿರ್ದೇಶಕರಿಗೆ ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಇಲಾಖೆ ಸೂಚನೆ ಹೊರಡಿಸಿದೆ.