Advertisement
ಫಿವರ್ ಕ್ಲಿನಿಕ್ ತೆರೆಯಲಾಗುತ್ತಿದೆ: ಈಗಾಗಲೇ ಮೈಸೂರು ನಗರದ ಮತ್ತು ನಂಜನಗೂಡಿನಲ್ಲಿ ಈ ಕ್ಲಿನಿಕ್ ಕಾರ್ಯಾರಂಭ ಮಾಡಿದೆ. ಇದು ಕೋವಿಡ್ ಕ್ಲಿನಿಕ್ ಅಲ್ಲ. ಬದಲಿಗೆ ಇದೊಂದು ಸ್ಕ್ರೀನಿಂಗ್ ಅಷ್ಟೆ. ಕೆಮ್ಮು, ಜ್ವರ ಕಾಣಿಸಿಕೊಂಡರೆ ಬಂದು ಪರೀಕ್ಷೆಗೆ ಒಳಪಡಬಹುದು. ಕೋವಿಡ್-19 ಹೊರತಾಗಿ ಇತರೆ ಕಾರಣದಿಂದ ಬಂದಿದ್ದರೆ ಚಿಕಿತ್ಸೆ ನೀಡಿ ಕಳುಹಿಸುತ್ತಾರೆ. ಉಸಿರಾಟದ ತೊಂದರೆ, ಜ್ವರ ಮತ್ತು ಒಣಕೆಮ್ಮು ಇದ್ದರೆ ಮಾತ್ರ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂದರು. ಇತರೆ ಕಾಯಿಲೆಗೆ ಫಿವರ್ ಕ್ಲಿನಿಕ್‌ನಲ್ಲಿ ಪರೀಕ್ಷೆ ಮಾಡುವುದಿಲ್ಲ. ಅವರನ್ನು ಬೇರೆಡೆಗೆ ಕಳುಹಿಸಲು ಸೂಚಿಸಲಾಗಿದೆ. ನಂಜನಗೂಡಿನಲ್ಲಿ ಒಂದು ಪಿಎಚ್‌ಸಿ ಮಾತ್ರ ಪ್ರಾರಂಭಿಸಲಾಗಿದೆ. ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಯಾವ ಪ್ರದೇಶದಲ್ಲಿ ಸೋಂಕಿತರು ಇದ್ದಾರೆ ಎಂಬ ಮ್ಯಾಪ್ ಸಿದ್ಧಪಡಿಸಿದ್ದೇವೆ ಎಂದರು.
ಮೈಸೂರಿನವರು ನಿರ್ಗತಿಕರಿಗೆ, ನಿರಾಶ್ರಿತರಿಗೆ ನೆರವು ನೀಡಬೇಕು. ನಗರಪಾಲಿಕೆಯು ದಾನಿಗಳ ನೆರವಿನಿಂದ ನಿತ್ಯ 10 ಸಾವಿರ ಮಂದಿಗೆ ಊಟ ಪೂರೈಸುತ್ತಿದ್ದೇವೆ ಎಂದು ನಗರ ಪಾಲಿಕೆ ಆಯುಕ್ತ ಗುರುದತ ಹೆಗಡೆ ತಿಳಿಸಿದರು. ನಗರದ 17ರಿಂದ 18 ಕೇಂದ್ರಗಳಲ್ಲಿ ನಿರಾಶ್ರಿತರು, ಬಡವರು ಹಾಗೂ ಅಸಹಾಯಕರಿಗೆ ಊಟದ ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು 3500 ಮಂದಿಗೆ ಪಡಿತರ ಕಾರ್ಡ್ ಇಲ್ಲ. ಅಂದರೆ ಅಸಂಘಟಿತ ಕಾರ್ಮಿಕರು ಮತ್ತು ವಲಸೆ
ಕಾರ್ಮಿಕರಿದ್ದಾರೆ. ಅವರಿಗೆ ಸೌಲಭ್ಯ ನೀಡುತ್ತಿದ್ದೇವೆ. ಇನ್ನೂ ಲಾಕ್‌ಡೌನ್ ಇರುವುದರಿಂದ ಈಗ ದಾನಿಗಳ ಅಗತ್ಯ ಹೆಚ್ಚಿದೆ. ನೀವು ನೀಡುವ ಸಹಾಯ 1 ಕೆಜಿ ಅಕ್ಕಿ ಇರಬಹುದು ಅಥವಾ 1 ಸಾವಿರ ಕೆಜಿ ಇರಬಹುದು. ನಾವು ಅದನ್ನು ಗೌರವಿಸುತ್ತೇವೆ ಎಂದರು. ನಗರ ಪಾಲಿಕೆಯಿಂದ ಯೋಗ್ಯರು ಮತ್ತು ಕಷ್ಟದಲ್ಲಿರುವವರಿಗೆ ಸೌಲಭ್ಯ ಮುಟ್ಟಿಸಲು ಸಹಾಯ ಮಾಡಿ. ಅಂತಹ ವ್ಯಕ್ತಿಗಳು ಕೂಡಲೇ ಮೊ. 94486 66380 ಸಂಪರ್ಕಿಸಿ. ಯಾರಿಗೆ ಪಡಿತರ ಲಭಿಸಿಲ್ಲವೋ, ಊಟಕ್ಕೆ ತೊಂದರೆ ಆಗಿದೆಯೋ ಅಂತವರಿಗೆ ಆಸರೆ ಸಹಾಯವಾಣಿ ತೆರೆಯಲಾಗಿದ್ದು, ಅವರು ದೂ. 0821- 2440890ಗೆ ಕರೆ ಮಾಡಬಹುದು ಎಂದರು.