Advertisement

ಸೌಥಂಪ್ಟನ್ ಟೆಸ್ಟ್: ಆಂಗ್ಲರ ಬೌಲಿಂಗ್ ದಾಳಿಗೆ ಸಡ್ಡು ಹೊಡೆದು ನಿಂತ ರಿಜ್ವಾನ್

03:32 PM Aug 15, 2020 | keerthan |

ಸೌಥಂಪ್ಟನ್: ಇಲ್ಲಿನ ರೋಸ್ ಬೌಲ್ ಅಂಗಳದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಪಾಕ್ ಮಧ್ಯಮ ಕ್ರಮಾಂಕದ ಆಟಗಾರ ಮೊಹಮ್ಮದ್ ರಿಜ್ವಾನ್ ಸಡ್ಡುಹೊಡೆದು ಆಡುತ್ತಿದ್ದು, ತಂಡಕ್ಕೆ ಆಧಾರವಾಗಿದ್ದಾರೆ.

Advertisement

ಮೊದಲ ದಿನ ಪಂದ್ಯಕ್ಕೆ ಅಡ್ಡಿಪಡಿಸಿದ್ದ ಮಳೆರಾಯ ಎರಡನೇ ದಿನವೂ ತನ್ನ ಕಾಟವನ್ನು ಮುಂದುವರಿಸಿದ. ಮೊದಲ ದಿನದ ಅಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದ್ದ ಪಾಕಿಸ್ಥಾನ ದ್ವಿತೀಯ ದಿನದ ಆಟದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದೆ.

ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಬಾಬರ್ ಅಜಂ 47 ರನ್ ಗಳಿಸಿ ಔಟಾದರು. ಆದರೆ ನಂತರದ ಬಾಲಂಗೋಚಿಗಳು ಬೇಗನೇ ವಿಕೆಟ್ ಒಪ್ಪಿಸಿದರು. ಆಗಾಗ ಮಳೆ, ಮಂದಬೆಳಕಿನಿಂದ ಪಂದ್ಯಕ್ಕೆ ಅಡ್ಡಿಯಾಗುತ್ತಿದ್ದರೂ, ವೇಗಿಗಳಿಗೆ ನೆರವು ನೀಡುತ್ತಿದ್ದ ಪಿಚ್ ನಲ್ಲಿ ರಿಜ್ವಾನ್ ಏಕಾಂಗಿ ಹೋರಾಟ ಜಾರಿಗೊಳಿಸಿದ್ದಾರೆ.

60 ರನ್ ಗಳಿಸಿರುವ ರಿಜ್ವಾನ್ ಅಂತಿಮ ಕ್ರಮಾಂಕದ ಆಟಗಾರ ನಸೀಂ ಶಾ ಜೊತೆಗೆ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ ಮತ್ತು ಬ್ರಾಡ್ ತಲಾ ಮೂರು ವಿಕೆಟ್ ಪಡೆದರೆ, ಸ್ಯಾಮ್ ಕರ್ರನ್ ಮತ್ತು ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next