Advertisement

ದ್ವಿತೀಯ ಟೆಸ್ಟ್‌; ಆಸ್ಟ್ರೇಲಿಯಕ್ಕೆ 373 ರನ್‌ ಸೋಲು: ಪಾಕ್‌ಗೆ ಸರಣಿ

08:38 AM Oct 20, 2018 | Team Udayavani |

ಅಬುಧಾಬಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಪಾಕಿಸ್ಥಾನ ತಂಡವು ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 373 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. 

Advertisement

ಅಬುಧಾಬಿಯ ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ಸಾಗಿದ ಈ ಪಂದ್ಯದಲ್ಲಿ ಪಾಕಿಸ್ಥಾನ ಪಂದ್ಯದ ನಾಲ್ಕನೇ ದಿನವೇ ಜಯಭೇರಿ ಸಾಧಿಸಿತು. ಗೆಲ್ಲಲು 538 ರನ್‌ ಗಳಿಸುವ ಕಠಿನ ಸವಾಲು ಪಡೆದ ಆಸ್ಟ್ರೇಲಿಯ ತಂಡವು ಮೊಹಮ್ಮದ್‌ ಅಬ್ಟಾಸ್‌ ದಾಳಿಗೆ ತತ್ತರಿಸಿ ಕೇವಲ 164 ರನ್ನಿಗೆ ಸರ್ವಪತನ ಕಂಡಿತು. ಮತ್ತೆ ಬಿಗು ದಾಳಿ ಸಂಘಟಿಸಿದ ಅಬ್ಟಾಸ್‌ 62 ರನ್ನಿಗೆ 5 ವಿಕೆಟ್‌ ಕಿತ್ತರು. ಅವರು ಮೊದಲ ಇನ್ನಿಂಗ್ಸ್‌ನಲ್ಲೂ 5 ವಿಕೆ‌ಟ್‌ ಹಾರಿಸಿದ್ದರು. ಅಬ್ಟಾಸ್‌ಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ ಯಾಸಿರ್‌ ಶಾ 45 ರನ್ನಿಗೆ 3 ವಿಕೆಟ್‌ ಉರುಳಿಸಿದರು.

ಆರನ್‌ ಫಿಂಚ್‌, ಟ್ರ್ಯಾವಿಸ್‌ ಹೆಡ್‌, ಮಾರ್ನಸ್‌ ಲಾಬುಸ್‌ಚಾಗ್ನೆ ಮತ್ತು ಮಿಚೆಲ್‌ ಸ್ಟಾರ್ಕ್‌ ಮಾತ್ರ ಪಾಕ್‌ ದಾಳಿಯನ್ನು ಸ್ವಲ್ಪಮಟ್ಟಿಗೆ ಎದುರಿಸಲು ಸಮರ್ಥರಾದರು. ಈ ನಾಲ್ವರೂ ಎರಡಂಕೆಯ  ಮೊತ್ತ ಹೊಡೆದರು. 43 ರನ್‌ ಗಳಿಸಿದ ಲಾಬುಸ್‌ಚಾಗ್ನೆ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಮೊದಲು ಬ್ಯಾಟಿಂಗ್‌ ಮಾಡಿದ್ದ ಪಾಕಿಸ್ಥಾನ 282 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯ 145 ರನ್ನಿಗೆ ಸರ್ವಪತನ ಕಂಡಿತ್ತು. 137 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದಿದ್ದ ಪಾಕಿಸ್ಥಾನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿಯಾಗಿ ಆಡಿ 9 ವಿಕೆಟಿಗೆ 400 ರನ್‌ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. 99 ರನ್‌ ಗಳಿಸಿ ಔಟಾದ ಬಾಬರ್‌ ಅಜಂ ಶತಕ ಬಾರಿಸಲು ವಿಫ‌ಲರಾಗಿ ನಿರಾಶೆ ಅನುಭವಿಸಿದರು. ನಾಯಕ ಸರ್ಫರಾಜ್‌  81 ರನ್‌ ಹೊಡೆದರು. 

ಸಂಕ್ಷಿಪ್ತ ಸ್ಕೋರು
ಪಾಕಿಸ್ಥಾನ 282 ಮತ್ತು 9 ವಿಕೆಟಿಗೆ 400 ಡಿಕ್ಲೇರ್‌x; ಆಸ್ಟ್ರೇಲಿಯ 145 ಮತ್ತು 164 (ಆರನ್‌ ಫಿಂಚ್‌ 31, ಹೆಡ್‌ 36, ಲಾಬುಸ್‌ಚಾಗ್ನೆ 43, ಸ್ಟಾರ್ಕ್‌ 28, ಮೊಹಮ್ಮದ್‌ ಅಬ್ಟಾಸ್‌ 62ಕ್ಕೆ 5, ಯಾಶಿರ್‌ ಷಾ 45ಕ್ಕೆ 3). ಪಂದ್ಯಶ್ರೇಷ್ಠ: ಮೊಹಮ್ಮದ್‌ ಅಬ್ಟಾಸ್‌

Advertisement

Udayavani is now on Telegram. Click here to join our channel and stay updated with the latest news.

Next