Advertisement

ಸರಣಿ ಜಯದ ನಿರೀಕ್ಷೆಯಲ್ಲಿ  ಪಾಕ್‌

06:00 AM Jun 01, 2018 | |

ಹೇಡಿಂಗ್ಲೆ (ಲೀಡ್ಸ್‌): ಇಂಗ್ಲೆಂಡ್‌ ಮತ್ತು ಪಾಕಿಸ್ಥಾನ ತಂಡಗಳ ನಡುವಿನ ನಿರ್ಣಾಯಕ ಟೆಸ್ಟ್‌ ಪಂದ್ಯ ಶುಕ್ರವಾರದಿಂದ ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ಆರಂಭವಾಗಲಿದೆ. ಇದು ಕಿರು ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್‌ ಆಗಿದ್ದು, ಸಮಬಲದ ಒತ್ತಡ ಆಂಗ್ಲರ ಮೇಲಿದೆ. ಲಾರ್ಡ್ಸ್‌ನ ಪ್ರಥಮ ಟೆಸ್ಟ್‌ ಪಂದ್ಯವನ್ನು 9 ವಿಕೆಟ್‌ಗಳಿಂದ ಸೋತದ್ದೇ ಇದಕ್ಕೆ ಕಾರಣ.

Advertisement

ಇನ್ನೊಂದೆಡೆ ಪ್ರವಾಸಿ ಪಾಕಿಸ್ಥಾನಕ್ಕೆ ಆಂಗ್ಲರ ನೆಲದಲ್ಲಿ 22 ವರ್ಷಗಳ ಬಳಿಕ ಸರಣಿ ಗೆಲುವಿನ ಉಜ್ವಲ ಅವಕಾಶವೊಂದು ಎದುರಾಗಿದೆ. ಇದಕ್ಕಾಗಿ ಹೇಡಿಂಗ್ಲೆ ಟೆಸ್ಟ್‌ ಪಂದ್ಯ ವನ್ನು ಡ್ರಾ ಮಾಡಿಕೊಂಡರೂ ಸಾಕು. 1996ರಲ್ಲಿ ಕೊನೆಯ ಸಲ ಪಾಕ್‌ ಪಡೆ ಇಂಗ್ಲೆಂಡ್‌ ನೆಲದಲ್ಲಿ ಟೆಸ್ಟ್‌ ಸರಣಿ ಜಯಿಸಿತ್ತು. ಅಂದು ವಾಸಿಂ ಅಕ್ರಮ್‌ ನಾಯಕತ್ವದ ಪಾಕಿಸ್ಥಾನ ಮೈಕಲ್‌ ಆಥರ್ಟನ್‌ ಬಳಗವನ್ನು 2-0 ಅಂತರದಿಂದ ಮಣಿಸಿತ್ತು. ಸಫ‌ìರಾಜ್‌ ಅಹ್ಮದ್‌ ಪಡೆಯ ಮುಂದೆ ಇಂಥದೇ ಅವಕಾಶವೊಂದು ತೆರೆದುಕೊಂಡಿದೆ.

ಹೇಡಿಂಗ್ಲೆ ಇತಿಹಾಸ ಕೂಡ ಇಂಗ್ಲೆಂಡಿಗೆ ವಿರುದ್ಧವಾಗಿರುವುದು ಪಾಕಿಗೆ ಲಾಭವಾಗಿ ಪರಿಣಮಿಸೀತೆಂಬುದೊಂದು ಲೆಕ್ಕಾಚಾರ. ಇಲ್ಲಿ ಆಡಲಾದ ಕಳೆದ 10 ಟೆಸ್ಟ್‌ಗಳಲ್ಲಿ ಆಂಗ್ಲರ ಪಡೆ ಕೇವಲ ಎರಡನ್ನಷ್ಟೇ ಗೆದ್ದಿದೆ. ಇನ್ನೊಂದೆಡೆ ಪಾಕಿಸ್ಥಾನ ಹೇಡಿಂಗ್ಲೆಯಲ್ಲಿ ಆಡಿದ 9 ಟೆಸ್ಟ್‌ ಗಳಲ್ಲಿ ಒಂದನ್ನು ಜಯಿಸಿದೆ. ಇದು ಇತಿಹಾಸದ ಮಾತಾಯಿತು. ಆದರೆ ವಾಸ್ತವ ಬೇರೆಯೇ ಇದೆ ಎಂಬುದಕ್ಕೆ ಲಾರ್ಡ್ಸ್‌ ಟೆಸ್ಟ್‌ ಉತ್ತಮ ನಿದರ್ಶನ ಒದಗಿಸಿದೆ.

ಪಾಕ್‌ ವೇಗಿಗಳ ದರ್ಬಾರು
ಲಾರ್ಡ್ಸ್‌ನಲ್ಲಿ ಪಾಕಿಸ್ಥಾನಿ ವೇಗಿಗಳ ಕಾರ್ಬಾರು ಭರ್ಜರಿಯಾಗಿತ್ತು. ಮೊಹಮ್ಮದ್‌ ಅಬ್ಟಾಸ್‌, ಆಮಿರ್‌, ಹಸನ್‌ ಅಲಿ ಪ್ರಚಂಡ ಬೌಲಿಂಗ್‌ ದಾಳಿ ನಡೆಸಿ ಇಂಗ್ಲೆಂಡ್‌ ಮೇಲೆರಗಿ ಹೋಗಿದ್ದರು. ಆಂಗ್ಲರ ಬ್ಯಾಟಿಂಗ್‌ ಎರಡೂ ಇನ್ನಿಂಗ್ಸ್‌ಗಳಲ್ಲಿ ತೋಪೆದ್ದು ಹೋಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next