Advertisement

ದ್ವಿತೀಯ ಪಿಯುಸಿ: ಮೊದಲ ದಿನ ಪರೀಕ್ಷೆ ಬರೆದ ವಿದ್ಯಾರ್ಥಿಗಳು

01:04 AM Mar 05, 2020 | Sriram |

ಉಡುಪಿ: ರಾಜ್ಯದ ಎಲ್ಲ ಜಿಲ್ಲಾ ತಾಲೂಕು ಕೇಂದ್ರಗಳ ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಬೆಳಗ್ಗೆ 10.30ರಿಂದ ಬಿಗಿ ಭದ್ರತೆಯ ನಡುವೆ ಪಿಯುಸಿ ಪರೀಕ್ಷೆ ಆರಂಭಗೊಂಡಿತು. ಉಡುಪಿ ಜಿಲ್ಲೆಯಲ್ಲಿಯೂ ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಇತಿಹಾಸ, ಭೌತಶಾಸ್ತ್ರ ಹಾಗೂ ಮೂಲಗಣಿತ ವಿಷಯಗಳಲ್ಲಿ ವಿದ್ಯಾ ರ್ಥಿಗಳು ಪರೀಕ್ಷೆ ಬರೆದರು.

Advertisement

ಜಿಲ್ಲೆಯ 27 ಕೇಂದ್ರಗಳಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು, ತಹಶೀಲ್ದಾರ್‌ಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾ ಖೆಯ ಅಧಿಕಾರಿಗಳನ್ನು ಒಳಗೊಂಡ 8 ತಂಡಗಳನ್ನು ರಚಿಸಲಾಗಿತ್ತು. ಪ್ರಶ್ನೆ ಪತ್ರಿಕೆ ಸಾಗಿಸುವ ಎಲ್ಲ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು, ಸೂಕ್ತ ಪೊಲೀಸ್‌ ಭದ್ರತೆಯೊಂದಿಗೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಅವಧಿಯೊಳಗೆ ಪ್ರಶ್ನೆ ಪತ್ರಿಕೆಗಳು ತಲುಪಿದವು.

ವೇಳಾಪಟ್ಟಿ ನಿಗದಿ
ಪ್ರಶ್ನೆ ಪತ್ರಿಕೆ ವಿತರಣೆಗೆ ನಿಯೋ ಜಿಸಲಾದ ಆಯಾಯ ತಾಲೂಕುಗಳ ತಹಶೀಲ್ದಾರ್‌ಗಳು, ಶಿಕ್ಷಣ ಸಂಯೋ ಜಕರು, ರೂಟ್‌ಆಫೀಸರ್‌ಗಳು, ಪ್ರಶ್ನೆ ಪತ್ರಿಕೆ ಸಾಗಾಟ ವಾಹನಗಳು, ಪೊಲೀಸ್‌ ಸಿಬಂದಿ ಕ್ಲಪ್ತ ಸಮಯಕ್ಕೆ ಜಿಲ್ಲಾ ಖಜಾನೆಯಲ್ಲಿ ಹಾಜರಿದ್ದು, ಪ್ರಶ್ನೆ ಪತ್ರಿಕೆಗಳನ್ನು ಪಡೆದು ವಿತರಿಸಿದರು. ಎಲ್ಲ ತಂಡಗಳಿಗೂ ಆಗಮನ ಮತ್ತು ನಿರ್ಗಮನ ಸಮಯಗಳ ವೇಳಾಪಟ್ಟಿಯನ್ನು ಮೊದಲೇ ನಿಗದಿ ಪಡಿಸಲಾಗಿತ್ತು. ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ಸಾಗಿಸಲು ಅಂಚೆ ಇಲಾಖಾಧಿಕಾರಿಗಳು ಸಾಥ್‌ ನೀಡಿದರು.

ಸಿಸಿಟಿವಿ ಕಣ್ಗಾವಲು
ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಂದ ತೆಗೆಯುವುದನ್ನು ಮತ್ತು ವಿತರಿಸುವುದನ್ನು ಪರಿಶೀಲಿಸಲು ಜಿಲ್ಲಾ ಖಜಾನೆಯ ಒಳಗೆ ಮತ್ತು ಹೊರಗೆ 24×7 ಸಿಸಿಟಿವಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇದನ್ನು ವೀಕ್ಷಿಸಲು ಪರೀಕ್ಷೆಗಳು ಮುಕ್ತಾಯವಾಗುವವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 24×7 ಹಾಗೂ ಬೆಂಗಳೂರಿನ ಪಿಯು ಬೋರ್ಡ್‌ನಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗಿದೆ.

ಮಕ್ಕಳೊಂದಿಗೆ ಬಂದ ಪೋಷಕರು!
ಪರೀಕ್ಷಾ ಸಮಯವಾದ್ದರಿಂದ ಪೋಷಕರಿಗೂ ಮಕ್ಕಳ ವಿದ್ಯಾಭ್ಯಾಸದ ಮೇಲೆ ಬಹಳ ಕಾಳಜಿ. ನಗರದ ಬಾಲಕಿಯರ ಸರಕಾರಿ ಪ.ಪೂ.ಕಾಲೇಜು, ಬೋರ್ಡ್‌ ಶಾಲೆ ಸಹಿತ ಹಲವು ಪರೀಕ್ಷಾ ಕೇಂದ್ರಗಳ ಸುತ್ತ ವಿದ್ಯಾರ್ಥಿಗಳೊಂದಿಗೆ ಪೋಷಕರೂ ಆಗಮಿಸಿದ್ದರು. ಪರೀಕ್ಷೆ ಮುಗಿಯುವವರೆಗೂ ಕಾದು ಕುಳಿತು ಅನಂತರ ಮನೆಗೆ ತೆರಳಿದರು. ಕೆಲ ಪರೀಕ್ಷಾ ಕೇಂದ್ರಗಳಿಗೆ ಒಂದು ದಿನ ಮೊದಲೇ ತೆರಳಿದ್ದ ಪೋಷಕರು ಅಲ್ಲಿನ ವ್ಯವಸ್ಥೆಗಳನ್ನೂ ಪರಿಶೀಲಿಸಿದ್ದರು.

Advertisement

ಗೊಂದಲ ಇರಲಿಲ್ಲ
ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. ಮೊದಲಿಗೆ ಆತಂಕ ಇತ್ತು. ಆದರೆ ಪರೀಕ್ಷೆ ಆರಂಭವಾದ ಅನಂತರ ಯಾವುದೇ ಆತಂಕ ಇರಲಿಲ್ಲ. ನನ್ನದು ಇತಿಹಾಸ ವಿಷಯವಾಗಿದ್ದು ಪ್ರಶ್ನೆ ಪತ್ರಿಕೆ ಸುಲಭವಾಗಿತ್ತು.
-ರೋಹಿತ್‌, ಸ.ಪ.ಪೂ. ಕಾಲೇಜು, ಉಡುಪಿ

ಯಾವುದೇ ಸಮಸ್ಯೆ ಇಲ್ಲ
ಪರೀಕ್ಷೆಗೆ ಮೊದಲೇ ಸಿದ್ದತೆ ಮಾಡಿಕೊಂಡಿದ್ದ ಕಾರಣ ಯಾವುದೇ ಸಮಸ್ಯೆಯಾಗಲಿಲ್ಲ. ಭೌತಶಾಸ್ತ್ರವಿಷಯವಾಗಿದ್ದು ಪ್ರಶ್ನೆ ಪತ್ರಿಕೆ ಸುಲಭವಾಗಿತ್ತು. ಪರೀಕ್ಷಾಕೇಂದ್ರದೊಳಗೂ ಯಾವುದೇ ಸಮಸ್ಯೆಇರಲಿಲ್ಲ.
-ಪ್ರತೀಕ್ಷಾ
ಪೂರ್ಣಪ್ರಜ್ಞ ಪ.ಪೂ. ಕಾಲೇಜು, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next