Advertisement

ದ್ವಿತೀಯ PUC ವಿಶೇಷ ಪೂರಕ ಪರೀಕ್ಷೆ: ಕರಾವಳಿಯ 2,984 ಮಂದಿ ನೋಂದಣಿ

01:28 AM Aug 16, 2023 | Team Udayavani |

ಮಂಗಳೂರು: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿಶೇಷ ಅಂದರೆ ಎರಡನೇ ಪೂರಕ ಪರೀಕ್ಷೆ ನಡೆಯಲಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

Advertisement

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಎರಡು ಪೂರಕ ಪರೀಕ್ಷೆಗಳನ್ನು ನಡೆ ಸುವ ಬಗ್ಗೆ ಶಿಕ್ಷಣ ಸಚಿವರ ನಿರ್ದೇಶನ ದಂತೆ ಇಲಾಖೆ ಸಿದ್ಧತೆ ನಡೆ ಸಿತ್ತು. ಆದರೆ ಈಗ ಅದಕ್ಕೂ ಮೊದಲೇ ಕಳೆದ ಬಾರಿಯ ವಿದ್ಯಾರ್ಥಿ ಗಳಿಗಾಗಿ ಪ್ರಾಯೋ ಗಿಕವಾಗಿ ದ್ವಿತೀಯ ಪಿಯುಸಿಯ ಎರಡನೇ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ.

ಎಪ್ರಿಲ್‌ನಲ್ಲಿ ಮೊದಲ ಪರೀಕ್ಷೆ ನಡೆದು ಫಲಿತಾಂಶ ಪ್ರಕಟವಾಗಿ, ಅನುತ್ತೀರ್ಣ ರಾದವರು ಎರಡನೇ ಪೂರಕ ಪರೀಕ್ಷೆ ಬರೆದು, ಫಲಿತಾಂಶ ಪ್ರಕಟ ವಾಗಿದೆ. ಈಗ ವಿಶೇಷ ಪೂರಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆ ಯಲು ಇದರಿಂದ ಅನು ಕೂಲವಾಗಲಿದೆ. ಅನಾರೋಗ್ಯ ಅಥವಾ ಇತರ ಕಾರಣಗಳಿಂದ ಪರೀಕ್ಷೆ ತಪ್ಪಿಸಿಕೊಂಡವರಿಗೂ ವಿಶೇಷ ಅವಕಾಶ ಇದೆ ಎನ್ನುತ್ತಾರೆ ಅಧಿಕಾರಿಗಳು.

ಅತ್ಯುತ್ಸಾಹ
ದ.ಕ. ಜಿಲ್ಲೆಯಲ್ಲಿ 1,680, ಉಡುಪಿಯಲ್ಲಿ 1,304 ವಿದ್ಯಾರ್ಥಿಗಳು ಸೇರಿ ಒಟ್ಟು 2,984 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 2022-23 ಮತ್ತು ಅದಕ್ಕೂ ಹಿಂದಿನ ವರ್ಷ ಗಳಲ್ಲಿ ವ್ಯಾಸಂಗ ಮಾಡಿ ದ್ವಿ. ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next