Advertisement
ದ್ವಿತೀಯ ಪಿಯುವಿನಲ್ಲಿ ನಿರೀಕ್ಷಿತ ಅಂಕ ಸಿಗದಿದ್ದಾಗ/ಅಸಮಾಧಾನವಿದ್ದಲ್ಲಿ ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ವಿದ್ಯಾರ್ಥಿಗೆ ಅವಕಾಶವಿದೆ. ಕೆಲವೇ ದಿನದಲ್ಲಿ ಮರು ಮೌಲ್ಯಮಾಪನ ಪ್ರಕ್ರಿಯೆ ಕೂಡ ನಡೆಯುವುದರಿಂದ ಅದಕ್ಕೂ ಮುನ್ನ ಸ್ಕ್ಯಾನ್ ಪ್ರತಿ ಪರಿಶೀಲಿಸು ವುದು ಸಾಮಾನ್ಯ. ಉತ್ತರ ಪತ್ರಿಕೆಗೆ ನಿಗದಿ ಮಾಡಿದ ಹಣ ಪಾವತಿಸಿ ಪ್ರತಿ ಪಡೆಯಬಹುದು. ಆದರೆ ಸ್ಕ್ಯಾನ್ ಕಾಪಿಯಲ್ಲೇ ತಪ್ಪುಗಳಿದ್ದ ಕಾರಣದಿಂದ ಈಗ ವಿದ್ಯಾರ್ಥಿಗಳು ಸಂಕಟ ಎದುರಿಸುವಂತಾಗಿದೆ.
ದ್ವಿತೀಯ ಪಿಯುವಿನಲ್ಲಿ ಟಾಪರ್ ಆಗಿರುವ ಮಂಗಳೂರಿನ ವಿದ್ಯಾರ್ಥಿನಿ 4 ಉತ್ತರ ಪತ್ರಿಕೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಅದರಂತೆ 4 ಉತ್ತರ ಪತ್ರಿಕೆ ಬರಬೇಕಿತ್ತು. 3 ಸರಿಯಾಗಿಯೇ ಇತ್ತು. ಆದರೆ ಒಂದು ಉತ್ತರ ಪತ್ರಿಕೆ ಮಾತ್ರ ಬೇರೆ ವಿದ್ಯಾರ್ಥಿಯದ್ದು ಅಪ್‌ಲೋಡ್ ಆಗಿದೆ; ಟಾಪರ್ ವಿದ್ಯಾರ್ಥಿಗೆ ಬಂದಿದ್ದು 40 ಅಂಕ ಪಡೆದಿದ್ದ ವಿದ್ಯಾರ್ಥಿಯ ಸ್ಕಾ Âನ್ ಉತ್ತರ ಪತ್ರಿಕೆ!
“ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮತ್ತೂಬ್ಬರು ನೋಡುವುದು ತಪ್ಪು. ಆದರೆ ದ್ವಿತೀಯ ಪಿಯು ಇಲಾಖೆಯ ಎಡವಟ್ಟಿನಿಂದ ಬೇರೆಯವರ ಉತ್ತರ ಪತ್ರಿಕೆಯನ್ನು ನಾವು ನೋಡುವಂತಾಗಿದೆ’ ಎನ್ನುತ್ತಾರೆ ಆ ವಿದ್ಯಾರ್ಥಿನಿಯ ಪೋಷಕರು.
Related Articles
ಮತ್ತೂಬ್ಬ ವಿದ್ಯಾರ್ಥಿ ಎರಡು ಉತ್ತರ ಪತ್ರಿಕೆಗೆ ಅರ್ಜಿ ಹಾಕಿದ್ದರು. ಆದರೆ ಅವರಿಗೆ ಒಂದು ಪತ್ರಿಕೆ ಮಾತ್ರ ಬಂದಿದೆ. ಮತ್ತೂಂದು ಬಂದಿಲ್ಲ. ಯಾಕೆ ಎಂಬುದು ಯಾರಿಗೂ ಗೊತ್ತಿಲ್ಲ. ಈ ಮಧ್ಯೆ ಮಂಗಳೂರಿನ ಇನ್ನೊಬ್ಬ ವಿದ್ಯಾರ್ಥಿ ಉತ್ತರ ಪತ್ರಿಕೆಗೆ ಅರ್ಜಿ ಹಾಕಿದ್ದರು. ಅದರಂತೆ ಸ್ಕ್ಯಾನ್ ಕಾಪಿ ಬಂದಿದೆ. ಆದರೆ ಆ ಉತ್ತರ ಪತ್ರಿಕೆಯ ಮಧ್ಯೆ 2-3 ಪುಟಗಳೇ ಇಲ್ಲ!
“ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ನೀಡಿದ್ದರೂ ಯಾವುದೇ ಲಾಭವಿಲ್ಲದಂತಾಗಿದೆ. ಅಂಕದ ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ ಈ ಪ್ರತಿ ನೋಡಿ ತಲೆಬಿಸಿ ಆಗುವಂತಾಗಿದೆ. ಇಲಾಖಾ ಅಧಿಕಾರಿಗಳ ಕಾರ್ಯದಿಂದಾಗಿ ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿಯೊಬ್ಬರ ಪೋಷಕರು.
Advertisement
ಸಹಾಯಕ್ಕೆ ಬಾರದ ಹೆಲ್ಪ್ ಲೈನ್!ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿ ಪಡೆಯುವಲ್ಲಿ ಸಮಸ್ಯೆ ಆದವರು ವೆಬ್‌ಸೈಟ್‌ನಲ್ಲಿ ಗೊತ್ತುಪಡಿಸಿರುವ ಇಲಾಖೆಯ “ಹೆಲ್ಪ್ ಲೈನ್’ ಸಂಪರ್ಕಿಸಬಹುದು ಎಂದು ಪಿಯು ಇಲಾಖೆ ತಿಳಿಸಿತ್ತು. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಹೀಗಾಗಿ ಮಕ್ಕಳು ಸಮಸ್ಯೆ ಎದುರಿಸುವ ಪರಿಸ್ಥಿತಿಯಿದೆ. ಅಂತೂ ಇಲಾಖೆಯ ಸ್ಕ್ಯಾನ್ ಕಾಪಿ ನೋಡಿ ವಿದ್ಯಾರ್ಥಿಗಳು ಗಾಬರಿಯಾಗಿದ್ದಾರೆ. ಕಳೆದೆರಡು ದಿನಗಳಿಂದ ರಜೆ ಇದ್ದ ಕಾರಣ ಹೆಲ್ಪ್ ಲೈನ್ ಸಹಾಯ ಸಿಗದೆ ಇದ್ದಿರಬಹುದು. ಇಂದಿನಿಂದ ಆ ಸಮಸ್ಯೆ ಎದುರಾಗದು. ಆದ್ದರಿಂದ ಸ್ಕ್ಯಾನ್ ಪ್ರತಿಯಲ್ಲಿ ಸಮಸ್ಯೆ ಇದ್ದವರು ಇಲಾಖೆಯನ್ನು ಸಂಪರ್ಕಿಸಬಹುದು. ವೆಬ್‌ಸೈಟ್‌ನಲ್ಲಿರುವ ಇಲಾಖೆಯ ಹೆಲ್ಪ್ ಲೈನ್ ಮೂಲಕ ದೂರು ನೀಡಬಹುದು. ಈ ಕುರಿತ ದೂರುಗಳಿದ್ದರೆ ಪರಿಶೀಲನೆಗೆ ಸೂಚಿಸಲಾಗುವುದು.
– ಗೋಪಾಲಕೃಷ್ಣ , ನಿರ್ದೇಶಕರು, ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ – ದಿನೇಶ್ ಇರಾ