Advertisement

ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ

06:00 AM Nov 03, 2018 | |

ಬೆಂಗಳೂರು: ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ಹಾಗೂ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿರುವ ಪಿಯು ಇಲಾಖೆ, ಪೂರ್ವ ಸಿದ್ಧತಾ ಪರೀಕ್ಷೆಯ ದಿನಾಂಕವನ್ನು ಬಿಡುಗಡೆ ಮಾಡಿದೆ. 2019ರ ಜ.3ರಿಂದ 12ರವರೆಗೆ ಪರೀಕ್ಷೆ ನಡೆಯಲಿದ್ದು, ಜಿಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೂ ಮಾಹಿತಿ ನೀಡುವಂತೆ ಇಲಾಖೆ ನಿರ್ದೇಶಿಸಿದೆ. ವಿವರವಾದ ವೇಳಾಪಟ್ಟಿ ಪಿಯು ಇಲಾಖೆಯ //www.pue.kar.nic.in/ ನಲ್ಲಿ ವೆಬ್‌ಸೈಟ್‌ನಲ್ಲಿದೆ. 

Advertisement

ಪ್ರಥಮ ಪಿಯು ಪರೀಕ್ಷಾ ವೇಳಾಪಟ್ಟಿ: ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ 2019ರ ಜ.31ರಿಂದ ಫೆ.9ರವರೆಗೆ ಪರೀಕ್ಷೆ ನಡೆಯಲಿದೆ. ಜ.31ರಂದು ಹಿಂದಿ, ಉರ್ದು, ಸಂಸ್ಕೃತ, ಫೆ.1ರಂದು ಭೂಗೋಳಶಾಸ್ತ್ರ. ಮೂಲಗಣಿತ, ತರ್ಕಶಾಸ್ತ್ರ, ಗಣಿತ, ಶಿಕ್ಷಣ ಮತ್ತು ಗೃಹ ವಿಜ್ಞಾನ, ಫೆ.2ರಂದು ಅರ್ಥ ಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ಮನಃಶಾಸ್ತ್ರ, ಫೆ.4ರಂದು ಇಂಗ್ಲಿಷ್‌, ಫೆ.5ರಂದು ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ ಹಾಗೂ ಸಮಾಜಶಾಸ್ತ್ರ, ಫೆ.6ರಂದು ಸಂಖ್ಯಾಶಾಸ್ತ್ರ, ರಾಜ್ಯಶಾಸ್ತ್ರ, ಫೆ.7ರಂದು ಲೆಕ್ಕಶಾಸ್ತ್ರ, ಐಚ್ಛಿಕ ಕನ್ನಡ, ಭೌತಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಫೆ.8ರಂದು ಇತಿಹಾಸ, ಗಣಕವಿಜ್ಞಾನ, ಎಲೆಕ್ಟ್ರಾನಿಕ್ಸ್‌ ಮತ್ತು ಫೆ.9ರಂದು ಕನ್ನಡ, ತಮಿಳು, ತೆಲಗು, ಮರಾಠಿ, ಮಲೆಯಾಳಂ, ಫ್ರೆಂಚ್‌ ಹಾಗೂ ಅರೇಬಿಕ್‌ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next