Advertisement

ಗ್ರಾ.ಪಂ. ಚುನಾವಣೆ: ಎರಡನೇ ಹಂತದ ಮತದಾನ ಆರಂಭ

07:31 AM Dec 27, 2020 | keerthan |

ಮಣಿಪಾಲ: ಗ್ರಾಮ ಪಂಚಾಯತ್ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ ಐದು ಗಂಟೆಯ ತನಕ ನಡೆಯಲಿದೆ.

Advertisement

ರಾಜ್ಯದ 109 ತಾಲೂಕುಗಳ 2709 ಗ್ರಾಮ ಪಂಚಾಯತ್ ಗಳ, 39378 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಇದರಲ್ಲಿ ಅಂತಿಮ ಕಣದಲ್ಲಿರುವ 1,05,431 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ. ಮತದಾನ ಪ್ರಕ್ರಿಯೆಗೆ 1.27 ಲಕ್ಷ ಸಿಬ್ಬಂದಿ ನಿಯೋಜಿಸಲಾಗಿದೆ.

3,697 ಮಂದಿ ಅವಿರೋಧ ಆಯ್ಕೆ: ಎರಡನೇ ಹಂತದ ಮತದಾನಕ್ಕೆ 1.47 ಲಕ್ಷ ನಾಮಪತ್ರಗಳು ಸಲ್ಲಿಕೆ ಯಾಗಿದ್ದು, ಅದರಲ್ಲಿ 34,115 ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್‌ ಪಡೆದು, 3,697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೋವಿಡ್ ಭೀತಿ ಕಾರಣದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮತದಾನ ನಡೆಯುತ್ತಿದೆ, ಮಾಸ್ಕ್ ಬಳಕೆ ಕಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next