Advertisement

2ನೇ ಮದುವೆ ತಪ್ಪಲ್ಲ: ಸುಪ್ರೀಂ ಕೋರ್ಟ್‌

10:09 AM Aug 27, 2018 | |

ಹೊಸದಿಲ್ಲಿ: ಮೊದಲ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣ ಇತ್ಯರ್ಥಗೊಳ್ಳುವ ಪ್ರಕ್ರಿಯೆಯಲ್ಲಿ ಇರುವಾಗಲೇ ಎರಡನೇ ವಿವಾಹವಾದರೆ ಅದು ಸಿಂಧುವಾಗುತ್ತದೆ. ಹೀಗೆಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಹಿಂದೂ ವಿವಾಹ ಕಾಯ್ದೆಯಲ್ಲಿ ಉಲ್ಲೇಖಗೊಂಡಿ ರುವಂತೆ ವಿಚಾರಣೆಯ ಹಂತದಲ್ಲಿರುವ ಮದುವೆಯನ್ನು ಮುಂದುವರಿಸಲು ಸಾಧ್ಯವಿಲ್ಲದೇ ಇರುವಾಗ ಆ ಹಂತದಲ್ಲಿ ನಡೆದ ವಿವಾಹಕ್ಕೆ ಮಾನ್ಯತೆ ನೀಡಬಹುದು ಎಂದಿದೆ.

Advertisement

ಎರಡೂ ಪಕ್ಷಗಳೂ ವೈವಾಹಿಕ ವಿವಾದದ ಬಗ್ಗೆ ಇರುವ ಪ್ರಕರಣ ಸಮಾಪ್ತಿಗೊಳಿಸಲು ನಿರ್ಧರಿಸಿರುವಾಗ ಮರು ಮದುವೆ ಮೇಲೆ ನಿಷೇಧ ಹೇರುವ ವಿಚಾರವೇ ಬರುವುದಿಲ್ಲ ಎಂದು  ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹಿಂದೂ ವಿವಾಹ ಕಾಯ್ದೆ ಎನ್ನುವುದು ಸಮಾಜದಲ್ಲಿ ಸುಧಾರಣೆ ತರುವ ಉದಾತ್ತ ಧ್ಯೇಯ ಹೊಂದಿದೆ. ಸಾಮಾಜಿಕವಾಗಿ ಧನಾತ್ಮಕ ಉದ್ದೇಶ ಹೊಂದಿರುವ ಕಾಯ್ದೆಯನ್ನು ವಿಮರ್ಶಿಸಲು ಕೋರ್ಟ್‌ ಬಯಸುವುದಿಲ್ಲ ಎಂದಿದೆ. ವ್ಯಕ್ತಿಯೊಬ್ಬರ 2ನೇ ವಿವಾಹ ಪ್ರಕರಣ ಸಂಬಂಧ ಸುಪ್ರೀಂ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next