ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗ ಮತ್ತು ಮಡಿಕೇರಿಯ ಕೆಲ ಕಡೆಗಳಲ್ಲಿ ಮತ್ತೆ ಭೂಮಿ ಕಂಪಿಸದ ಅನುಭವವಾಗಿದೆ. ಮೂರು ದಿನಗಳ ಹಿಂದಷ್ಟೇ ಈ ಭಾಗಗಳಲ್ಲಿ ಲಘು ಭೂಕಂಪನವಾಗಿದ್ದು, ಇದೀಗ ಮತ್ತೆ ಭೂಮಿ ಅದುರಿದೆ.
ಸುಳ್ಯ ತಾಲೂಕಿನ ಹಲವು ಕಡೆ ಸದ್ದುನೊಂದಿಗೆ ಭೂಮಿ ಕಂಪಿಸಿದ ಅನುಭವಾಗಿದೆ. ಸುಳ್ಯ, ಪಂಜ, ಗುತ್ತಿಗಾರು, ಐವರ್ನಾಡು, ಉಬರಡ್ಕ ಮಿತ್ತೂರು, ಕಲ್ಲಾಜೆ, ಎಲಿಮಲೆ, ಮರ್ಕಂಜ, ಅರಂತೋಡು, ಸಂಪಾಜೆ ಮೊದಲಾದ ಕಡೆಗಳಲ್ಲಿ ಕಂಪಿಸಿದ ಅನುಭವವಾಗಿದೆ.
ಇದನ್ನೂ ಓದಿ:ಕರಾವಳಿಯಲ್ಲಿ ಇನ್ನೂ ಅನುಷ್ಠಾನಕ್ಕೆ ಬಾರದ ಸೈರನ್ ಟವರ್‌ಗಳು
ಬೆಳಗ್ಗೆ 7.45 ರ ಸುಮಾರಿಗೆ ಭಾರೀ ಸದ್ದಿನೊಂದಿಗೆ ಅದೇ ವೇಳೆಗೆ ಭೂಮಿ ಕಂಪಿಸಿದೆ. ಮೂರು ದಿನಗಳ ಹಿಂದೆ ಭೂಮಿ ಕಂಪಿಸಿದ್ದಕ್ಕಿಂತ ಹೆಚ್ಚಿನ ಕಂಪನವಿತ್ತು, ಸರಿಯಾಗಿ ಭೂಮಿ ಕಂಪನದ ಅನುಭವವಾಗಿದೆ ಎಂದು ಜನರು ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯ ನಾಪೋಕ್ಲು ಕುಕ್ಕುಂದ, ಕಾಡು, ಬಲ್ಲಮಾವಟ್ಟಿ, ದಬ್ಬಡ್ಕ, ಪೆರಾಜೆ, ಕರಿಕೆ, ಭೂತನಕಾಡು, ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವವಾಗಿದೆ.