Advertisement

ನಿನ್ನೆ ಸಾವಿಗೀಡಾಗಿದ್ದ ಮಹಿಳೆಯಲ್ಲಿ ಕೋವಿಡ್ ವೈರಸ್ ಪಾಸಿಟಿವ್ ದೃಢ; ರಾಜ್ಯದಲ್ಲಿ ಎರಡನೇ ಬಲಿ

04:08 PM Mar 26, 2020 | Hari Prasad |

ಬೆಂಗಳೂರು:  ಬುಧವಾರ ಸಾವಿಗೀಡಾದ ಚಿಕ್ಕಬಳ್ಳಾಪುರ ಕೋವಿಡ್ 19 ವೈರಸ್ ಶಂಕಿತ ಮಹಿಳೆಯ ದ್ವಿತೀಯ ಸೋಂಕು ಪರೀಕ್ಷಾ ವರದಿ ಬಂದಿದ್ದು, ಆ ಮಹಿಳೆಗೆ ಕೋವಿಡ್ 19 ಸೋಂಕು ತಗುಲಿರುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಈ ಸೋಂಕಿಗೆ ಇದುವರೆಗೆ ಇಬ್ಬರು ಬಲಿಯಾದಂತಾಗಿದೆ. ಬುಧವಾರ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ 70 ವರ್ಷದ ಈ ಮಹಿಳೆ ಸೌದಿಅರೇಬಿಯಾ ಮೆಕ್ಕಾ ಯಾತ್ರೆ ಮುಗಿಸಿಕೊಂಡು ಮಾರ್ಚ್ 14 ರಂದು ಗೌರಿಬಿದನೂರಿಗೆ ಹಿಂದಿರುಗಿದ್ದರು.

Advertisement

ಸೋಂಕು ತಗಲಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಈ ಮಹಿಳೆ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ಬುಧವಾರ ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಆರೋಗ್ಯ ಇಲಾಖೆ ನೇತೃತ್ವದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಅಂತ್ಯಕ್ರಿಯೆ ಮಾಡಲಾಗಿತ್ತು. ಸದ್ಯ ಆ ಮಹಿಳೆಯ ದ್ವಿತೀಯ ಸೋಂಕು ಪರೀಕ್ಷಾ ವರದಿ ಬಂದಿದ್ದು, ಕೋವಿಡ್ 19 ವೈರಸ್ ಸೋಂಕು ತಗುಲಿತ್ತು ಎಂಬುದು ದೃಢಪಟ್ಟಿದೆ.

ಈ ಹಿಂದೆ ಮೆಕ್ಕಾಯಾತ್ರೆ ಮುಗಿಸಿಕೊಂಡು ಬಂದಿದ್ದ ಕಲಬುರಗಿ 72 ವರ್ಷದ ವ್ಯಕ್ತಿ  ಸಾವಿಗೀಡಾಗಿದ್ದರು. ಬಳಿಕ ಇದೀಗ ಈ ಮಹಿಳೆ ಸಾವಿಗೀಡಾಗಿದ್ದು, ಇಬ್ಬರಿಗೂ ಸೋಂಕು ತಗುಲಿತ್ತು, ಅದಲ್ಲದೆ ಸೋಂಕು ಪರೀಕ್ಷಾ ವರದಿಗಳು ಆ ವ್ಯಕ್ತಿಗಳು ಸಾವಿಗೀಡಾದ ಬಳಿಕವೇ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next