Advertisement

ಚಾಮರಾಜನಗರ: ಕೋವಿಡ್‌ 19 ಸೋಂಕಿಗೆ ಎರಡನೇ ಬಲಿ

09:02 PM Jul 13, 2020 | Hari Prasad |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಎರಡನೇ ಸಾವು ಸಂಭವಿಸಿದೆ.

Advertisement

ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ 65 ವರ್ಷದ ವೃದ್ಧ ಕೋವಿಡ್ 19 ಮಹಾಮಾರಿಗೆ ಬಲಿಯಾದವರಾಗಿದ್ದಾರೆ.

ಈ ವೃದ್ಧ ಜ್ವರದಿಂದ ಬಳಲುತ್ತಿದ್ದು, ಅವರು ಚಿಕಿತ್ಸೆಗಾಗಿ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಭಾನುವಾರ ತೆರಳಿದ್ದರು.

ಇದನ್ನೂ ಓದಿ: ಚಾಮರಾಜನಗರದಲ್ಲಿ ಇಂದು 14 ಹೊಸ ಕೋವಿಡ್ 19 ಪ್ರಕರಣ

ಅಲ್ಲಿ ಅವರಿಗೆ ವೈದ್ಯರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಹಾಗಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿಯೇ ಈ ವೃದ್ಧ ಮೃತಪಟ್ಟಿದ್ದಾರೆ,

Advertisement

ಬಳಿಕ ಉಪ ವಿಭಾಗ ಆಸ್ಪತ್ರೆಯಲ್ಲಿ ಇವರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ನಗರದ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ RT-PCR ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ.

PFI ಕಾರ್ಯಕರ್ತರಿಂದ ಅಂತ್ಯಕ್ರಿಯೆ: ಸೋಮವಾರ ಮೃತ ಶರೀರವನ್ನು ನಗರಕ್ಕೆ ತರಲಾಯಿತು. ನಗರದ ಹೊರವಲಯದ ಎಡಬೆಟ್ಟ ಬಳಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯ ಮಾರ್ಗಸೂಚಿಗಳನ್ವಯ ಜಿಲ್ಲಾಡಳಿತದಿಂದ ಅಂತ್ಯಕ್ರಿಯೆ ನಡೆಸಲಾಯಿತು. ಮೊದಲನೇ ಸಾವಿನ ಪ್ರಕರಣದ ಅಂತ್ಯಕ್ರಿಯೆ ನಡೆಸಿದ್ದಂತೆಯೇ PFI ಕಾರ್ಯಕರ್ತರು ಈ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next