ನಾಗ್ಪುರ : ಇಲ್ಲೀಗ ನಡೆಯುತ್ತಿರುವ ಪ್ರವಾಸಿ ಲಂಕಾ ಎದುರಿನ 2ನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ ತಂಡ 79.1 ಓವರ್ ಆಟವಾಗಿ 205 ರನ್‌ಗಳಿಗೆ ಆಲೌಟಾಗಿ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.
ಅನಂತರದಲ್ಲಿ ತನ್ನ ಮೊದಲ ಇನ್ನಿಂಗ್ ಆರಂಭಿಸಿದ ಭಾರತ 8 ಓವರ್ ಆಟವಾಡಿ ದಿನಾಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ ಕೇವಲ 11 ರನ್ ಗಳಿಸಲು ಶಕ್ತವಾಯಿತು.
ಲಂಕೆಯ ಮೊದಲ ಇನ್ನಿಂಗ್ಸ್ ಆಟವನ್ನು ಕೇವಲ 205 ರನ್‌ಗಳಿಗೆ ಸೀಮಿತ ಗೊಳಿಸುವಲ್ಲಿ ಭಾರತದ ಎಸೆಗಾರರಾದ ರವಿಚಂದ್ರನ್ ಅಶ್ವಿನ್ (67ಕ್ಕೆ 4 ವಿಕೆಟ್), ಇಶಾಂತ್ ಶರ್ಮಾ (37ಕ್ಕೆ 3 ವಿಕೆಟ್) ಹಾಗೂ ರವೀಂದ್ರ ಜಡೇಜ (56ಕ್ಕೆ 3) ಮುಖ್ಯ ಪಾತ್ರ ವಹಿಸಿದರು.
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಬೇಗನೆ ಔಟಾದವರೆಂದರೆ ಲೋಕೇಶ್ ರಾಹುಲ್ (13 ಬಾಲ್, 7 ರನ್, 1 ಬೌಂಡರಿ).
ದಿನಾಂತ್ಯಕ್ಕೆ ಕ್ರೀಸಿನಲ್ಲಿ ಉಳಿದವರೆಂದರೆ ಮುರಳೀ ವಿಜಯ್ 28 ಬಾಲ್ 2 ರನ್ ಮತ್ತು ಚೇತೇಶ್ವರ ಪೂಜಾರ 7 ಬಾಲ್ 2 ರನ್.