Advertisement
ನ. 14ರಂದು ಭಿವಂಡಿ ಪದ್ಮ ನಗರ ಅಯ್ಯಪ್ಪ ಸ್ವಾಮಿ ಮಂದಿರದ ಸಭಾಗೃಹದಲ್ಲಿ ನಡೆದ ಕಲ್ಚರಲ್ ಟೀಮ್ ಭಿವಂಡಿ ಇದರ ಎರಡನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಉತ್ತಮ ಕೆಲಸವನ್ನು ಮಾಡುತ್ತಿರುವ ಕಲ್ಚರಲ್ ಟೀಮ್ ಭಿವಂಡಿ ಇದರ ಸರ್ವ ಸದ ಸ್ಯರು ಅಭಿನಂದನಾರ್ಹರು. ಇಂತಹ ಕಾರ್ಯ ಕ್ರಮ ಗಳಿಗೆ ನಮ್ಮ ತುಂಬು ಹೃದಯದ ಸಹಕಾರವಿದೆ ಎಂದರು.
Related Articles
Advertisement
ಗೌರವ ಅತಿಥಿಗಳಾಗಿ ಪಾಲ್ಗೊಂಡ ಉದ್ಯಮಿ ರಾಜೇಶ್ ಎಸ್. ಪೂಜಾರಿ, ಭಿವಂಡಿ ಹೊಟೇಲ್ ಓನರ್ ಅಸೋಸಿ ಯೇ ಶನ್ ಉಪಾಧ್ಯಕ್ಷ ರಾಮಕೃಷ್ಣ ಎನ್. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ದಯಾ ನಂದ ಆರ್. ಪೂಜಾರಿ, ಬಿಲ್ಲವರ ಅಸೋಸಿ ಯೇಶನ್ ಭಿವಂಡಿ ಸ್ಥಳೀಯ ಕಛೇರಿಯ ಉಪ ಕಾರ್ಯಾಧ್ಯಕ್ಷರಾದ ಜಯಂತ್ ಎಸ್. ಸಾಲ್ಯಾನ್ ಮತ್ತು ಪ್ರಶಾಂತ್ ಎನ್. ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಭಿವಂಡಿ ಸ್ಥಳೀಯ ಕಚೇರಿಯ ಕಾರ್ಯ ದರ್ಶಿ ಹರೀಶ್ ವಿ. ಪೂಜಾರಿ, ಕೋಶಾಧಿಕಾರಿ ಪ್ರಶಾಂತ್ ಆರ್. ಪೂಜಾರಿ, ಕುಲಾಲ ಸಂಘ ಥಾಣೆ-ಕಲ್ಯಾಣ್-ಭಿವಂಡಿ ಸ್ಥಳೀಯ ಸಮಿತಿಯ ಮಾಜಿ ಉಪಾಧ್ಯಕ್ಷ ಬಾಬು ಕೆ. ಕುಲಾಲ್, ಸಮಾಜ ಸೇವಕಿ ಶೋಭಾ ಎಸ್. ಪೂಜಾರಿ, ಭರತನಾಟ್ಯ ಗುರು ಲತಾ ಡಿ. ಕೋಟ್ಯಾನ್, ಸಮಾಜ ಸೇವಕಿ ಶೈಲಜಾ ಎಂ. ಶೆಟ್ಟಿ ಮಾತನಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಭಜನೆ ಗಾಯಕಿ ಹಾಗೂ ಸಮಾಜ ಸೇವಕಿ ಪುಷ್ಪಾ ಎಸ್. ಪೂಜಾರಿ ಇವರನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ರಂಗಕರ್ಮಿ, ಸಾಹಿತಿ, ನಾರಾಯಣ ಶೆಟ್ಟಿ ನಂದಳಿಕೆ, ನಮನ ಫ್ರೆಂಡ್ಸ್ ಮುಂಬಯಿ ಸಂಸ್ಥಾಪಕ ಹಾಗೂ ಯುವ ಬರಹಗಾರ ಪ್ರಭಾಕರ ಬೆಳುವಾಯಿ ಇವರು ಸಹಕರಿಸಿದರು. ಕಲ್ಚರಲ್ ಟೀಮ್ ಭಿವಂಡಿ ಇದರ ರೂವಾರಿ ಸಚಿನ್ ಎಸ್. ಪೂಜಾರಿ ಮತ್ತು ಅವರ ಮಾತಾಪಿತರಾದ ಶೇಖರ್ ಪೂಜಾರಿ ಮತ್ತು ಯಮುನಾ ಪೂಜಾರಿ ಇವರೊಂದಿಗೆ ತಂಡದ ಪರವಾಗಿ ಅತಿಥಿ ಗಣ್ಯರು ಶಾಲು, ಪುಷ್ಪಗುತ್ಛ ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.
ಭಿವಂಡಿಯ ವಿವಿಧ ಸಂಘಟನೆಗಳ ಸಹಕಾರ ದೊಂದಿಗೆ ನಡೆದ ಕಾರ್ಯ ಕ್ರಮ ದಲ್ಲಿ ವಿವಿಧ ಸಂಘಟನೆಗಳ ಪದಾಧಿ ಕಾರಿ ಗಳನ್ನು ಅತಿಥಿ-ಗಣ್ಯರನ್ನು ಭಿವಂಡಿ ಕಲ್ಚರಲ್ ಟೀಮ್ ವತಿಯಿಂದ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಿಯಾಂಕಾ ಪೂಜಾರಿ ಇವರಿಂದ ಜಾನಪದ ನೃತ್ಯ, ನಿತ್ಯಾಂಜಲಿ ಡಾನ್ಸ್ ಅಕಾಡೆಮಿ ಸದಸ್ಯರಿಂದ ಭರತ ನಾಟ್ಯ ನೃತ್ಯ, ಹಾಗೂ ಸಭಾ ಕಾರ್ಯಕ್ರಮದ ಬಳಿಕ ಸಚಿನ್ ಪೂಜಾರಿ ಇವರ ನಿರ್ದೇಶನದಲ್ಲಿ ತುಳುನಾಡ ವೈಭವ ವಿಶೇಷ ಕಾರ್ಯಕ್ರಮದ ಐದನೇ ಪ್ರಯೋಗವು ಜರಗಿತು. ಕಾರ್ಯಕ್ರಮದಲ್ಲಿ ಕಲ್ಚರಲ್ ಟೀಮ್ ಭಿವಂಡಿ ಇದರ ಸದಸ್ಯರು ಮತ್ತು ಮಕ್ಕಳು ಸೇರಿದಂತೆ 5 ವರ್ಷದ ಮಕ್ಕಳಿಂದ 70 ವರ್ಷದ ಹಿರಿಯರು ಸೇರಿ ಒಟ್ಟು 46 ಕಲಾವಿದರು ಭಾಗವಹಿಸಿದ್ದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಭಿವಂಡಿ ಸ್ಥಳೀಯ ಕಚೇರಿಯ ಮಾಜಿ ಕಾರ್ಯದರ್ಶಿ ಉಮೇಶ್ ಆರ್. ಸುವರ್ಣ ಮತ್ತು ಸಚಿನ್ ಪೂಜಾರಿ ಇವರು ನಿರೂಪಿಸಿ ವಂದಿಸಿದರು.
ಸ್ಪರ್ಧೆಯ ವಿಜೇತರು :
ತುಳು ಪಾತೆರ್ಗ ಭಾಷಣ ಸ್ಪರ್ಧೆಯಲ್ಲಿ 30 ಸ್ಪರ್ಧಾಳುಗಳು ಭಾಗವಹಿಸಿದ್ದು 5ರಿಂದ 10 ವರ್ಷದೊಳಗಿನವರ ಎ ವಿಭಾಗದ ವಿಜೇತರಾಗಿ ಚಿರಾಯು ಡಿ. ಕೋಟ್ಯಾನ್ ಪ್ರಥಮ, ದ್ರುವಿಕಾ ಶೆಟ್ಟಿ ದ್ವಿತೀಯ, ಶ್ರೀನಿಧಿ ಎಸ್. ಶೆಟ್ಟಿ ತೃತೀಯ, 11ರಿಂದ 22 ವರ್ಷದೊಳಗಿನವರ ಬಿ ವಿಭಾಗದಲ್ಲಿ ಶ್ರಾವ್ಯಾ ಎಸ್. ಕುಲಾಲ್ ಪ್ರಥಮ, ಸೋನಿ ಎಸ್. ಪೂಜಾರಿ ದ್ವಿತೀಯ, ಖುಷಿ ವಿ. ಶೆಟ್ಟಿ ತೃತೀಯ ಹಾಗೂ 23 ವರ್ಷ ಮೇಲ್ಪಟ್ಟವರ ಸಿ ವಿಭಾಗದಲ್ಲಿ ಪ್ರಮೀಳಾ ಬಿ. ಪೂಜಾರಿ ಪ್ರಥಮ, ದಿವ್ಯಾ ಶೆಟ್ಟಿ ದ್ವಿತೀಯ ಹಾಗೂ ಸುರೇಖಾ ಪೂಜಾರಿ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಕೊರೊನಾ ಮಾಹಾಮಾರಿಯಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಸ್ತಬ್ದಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಈಗ ಮತ್ತೆ ರಂಗೇರುತ್ತಿದೆ. ಈ ನಿಟ್ಟಿನಲ್ಲಿ ಕಲ್ಚರಲ್ ಟೀಮ್ ಭಿವಂಡಿ ಲಾಕ್‌ಡೌನ್ ಸಂದರ್ಭದಲ್ಲೂ ಯೂಟ್ಯೂಬ್ ಆನ್‌ಲೈನ್ ಮುಖೇನ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿದ ಶ್ರೇಯಸ್ಸಿಗೆ ಪಾತ್ರವಾಗಿದೆ. ಇಂದಿನ ಈ ಕಾರ್ಯಕ್ರಮವು ಅಭೂತಪೂರ್ವವಾಗಿ ಜರಗಿ ಸರ್ವರ ಜನಮನ್ನಣೆಗೆ ಪಾತ್ರವಾಯಿತು. ಈ ಯಶಸ್ಸಿಗೆ ತಂಡದ ರೂವಾರಿ ಸಚಿನ್ ಪೂಜಾರಿ ಹಾಗೂ ಸರ್ವ ಸದಸ್ಯರು ಅವಿರತವಾಗಿ ಶ್ರಮಿಸಿದ್ದಾರೆ. ಇವರೆಲ್ಲರಿಗೂ ಮನದಾಳದ ಅಭಿನಂದನೆಗಳು.–ಮೋಹನ್‌ದಾಸ್ ಪೂಜಾರಿ, ನಿರ್ದೇಶಕ, ಭಾರತ್ ಕೋ. ಆಪರೇಟಿವ್ ಬ್ಯಾಂಕ್