Advertisement
ಇಂಥ ಯಕ್ಷಗಾನ ವಾಟ್ಸಾಪ್ ಗುಂಪುಗಳಲ್ಲಿ ಬ್ರಾಮರೀ ಯಕ್ಷಮಿತ್ರರು (ರಿ.) ಮಂಗಳೂರು ಒಂದು. 2015ರ ಫೆಬ್ರವರಿ 16ರಂದು ವಿನಯಕೃಷ್ಣ ಕುರ್ನಾಡ್ ಅವರಿಂದ “ಯಕ್ಷಮಿತ್ರರು’ ಎಂಬ ಹೆಸರಿನಲ್ಲಿ ವಾಟ್ಸಾಪ್ ಗುಂಪು ಆಗಿನ ನಿಯಮದಂತೆ ನೂರು ಮಂದಿ ಸದಸ್ಯರನ್ನೊಳಗೊಂಡು ಸ್ಥಾಪಿಸಲ್ಪಟ್ಟಿತು. ಇದೀಗ ಹೊಸ ನಿಯಮದಂತೆ ಬಳಗ ಹಲವಾರು ಸದಸ್ಯರ ಸೇರ್ಪಡೆಯೊಂದಿಗೆ ವಿಸ್ತಾರವಾಗಿ ಬೆಳೆದಿದೆ. ಸಮಾನ ಆಸಕ್ತಿಯ ಗೆಳೆಯರೆಲ್ಲ ಒಂದೆಡೆ ಸೇರುವಂತೆ ಮಾಡಿದೆ ಈ ವೇದಿಕೆ. “ಯಕ್ಷಮಿತ್ರರು’ ಅನ್ನುವ ಹೆಸರಲ್ಲಿ ಹಲವಾರು ಬಳಗಗಳು ಇರುವ ಕಾರಣಕ್ಕೆ ಹೊಸ ನಾಮಧೇಯ ಬೇಕೆಂಬ ಹಂಬಲದೊಂದಿಗೆ “ಬ್ರಾಮರೀ ಯಕ್ಷಮಿತ್ರರು’ ಮಂಗಳೂರು ಎಂಬುದಾಗಿ ನಾಮಕರಣ ಮಾಡಿ ನೋಂದಾಯಿಸಲಾಗಿದೆ.
ಬಳಗದ ಸದಸ್ಯರಲ್ಲೊಬ್ಬರು ಕಳೆದ ವರ್ಷ ಯಕ್ಷಗಾನ ಸಂಬಂಧಿ ಮಾಹಿತಿ ಹಂಚೋಣಕ್ಕಷ್ಟೇ ಸೀಮಿತವಾಗುವ ಬದಲು ಯಕ್ಷಗಾನ ಪ್ರದರ್ಶನ ಸಂಘಟಿಸಬಾರದೇಕೆ ಎಂಬ ಆಲೋಚನೆಯನ್ನು ಗುಂಪಿನಲ್ಲಿ ಹರಿಯಬಿಟ್ಟುದು “ಯಕ್ಷ ವೈಭವ’ವನ್ನು ಸಂಘಟಿಸುವುದಕ್ಕೆ ನಾಂದಿಯಾಯಿತು. ಬಳಗದ ಸರ್ವ ಸದಸ್ಯರ ಪ್ರೋತ್ಸಾಹ, ಹಿತೈಷಿ ಕಲಾಪೋಷಕರ ಕೃಪೆ, ಕಲಾವಿದರ ಸಹಕಾರದೊಂದಿಗೆ 2016ರ ಆಗÓr… 20ರಂದು ಮಂಗಳೂರಿನ ಪುರಭವನದಲ್ಲಿ ಯಶಸ್ವೀ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಅವರಿಗೆ “ಭಾÅಮರೀ ಯಕ್ಷಮಣಿ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಬಾರಿಯೂ ಯಕ್ಷ ವೈಭವ ಆಗಸ್ಟ್ 19, 2017ರಂದು ರಾತ್ರಿ ಎಂಟರಿಂದ ಮಂಗಳೂರಿನ ಪುರಭವನದಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಾಲ್ಕು ಪೌರಾಣಿಕ ಪ್ರಸಂಗಗಳೊಂದಿಗೆ ಆಯೋಜನೆಗೊಂಡಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಪ್ರಸಂಗಕರ್ತ, ಛಾಂದಸ, ಹಿಮ್ಮೇಳದ ಸವ್ಯಸಾಚಿ ಕಲಾವಿದ ಗಣೇಶ್ ಕೊಲೆಕಾಡಿ ಅವರಿಗೆ ಭಾÅಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗಣೇಶ್ ಕೊಲೆಕಾಡಿಯವರು ಛಂದಸ್ಸಿನಲ್ಲಿ ಅಪಾರ ಸಾಧನೆ ಮಾಡಿದವರು. ಅಭಿನವ ನಾಗವರ್ಮ ಬಿರುದಾಂಕಿತರಾದ ಡಾ| ಶಿಮಂತೂರು ನಾರಾಯಣ ಶೆಟ್ಟರ ಶಿಷ್ಯರಾಗಿ, ಯಕ್ಷಗಾನ ಛಂದಸ್ಸುಗಳ ಕುರಿತು ಆಳವಾದ ಸಂಶೋಧನೆ ಮಾಡಿದವರು. 40ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ ರಚನೆ, ಹಿಮ್ಮೇಳ ಹಾಗೂ ಮುಮ್ಮೇಳಗಳ ಸಮರ್ಥ ಕಲಾವಿದರಾಗಿಯೂ ಪ್ರಸಿದ್ಧಿ ಗಳಿಸಿದವರು. ನೂರಾರು ವಿದ್ಯಾರ್ಥಿಗಳಿಗೆ ಹಿಮ್ಮೇಳ ಹಾಗೂ ಛಂದಸ್ಸನ್ನು ಉಚಿತವಾಗಿ ಕಲಿಸುತ್ತಿದ್ದಾರೆ.
Related Articles
Advertisement
ಯಕ್ಷ ವೈಭವದ ಇದೇ ಸಂದರ್ಭದಲ್ಲಿ ಯಕ್ಷಗಾನದ ಬಣ್ಣದಮನೆಯಲ್ಲಿ ಸೇವೆಗೈಯುತ್ತಿರುವ ನೇಪಥ್ಯ ಕಲಾವಿದರು ಹಾಗೂ ರಂಗ ಸಹಾಯಕ ಕಟೀಲು ಮೇಳದ ಶಿವಣ್ಣ ಸರಪಾಡಿ ಹಾಗೂ ಬಪ್ಪನಾಡು ಮೇಳದ ಕೊರಗಪ್ಪ ಇವರನ್ನೂ ಗೌರವಿಸಲಾಗುವುದು.
ಎಂ. ಶಾಂತರಾಮ ಕುಡ್ವ