ಲಿಸಿಸ್ ಕೇಂದ್ರಗಳ ಸೇವೆ ಸ್ಥಗಿತವಾಗ ಲಿದೆ ಎಂದು ರಾಜ್ಯ ಡಯಾಲಿಸಿಸ್ ಕೇಂದ್ರದ ನೌಕರರ ಸಂಘ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡಿದೆ.
Advertisement
ಮೂತ್ರಪಿಂಡ ಸಮಸ್ಯೆಯಿಂದ ಬಳಲುವ ರೋಗಿಗೆ ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡುವುದು ಅನಿವಾರ್ಯ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಪ್ರಾಣಕ್ಕೆ ಅಪಾಯವಾಗಲಿದೆ. ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಸಿಗುತ್ತಿದ್ದಾಗ ವಾರಕ್ಕೆ 3 ಬಾರಿ ನಯಾ ಪೈಸೆ ಖರ್ಚಿಲ್ಲದೆ ರೋಗಿಗಳು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಇದೇ ಸೇವೆಗೆ ಖಾಸಗಿಯಲ್ಲಿ 1,500 ರೂ. ವರೆಗೆ ಪಾವತಿಸಬೇಕು. ಪ್ರಸ್ತುತ ರಾಜ್ಯದಲ್ಲಿ ಕೇಂದ್ರಗಳು ಸ್ಥಗಿತವಾದರೆ ದಿನವೊಂದಕ್ಕೆ 3,700 ರೋಗಿಗಳು ಡಯಾಲಿಸಿಸ್ ಸೇವೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ 167 ಡಯಾಲಿಸಿಸ್ ಕೇಂದ್ರಗಳಿವೆ.
ರಾಜ್ಯದ ವಿವಿಧ ಡಯಾಲಿಸಿಸ್ ಕೇಂದ್ರಗಳಲ್ಲಿ ಸ್ಪಾಫ್ ನರ್ಸ್, ಲ್ಯಾಬ್ ಟೆಕ್ನಿಶನ್, ಡಿ ಗ್ರೂಪ್ ಸಹಿತ ಒಟ್ಟು 1,100 ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋಲ್ಕತಾ ಮೂಲದ ಏಜೆನ್ಸಿಯು ಗುತ್ತಿಗೆ ವಹಿಸಿಕೊಂಡ ಬಳಿಕ ಇಎಸ್‌ಐ-ಪಿಎಫ್ ವ್ಯವಸ್ಥೆ ಸ್ಥಗಿತಗೊಳಿಸಿದೆ. ಈ ಬಗ್ಗೆ ಸರಕಾರಕ್ಕೆ ದೂರು ನೀಡಿರುವುದರಿಂದ ಮಹಿಳಾ ಸಿಬಂದಿ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲಾಗುತ್ತಿದೆ ಎಂದು ಡಯಾಲಿಸಿಸ್ ಕೇಂದ್ರಗಳ ಸಿಬಂದಿ “ಉದಯವಾಣಿ’ಗೆ ತಿಳಿಸಿದ್ದಾರೆ. ಕೋಲ್ಕತಾದ ಏಜೆನ್ಸಿಯು 2018
ರಿಂದ 43 ಡಯಾಲಿಸಿಸ್ ಕೇಂದ್ರ ಗಳನ್ನು ಪಡೆದುಕೊಂಡಿದೆ. ಇವರಿಗೆ ಪಿಎಫ್, ಇಎಸ್‌ಐ ಪಾವತಿಯಾಗು ತ್ತಿದೆ. ಆದರೆ ಪರ್ಯಾಯವಾಗಿ ಗುತ್ತಿಗೆ ವಹಿಸಿಕೊಂಡ 124 ಕೇಂದ್ರಗಳ ಸಿಬಂದಿಗೆ ಈ ಸೌಲಭ್ಯ ಲಭ್ಯವಾಗುತ್ತಿಲ್ಲ. ನಮ್ಮ ಬೇಡಿಕೆಗೆ ಸ್ಪಂದಿಸಲಿದ್ದರೆ ಸೆ. 28ರಿಂದ ಡಯಾಲಿಸಿಸ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಡಯಾಲಿಸಿಸ್ ಸಂಘದ ಚೇತನ್ ತಿಳಿಸಿದರು.