ಶಿವಮೊಗ್ಗ: ನಗರದಲ್ಲಿ ಎರಡು ಕೋಮುಗಳ ನಡುವೆ ನಡೆದ ಗಲಾಟೆ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಸೆಕ್ಷನ್ 144 ನಿಷೇಧಾಜ್ಞೆಯನ್ನು ಮತ್ತೆ ವಿಸ್ತರಿಸಲಾಗಿದೆ. ಡಿ. 9 ರ ಬುಧವಾರ ಬೆಳಗ್ಗೆ 10 ಗಂಟೆವರೆಗೆ ವಿಸ್ತರಿಸಿ ತಹಶೀಲ್ದಾರ್ ಆದೇಶ ನೀಡಿದ್ದಾರೆ.
ಕಳೆದ ಗುರುವಾರ (ಡಿ.3) ದಂದು ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿತ್ತು. ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿ ಗಲಾಟೆ ಆರಂಭಗೊಂಡಿತ್ತು.
ಎರಡು ಕೋಮಿನ ನಡುವಿನ ಗಲಾಟೆ ನಿಯಂತ್ರಿಸಲು ಈ ಹಿಂದೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಡಿ. 3ರ ಮಧ್ಯಾಹ್ನದಿಂದ ಡಿ. 5ರ ಬೆಳಗ್ಗೆ 10 ರವರೆಗೆ ನಿಷೇಧಾಜ್ಞೆ ಜಾರಿಯಾಗಿತ್ತು. ಬಳಿಕ ಮತ್ತೊಮ್ಮೆ ಡಿ. 7 ರವರೆಗೆ ನಿಷೇಧಾಜ್ಞೆ ಅವಧಿ ವಿಸ್ತರಿಸಲಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಇದೀಗ ಮತ್ತೆ ನಿಷೇಧಾಜ್ಞೆಯನ್ನು ಬುಧವಾರದವರೆಗೆ ವಿಸ್ತರಿಸಲಾಗಿದೆ. ನಿಷೇಧಾಜ್ಞೆ ಮುಂದುವರಿಸುವಂತೆ ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ತಹಸೀಲ್ದಾರ್ ಎನ್ .ಜೆ.ನಾಗರಾಜ್ ಈ ಬಗ್ಗೆ ಆದೇಶಿಸಿದ್ದಾರೆ.