ಬೆಂಗಳೂರು: ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಆಧರಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸಕ್ತ ಸಾಲಿನ
ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಮತ್ತು ಅನುದಾನಿತ ಕಾಲೇಜಿನ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದೆ.
ಆದರೆ, ರಾಜ್ಯದ ಖಾಸಗಿ ವೃತ್ತಿಪರ ಕಾಲೇಜಿನ ಸರ್ಕಾರಿ ಕೋಟಾದ ಸೀಟ್ ಮ್ಯಾಟ್ರಿಕ್ಸ್ ಪ್ರಕಟವಾಗಿಲ್ಲ.ಖಾಸಗಿ ಕಾಲೇಜಿನಲ್ಲಿ ಅತಿ ಹೆಚ್ಚಿನ ಸೀಟು ಇರುವುದರಿಂದ ವಿದ್ಯಾರ್ಥಿಗಳಿಗೆ ಅದೇ ಅತಿ ಮುಖ್ಯವಾಗಿದೆ. ಜತೆಗೆ ವೈದ್ಯಕೀಯ ಹಾಗೂ ದಂತವೈದ್ಯಕೀಯ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಕೂಡ ಬಿಡುಗಡೆಯಾಗಿಲ್ಲ.
ಬಿಡುಗಡೆಯಾಗಿರುವ ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗೆ ಸಾಮಾನ್ಯ ಕೋಟಾದ 10,424, ಹೈದರಾಬಾದ್ ಕರ್ನಾಟಕ ಕೋಟಾದ 1666 ಹಾಗೂ ವಿಶೇಷ ಕೋಟಾದ 496 ಸೀಟು,ಆರ್ಕಿಟೆಕ್ಚರ್ ಕೋರ್ಸ್‌ಗೆ ಸಾಮಾನ್ಯ ಕೋಟಾದ 98,ಹೈ.ಕ. ಕೋಟಾದ 9 ಹಾಗೂ ವಿಶೇಷ ಕೋಟಾದ 7 ಸೀಟು ಲಭ್ಯವಿದೆ. ಬಿ.ಎಸ್ಸಿ ಕೃಷಿ ಮತ್ತು ಬಿ.ವಿ.ಎಸ್ಸಿ (ಪಶುವೈದ್ಯಕೀಯ) ಕೋರ್ಸ್‌ಗೆ ಸಾಮಾನ್ಯ ಕೋಟಾದ 1443, ಹೈ.ಕ.ಕೋಟಾದ 1021 ಹಾಗೂ ವಿಶೇಷ ಕೋಟಾದ 383 ಸೀಟುಗಳು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಗೂ ಅನುದಾನಿತ ವೃತ್ತಿಪರ ಕಾಲೇಜಿನಲ್ಲಿ ಸಿಗಲಿದೆ.