Advertisement

ಲೆಬನಾನ್‌ ಆಸ್ಪತ್ರೆಯಲ್ಲಿ ಆಮ್ಲಜನಕವೂ ಇಲ್ಲ, ಅರಿವಳಿಕೆಯೂ ಇಲ್ಲ !

10:25 AM Jun 20, 2020 | sudhir |

ಬೀರತ್‌: ಕೋವಿಡ್‌ನಿಂದಾಗಿ ಹಲವು ದೇಶಗಳ ವೈದ್ಯಕೀಯ ಪರಿಸ್ಥಿತಿ ಬಿಗಡಾಯಿಸಿದೆ. ಲೆಬನಾನ್‌ನಲ್ಲಂತೂ ಮತ್ತಷ್ಟು ಬಿಗಡಾಯಿಸಿದ್ದು, ಆಮ್ಲಜನಕವೂ ಇಲ್ಲ, ರೋಗಿಗಳಿಗೆ ಬೇಕಾದ ಅರಿವಳಿಕೆಯೂ ಇಲ್ಲ ಎನ್ನುವಂತಾಗಿದೆ.

Advertisement

ಇಡೀ ಲೆಬನಾನ್‌ಗೆ ಎರಡು ಕಂಪೆನಿಗಳು ಆಮ್ಲಜನಕವನ್ನು ಪೂರೈಸುತ್ತವೆ. ಅವುಗಳು ಆಮ್ಲಜನಕ ನೀಡಿ, ಅದರ ಬದಲಿಗೆ ಡಾಲರ್‌ ಲೆಕ್ಕದಲ್ಲಿ ನಗದು ಪಡೆಯುತ್ತವೆ. ಆದರೆ ಅವುಗಳ ಪೂರೈಕೆಯಲ್ಲಿ ಏರುಪೇರಾಗಿದೆ. ಹಾಗೆಯೇ ಲೆಬನಾನ್‌ ಆಸ್ಪತ್ರೆಗೆ ಅನೆಸ್ತೆಟಿಕ್‌ ಗ್ಯಾಸ್‌ ಪೂರೈಸುವ ಕಂಪೆನಿಗೆ ನೈಟ್ರಾಸ್‌ ಆಕ್ಸೆ„ಡ್‌ ಸರಿಯಾಗಿ ಪೂರೈಕೆಯಾಗದಿರುವುದರಿಂದ ಅರಿವಳಿಕೆ ಉತ್ಪಾದನೆಗೂ ಸಮಸ್ಯೆಯಾಗಿದೆ.

ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಹಣ ನೀಡಿಕೆಗೆ ಒಪ್ಪದ ಕಾರಣ ವೈದ್ಯಕೀಯ ಸಲಕರಣೆಗಳು, ಔಷಧ ಇತ್ಯಾದಿಗಳನ್ನು ಆಮದು ಮಾಡಿಕೊಳ್ಳುವ ಕಂಪೆನಿಗಳಿಗೆ ಸಮಸ್ಯೆಯಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ಲೆಬನಾನ್‌ನ ಎಲ್ಲ ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳನ್ನು ದಾಖಲು ಮಾಡುವುದನ್ನೇ ಕೈಬಿಟ್ಟಿವೆ. ಅಲ್ಲಿ 136 ಖಾಸಗಿ ಆಸ್ಪತ್ರೆಗಳಿದ್ದು, ಇದರಿಂದಾಗಿ ರೋಗಿಗಳು ಸಮಸ್ಯೆಗೊಳಗಾಗಿದ್ದಾರೆ. ಇದರೊಂದಿಗೆ ಖಾಸಗಿ ಆಸ್ಪತ್ರೆಗೆ ಸರಕಾರದ ವತಿಯಿಂದ ತಂದು ದಾಖಲಿಸಿದ ರೋಗಿಗಳ ವೆಚ್ಚಗಳನ್ನೂ ಸರಿಯಾಗಿ ನೀಡಲಾಗುತ್ತಿಲ್ಲ.

ಖಾಸಗಿ ಆಸ್ಪತ್ರೆಗಳಿಗೆ ಸರಕಾರ ಸುಮಾರು 9,880 ಕೋಟಿ ರೂ.ಗಳಷ್ಟು ಹಣವನ್ನು ಬಾಕಿ ಇರಿಸಿಕೊಂಡಿವೆ. 2011ರಿಂದ ಬಿಲ್‌ಗ‌ಳು ಬಾಕಿ ಇವೆ. ಸರಕಾರ ಆಮದು ಮಾಡಿದ ಔಷಧದ ಬಿಲ್ಲನ್ನೂ ಪಾವತಿಸಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಮೂಲಗಳು ಹೇಳಿವೆ. ಆದ್ದರಿಂದ ಯುದ್ಧದಿಂದ ತತ್ತರಿಸಿದ ಲೆಬನಾನ್‌ನಲ್ಲಿ ಇದೀಗ ಕೋವಿಡ್‌ ತಾಂಡವವಾಡುವ ಭೀತಿಯೂ ಕಾಣಿಸಿಕೊಂಡಿದೆ. ಇದೇ ವೇಳೆ ಸರಕಾರ-ಖಾಸಗಿ ಆಸ್ಪತ್ರೆಗಳ ನಡುವಿನ ಪ್ರಕರಣ ಕಾರಣ ರೋಗಿಗಳು ಉತ್ತಮ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next